ಬದ್ರಿಯಾ ಜುಮಾ ಮಸೀದಿ ಕುಲಾಲಿ ನಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ನಡೆಯಿತು.ಮಸೀದಿ ಅಧ್ಯಕ್ಷರಾದ ಅಹಮದ್ ಅವರು ಧ್ವಜಾರೋಹಣ ಮಾಡಿದರು.
ಕುಲಾಲು ಜುಮಾ ಮಸೀದಿ ಖತೀಬರು ಆದ ಮಸೂದು ಸಅದಿ ಉಸ್ತಾದರು ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ವಿವರಿಸಿ ಮಕ್ಕಳಿಗೆ ಸಂದೇಶ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮದರಸ ಮುಅಲ್ಲಿಂ ಮಹಮ್ಮದ್ ಶಿಹಾಬುದ್ದೀನ್ ಸಅದಿ, ಕಾರ್ಯದರ್ಶಿ ಕರೀಂ, ಕೋಶಾದಿಕಾರಿ ಸಾದು ಮೋನು,ಸದಸ್ಯರಾದ ಇಬ್ರಾಹೀಂ, ಅಬ್ದುಲ್ಲಾ,ಜಮಾಅತಿನ ಪದಾಧಿಕಾರಿಗಳು ಹಾಗೂ ಜಮಾಅತ್ ಬಾಂದವರಾದ ಅಶ್ರಫ್ ಜೋಕಟ್ಟ, ರಮ್ಲಾನ್, ಇಲ್ಯಾಸ್ ಕುಂಟಲ್ ಪಲಿಕೆ, SSF ಕುಲಾಲು ಶಾಖೆಯ ಕಾರ್ಯದರ್ಶಿ ಸಂಶೀರ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾಗಿರವವರಿಗೆ ಬಹುಮಾನ ವಿತರಿಸಲಾಯಿತು.