janadhvani

Kannada Online News Paper

ಕೊಯ್ಯೂರು : ಉಣ್ಣಾಲು ಮಸೀದಿ ವಠಾರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ

ಕೊಯ್ಯೂರು : ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸಿರಾಜುಲ್ ಹುದಾ ಮಸೀದಿ ಉಣ್ಣಾಲು ಇಲ್ಲಿನ ವಠಾರದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

SSF,SYS,SBS ಕಾರ್ಯಕರ್ತರು, ಜಮಾಅತ್ ಕಮಿಟಿಯ ನಾಯಕರು ಊರಿನ ಹಿರಿಯ ಕಿರಿಯ ನಾಗರಿಕರು ಭಾಗವಹಿಸಿದ ಪ್ರಸ್ತುತ ಕಾರ್ಯಕ್ರಮವನ್ನು ಉಣ್ಣಾಲು ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾದ ಲತೀಫ್ ಉಣ್ಣಾಲು ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು.

ಜಮಾಅತ್ ನ ಗೌರವಾನ್ವಿತ ಖತೀಬ್ ಉಸ್ತಾದ್ ಜುನೈದ್ ರಝಾ ಅಲ್ ಅಝ್ಹರಿ ಪ್ರಾರ್ಥನೆ ನಿರ್ವಹಿಸಿ ಸಂದೇಶ ಭಾಷಣ ಮಾಡಿದರು, ಅಧ್ಯಾಪಕರಾದ ಫಾರೂಖ್ ಸ‌ಅದಿ ಉಸ್ತಾದ್ ಪ್ರತಿಜ್ಞಾ ವಿಧಿ ಬೋಧಿಸಿದರು.

SBS ಅಧ್ಯಕ್ಷರಾದ ಮುಸ್ತಫಾ ಸ್ವಾಗತಿಸಿ ರಹ್ಮಾನ್ ನಿರೂಪಿಸಿದರು SSF ಕೊಯ್ಯೂರು ಶಾಖೆ ಯ ಅಧ್ಯಕ್ಷರಾದ ಖಾದರ್ ಅಮ್ಜದಿ ಕಾರ್ಯದರ್ಶಿ ಅಮೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಮಾಅತ್ ಕಮಿಟಿಯ ಪ್ರ.ಕಾರ್ಯದರ್ಶಿ ಬಶೀರ್ ಉಣ್ಣಾಲು, ಕೋಶಾಧಿಕಾರಿ ಅಬ್ಬಾಸ್ ಸಹಿತ ಊರಿನ ಪ್ರಮುಖರು ಉಪಸ್ಥಿತರಿದ್ದರು.ಅಹಮದ್ ಬಾರಿಹ್ ವಂದಿಸಿದರು .