janadhvani

Kannada Online News Paper

ಉಮ್ರಾ ವೀಸಾದಲ್ಲಿ ಜಿದ್ದಾ ಮತ್ತು ಮದೀನಾ ವಿಮಾನ ನಿಲ್ದಾಣಗಳಿಗೆ ಮಾತ್ರ ಟಿಕೆಟ್- ಆರೋಪ

ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಉಮ್ರಾ ಯಾತ್ರಿಕರು ಸೌದಿ ಅರೇಬಿಯಾದ ಯಾವುದೇ ವಿಮಾನ ನಿಲ್ದಾಣಕ್ಕೆ ಆಗಮಿಸಬಹುದು ಎಂದು ಘೋಷಿಸಿತ್ತು

ರಿಯಾದ್: ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಆಗಮಿಸಲು ಬಯಸುವವರಿಗೆ ವಿಮಾನಯಾನ ಕಂಪನಿಗಳು ಜಿದ್ದಾ ಮತ್ತು ಮದೀನಾ ವಿಮಾನ ನಿಲ್ದಾಣಗಳಿಗೆ ಮಾತ್ರ ಟಿಕೆಟ್ ನೀಡುತ್ತೆವೆ ಎಂಬ ಆರೋಪಗಳು ಕೇಳಿ ಬಂದಿದೆ.

ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಉಮ್ರಾ ಯಾತ್ರಿಕರು ಸೌದಿ ಅರೇಬಿಯಾದ ಯಾವುದೇ ವಿಮಾನ ನಿಲ್ದಾಣಕ್ಕೆ ಆಗಮಿಸಬಹುದು ಎಂದು ಘೋಷಿಸಿತ್ತು, ಆದರೆ ಈ ಬಗ್ಗೆ ವಿಮಾನಯಾನ ಸಂಸ್ಥೆಗಳಿಗೆ ಇನ್ನೂ ಸೂಚನೆ ನೀಡಲಾಗಿಲ್ಲ. ನಾಗರಿಕ ವಿಮಾನಯಾನ ಜನರಲ್ ಅಥಾರಿಟಿಯಿಂದ ಸೂಚನೆ ಲಭಿಸಿದ ಬಳಿಕವಷ್ಟೇ ವಿಮಾನಯಾನ ಸಂಸ್ಥೆಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎನ್ನಲಾಗಿದೆ.

ಉಮ್ರಾ ವೀಸಾ ಹೊಂದಿರುವವರಿಗೆ ಸೌದಿ ಅರೇಬಿಯಾದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಆಗಮನ ಮತ್ತು ನಿರ್ಗಮನಕ್ಕೆ ಅವಕಾಶವಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಸ್ಪಷ್ಟಪಡಿಸಿದೆ. ಹಜ್ ಸಚಿವಾಲಯವು ತನ್ನ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಇದನ್ನು ಪ್ರಕಟಿಸಿದೆ.

ಇದರೊಂದಿಗೆ, ಈ ವರ್ಷ ಮೂರು ತಿಂಗಳ ಅವಧಿಯ ಉಮ್ರಾ ವೀಸಾಗಳನ್ನು ನೀಡಲಾಗಿದ್ದು, ಸೌದಿ ಅರೇಬಿಯಾದ ಯಾವುದೇ ಪ್ರದೇಶಕ್ಕೆ ಉಮ್ರಾ ಯಾತ್ರಿಕರು ಭೇಟಿ ನೀಡಬಹುದು ಎಂದು ಸ್ಪಷ್ಟಪಡಿಸಲಾಗಿದೆ.

error: Content is protected !! Not allowed copy content from janadhvani.com