janadhvani

Kannada Online News Paper

ಬಹರೈನ್ ಕೆ.ಸಿ.ಎಫ್ ವತಿಯಿಂದ ಇಸ್ರಾಹ್ ಹಾಗೂ ಮಿಹ್ರಾಜ್ ಅಧ್ಯಯನ ತರಗತಿ

ಬಹರೈನ್ :  ಕೆ.ಸಿ.ಎಫ್ ಬಹರೈನ್ ವತಿಯಿಂದ ಇಸ್ರಾಹ್ ಹಾಗೂ ಮಿಹ್ರಾಜ್ ತರಗತಿ ಹಾಗೂ ದುವಾ ಸಂಗಮವು ಕಳೆದ ಶುಕ್ರವಾರ ಕೆ.ಸಿ.ಎಫ್ ಸೆಂಟರ್ ಮನಾಮದಲ್ಲಿ ಜರುಗಿತು. ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ಇಕ್ಬಾಲ್ ಮಂಜನಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಸಮದ್ ಉಜಿರೆಬೆಟ್ಟು ಕಿರಾಹತ್ ಪಠಿಸಿದರು. ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಚೇರ್ಮ್ಯಾನ್ ಕಲಂದರ್ ಷರೀಫ್ ಕಕ್ಕೆಪದವು ಸ್ವಾಗತ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ರಿಸಾಲ ಸ್ಟಡಿ ಸರ್ಕಲ್ ಬಹರೈನ್ ರಾಷ್ಟ್ರೀಯ ಸಮಿತಿ ಚೇರ್ಮ್ಯಾನ್ ಅಬ್ದುರ್ರಹೀಮ್ ಸಖಾಫಿ ಇಸ್ರಾಹ್ ಮಿಹ್ರಾಜ್ ಅದ್ಭುತ ಯಾತ್ರೆಯ ಬಗ್ಗೆ ಸಮಗ್ರವಾಗಿ ವಿವರಿಸಿದರು.ಮುಖ್ಯ ಅತಿಥಿ ಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಅಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಉಸ್ತಾದರು ಸಂಘಟನಾ ಕಾರ್ಯಾಚರಣೆಯ ಮಹತ್ವವನ್ನು ವಿವರಿಸಿದರು.


ಸಭೆಯಲ್ಲಿ ಅಹ್ಮದ್ ಮುಸ್ಲಿಯಾರ್ ಗಟ್ಟಮನೆ, ಹನೀಫ್ ಮುಸ್ಲಿಯಾರ್ ರೆಂಜ,ಮುಹಮ್ಮದ್ ಅಲಿ ಮುಸ್ಲಿಯಾರ್ ವೇನೂರ್, ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಎಸ್.ಎಂ, ಕೆ.ಸಿ.ಎಫ್ ಐಎನ್ಸಿ ಲೀಡರ್ ಜಮಾಲುದ್ದೀನ್ ವಿಠ್ಠಲ್,ಐಎನ್ಸಿ ಸದಸ್ಯರಾದ ಬಶೀರ್ ಕಾರ್ಲೆ,ಕೆ.ಸಿ.ಎಫ್ ಬಹರೈನ್ ಖಜಾಂಜಿ ಅಝೀಝ್ ಸುಳ್ಯ,ಕೆ.ಸಿ.ಎಫ್ ರಾಷ್ಟೀಯ ಸಮಿತಿ ಇಹ್ಸಾನ್ ಚೇರ್ಮ್ಯಾನ್ ಹನೀಫ್ ಕಿನ್ಯ,ಇಹ್ಸಾನ್ ಕಾರ್ಯದರ್ಶಿ ಮಜೀದ್ ಮಾದಪುರ,ಸಾಂತ್ವನ ವಿಭಾಗದ ಚೇರ್ಮ್ಯಾನ್ ಕರೀಂ ಉಚ್ಚಿಲ, ಕಾರ್ಯದರ್ಶಿ ಅಶ್ರಫ್ ಕಿನ್ಯ, ಪಬ್ಳಿಕ್ ರಿಲೀಶನ್ ಕಾರ್ಯದರ್ಶಿ ಲತೀಫ್ ಪೆರೋಲಿ,ಐ ಟೀಮ್ ಚೇರ್ಮ್ಯಾನ್ ರಿಯಾಜ್ ಸುಳ್ಯ, ಕೆ.ಸಿ.ಎಫ್ ನೋರ್ತ್ ಝೋನ್ ಅದ್ಯಕ್ಶರಾದ ಹನೀಫ್ ಗುರುವಾಯನಕೆರೆ,ಪ್ರಧಾನ ಕಾರ್ಯದರ್ಶಿ ಅಝೀಮ್ ಕಾಪು,ಖಜಾಂಜಿ ಮುಝಮ್ಮಿಲ್ ಕೋಲ್ಪೆ, ಕೆ.ಸಿ.ಎಫ್ ಸೌತ್ ಝೋನ್ ಅದ್ಯಕ್ಶರಾದ ಮನ್ಸೂರ್ ಬೆಲ್ಮ ಹಾಗೂ ಎಲ್ಲಾ ಸೆಕ್ಟರ್ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇಫ್ತಾರ್ ಕೂಟದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು. ಸೌತ್ ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ರೆಂಜಾಡಿ ಕಾರ್ಯಕ್ರಮ ನಿರ್ವಹಿಸಿದರು.

error: Content is protected !! Not allowed copy content from janadhvani.com