ನವದೆಹಲಿ: 12,000 ರೂಪಾಯಿಗಿಂತ (150 ಡಾಲರ್) ಕಡಿಮೆ ಬೆಲೆಯ ಚೀನಾದ ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಮಾರಾಟ ಮಾಡದಂತೆ ನಿರ್ಬಂಧ ಹೇರಲು ಸರಕಾರ ಮುಂದಾಗಿದೆ.
ತತ್ತರಿಸಿರುವ ಪ್ರಾದೇಶಿಕ ಸ್ಮಾರ್ಟ್ಫೋನ್ ತಯಾರಿಕಾ ಕೈಗಾರಿಕೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಈ ಕ್ರಮ ಎನ್ನಲಾಗುತ್ತಿದೆ. ಇದರಿಂದಾಗಿ ಶವೋಮಿ ಕಾರ್ಪೊರೇಷನ್ ಸೇರಿದಂತೆ ದೇಶದಲ್ಲಿ ವ್ಯಾಪಿಸಿರುವ ಚೀನಾದ ಸ್ಮಾರ್ಟ್ಫೋನ್ ಕಂಪನಿಗಳಲ್ಲಿ ತಲ್ಲಣ ಸೃಷ್ಟಿಯಾಗಿದೆ.
ಜಗತ್ತಿನ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಕಡಿಮೆ ಬೆಲೆ ಶ್ರೇಣಿಯ ಸ್ಮಾರ್ಟ್ಫೋನ್ ಮಾರಾಟದಿಂದ ಚೀನಾದ ಬೃಹತ್ ಕಂಪನಿಗಳನ್ನು ದೂರ ಸರಿಸಲು ಕ್ರಮವಹಿಸಲಾಗುತ್ತಿದೆ ಎಂದು ವರದಿಯಾಗಿದೆ. ಸ್ಥಳೀಯವಾಗಿ ತಯಾರಿಸುವ ಫೋನ್ಗಳಿಗಿಂತ ಕಡಿಮೆ ದರದಲ್ಲಿ ರಿಯಲ್ಮಿ ಮತ್ತು ಟ್ರಾನ್ಸಿಷನ್ ಫೋನ್ಗಳು ಗ್ರಾಹಕರಿಗೆ ತಲುಪುತ್ತಿವೆ. ಇದರಿಂದಾಗಿಯೂ ಪ್ರಾದೇಶಿಕ ಕೈಗಾರಿಕೆಯ ಮೇಲೆ ಪರಿಣಾಮ ಬೀರಿದೆ.
ಶವೋಮಿಯಂತಹ ಚೀನಾದ ಹಲವು ಕಂಪನಿಗಳು ಭಾರತದಲ್ಲಿ ಆರಂಭಿಕ ಶ್ರೇಣಿಯ ಫೋನ್ಗಳ ಮಾರುಕಟ್ಟೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡಿವೆ. ಚೀನಾದಲ್ಲಿ ನಿರಂತರ ಕೋವಿಡ್-19 ಲಾಕ್ಡೌನ್ ನಿರ್ಬಂಧಗಳಿಂದಾಗಿ ಫೋನ್ಗಳ ಮಾರಾಟದ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಭಾರತದಲ್ಲಿ ಮಾರಾಟವು ಸತತ ಏರುಗತಿಯಲ್ಲಿದೆ.
2022ರ ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲಿ ಮಾರಾಟವಾಗಿರುವ ಸ್ಮಾರ್ಟ್ಫೋನ್ಗಳ ಪೈಕಿ ಮೂರನೇ ಒಂದರಷ್ಟು 12,000 ರೂಪಾಯಿಗಿಂತ ಕಡಿಮೆ ಶ್ರೇಣಿಯ ಫೋನ್ಗಳು. ಅವುಗಳಲ್ಲಿ ಶೇಕಡ 80ರಷ್ಟು ಫೋನ್ಗಳು ಚೀನಾದ ಕಂಪನಿಗಳಿಂದ ಬಂದಿರುವುದಾಗಿ ‘ಕೌಂಟರ್ಪಾಯಿಂಟ್’ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೈಗೊಂಡಿರುವ ನಿರ್ಣಯವನ್ನು ಚೀನಾದ ಕಂಪನಿಗಳಿಗೆ ಅಧಿಕೃತ ನಿಯಮಾವಳಿಗಳ ಮೂಲಕ ನಿರ್ಬಂಧಗಳನ್ನು ಜಾರಿಗೊಳಿಸುತ್ತದೆಯೇ ಅಥವಾ ಇನ್ನಾವುದೇ ಮಾರ್ಗದಲ್ಲಿ ನಿಯಂತ್ರಣವನ್ನು ಹೇರಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಶವೋಮಿ, ಓಪ್ಪೊ ಹಾಗೂ ವಿವೋ ಕಂಪನಿಗಳ ಹಣಕಾಸು ವಹಿವಾಟಿನ ಮೇಲೆ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯವು ಕಣ್ಣಿಟ್ಟಿದೆ. ಹಣ ಅಕ್ರಮ ವರ್ಗಾವಣೆ ಹಾಗೂ ತೆರಿಗೆ ವಂಚನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಆ ಕಂಪನಿಗಳ ಹಲವು ಕಚೇರಿಗಳಲ್ಲಿ ದಾಳಿ ನಡೆಸಲಾಗಿದೆ. ಈ ಹಿಂದೆ ಸರಕಾರವು ಹುವಾವೆ ಟೆಕ್ನಾಲಜೀಸ್ ಹಾಗೂ ಝಡ್ಟಿಇ ಕಾರ್ಪೊರೇಷನ್ ಕಂಪನಿಗಳ ಸಾಧನಗಳ ಮೇಲೆ ನಿಯಂತ್ರಣ ಹೇರಿದೆ. ಚೀನಾದ ಟಿಕ್ಟಾಕ್, ವಿಚ್ಯಾಟ್ ಸೇರಿದಂತೆ 300ಕ್ಕೂ ಅಧಿಕ ಅಪ್ಲಿಕೇಷನ್ಗಳನ್ನು ಭಾರತವು ನಿರ್ಬಂಧಿಸಿದೆ.
ಈ ಹೊಸ ಕ್ರಮದಿಂದ Apple ಅಥವಾ ಸ್ಯಾಮ್ಸಂಗ್ ಕಂಪನಿಗಳ ಫೋನ್ಗಳ ಮಾರಾಟಕ್ಕೆ ಅಡಚಣೆಯಾಗುವುದಿಲ್ಲ.
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)