ಮಂಗಳೂರು: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ರಾಷ್ಟ್ರ ಭಕ್ತಿಯೊಂದಿಗೆ ರಾಜ್ಯದ ಸರ್ವ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಮದರಸ ಸಂಸ್ಥೆಗಳು ಒಂದು ವಾರ ತ್ರಿವರ್ಣ ದ್ವಜಾರೋಹಣ ಮಾಡುವ ಮೂಲಕ ಆಚರಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ರವರು ಸರಕಾರದ ಪರವಾಗಿ ಆದೇಶಿಸುತ್ತಾರೆ.
ವಿಪರ್ಯಾಸ ಎಂದರೆ ಬಿ.ಜೆ.ಪಿ ಆಡಳಿತವಿರುವ ಯೋಗಿ ನೇತೃತ್ವದ ಉತ್ತರ ಪ್ರದೇಶ ಸರಕಾರ ಈ ವರ್ಷದ ಸ್ವಾತಂತ್ರ್ಯದ ರಜೆಯನ್ನೇ ರದ್ದುಗೊಳಿಸಿದೆ.
ಈ ದೇಶದ ಸ್ವಾತಂತ್ರ್ಯ ಗಳಿಕೆಗಾಗಿ ಈ ದೇಶದ ಮುಸ್ಲಿಮರು, ಇತರ ಸಮುದಾಯದ ಹೋರಾಟಗಾರ ರೊಂದಿಗೆ , ತಮ್ಮ ಜೀವದ ಹಂಗು ತೊರೆದು ಹೋರಾಡಿ ಪ್ರಾಣವನ್ನೇ ಅರ್ಪಿಸಿ ಭಾರತದ ಸ್ವಾತಂತ್ರ್ಯವನ್ನು ಗಳಿಸಲಾಗಿದೆ.
ಈ ದೇಶದಲ್ಲಿ ಮುಸ್ಲಿಮರು ಹುಟ್ಟಿನಿಂದಲೇ ನಾಡ ಪ್ರೇಮಿಗಳು ಹುಟ್ಟಿದ ಮಣ್ಣಿಗೆ ಗೌರವ ನೀಡುವ ವಿದ್ಯೆಯನ್ನು ಪ್ರತಿಯೊಬ್ಬ ಮುಸ್ಲಿಮನು ಮದರಸದಿಂದಲೇ ಕಲಿಯುತ್ತಾನೆ. ಈ ದೇಶದ, ಮಣ್ಣಿನ ರಕ್ಷಣೆಯು ಮುಸ್ಲಿಮರ ಜೀವನದ, ಧರ್ಮದ ಭಾಗವಾಗಿದೆ.ಇಸ್ಲಾಮ್ ಅದನ್ನೇ ಕಲಿಸುತ್ತದೆ.ಈ ಬಗ್ಗೆ ಯಾರಿಗೂ ಸಂಶಯ ಬೇಡ ಈ ದೇಶದ ಪ್ರತಿಯೊಬ್ಬ ಮುಸ್ಲಿಮರು ದೇಶಪ್ರೇಮಿಗಳು.
ಅನಾದಿ ಕಾಲದಿಂದಲೂ ಈ ದೇಶದ ಸಂಸ್ಕೃತಿ, ಸಂಕೇತ, ದ್ವಜಗಳಿಗೆ ಮುಸ್ಲಿಮರು ಗೌರವ ಪಾಲನೆ ಗೊಳಿಸುತ್ತಾ ಬಂದಿರುತ್ತಾರೆ. ಮುಂದೆಯು ಗೌರವ ಸಲ್ಲಿಸಲಿದ್ದಾರೆ. ಈ ದೇಶದ ಪ್ರತಿ ಮದರಸ , ಧಾರ್ಮಿಕ ಸಂಸ್ಥೆಗಳಲ್ಲಿ ಅದೆಷ್ಟೋ ವರ್ಷಗಳಿಂದ ಈ ದೇಶದ ತ್ರಿವರ್ಣ ದ್ವಜ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಆರೋಹಣ ಗೊಳ್ಳುತ್ತಿದೆ. ಈ ಬಗ್ಗೆ ಸರಕಾರ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ.
ಈ ದೇಶದ ಧಾರ್ಮಿಕ ಸಂಸ್ಥೆ, ಮದರಸ ಮಾತ್ರವಲ್ಲದೆ, ಪ್ರತಿ ಮುಸ್ಲಿಮ್ ಮೊಹಲ್ಲಾಗಳ ಪ್ರತಿ ಸೇವಾ ಸಂಘಟನೆಗಳು, ರಾಷ್ಟ್ರ ದ್ವಜವನ್ನು ಅತ್ಯಂತ ಗೌರವ ಪೂರಕವಾಗಿ ಹಾರಾಟ ನಡೆಸುತ್ತಿದೆ, ಇನ್ನೂ ನಡೆಸಲಿದೆ. ಆದರೆ ಇಲ್ಲಿ ಗೊಂದಲ ಇರುವುದು, ಸ್ವಾತಂತ್ರ್ಯ ದಿನದಂದು ಆರ್. ಎಸ್. ಎಸ್. ಶಾಖೆಗಳಲ್ಲಿ ಈ ದೇಶದ ಸ್ವಾತಂತ್ರ್ಯ ದ ಸಂಕೇತವಾಗಿರುವ ತ್ರಿವರ್ಣ ದ್ವಜ ಹಾರಿಸಲು ಸಚಿವರಾದ ನಾಗೇಶ್ ಜೀ ರವರು ತನ್ನ ಸಂಘ ಸಹಪಾಠಿಗಳಿಗೆ ಸೂಚನೆ ನೀಡಬೇಕಿದೆ.
ಮುಂದುವರಿದು, ತನ್ನ ಆರ್. ಎಸ್. ಎಸ್. ಶಾಖೆಗೆ ಸಲಹೆ ನೀಡಿ, ಸರಕಾರಿ ಶಿಕ್ಷಣ ಸಂಸ್ಥೆಗಳ ದ್ವಜ ಸ್ತಂಭಗಳಲ್ಲಿ ಭಗವಾ ದ್ವಜ ಹಾರಾಟ ಮಾಡುವಂತಹ ದುಷ್ಕೃತ್ಯಕ್ಕೆ ಕೈ ಹಾಕದಂತೆ ಮುಂಜಾಗ್ರತೆ ವಹಿಸ ಬೇಕಿದೆ.
ಇಲ್ಲಿ ಮುಸ್ಲಿಮರ ಮದರಸಾಗಳಲ್ಲಿ ದ್ವಜಾರೋಹಣ ಮಾಡಬೇಕೆಂದು ಆದೇಶ ನೀಡುವ ಶಿಕ್ಷಣ ಸಚಿವರು ತಮ್ಮ ಸಂಘದ ರಾಷ್ಟ್ರ ಪ್ರೇಮವನ್ನು ಪ್ರದರ್ಶಿಸಲು ತಯಾರಾಗಲಿ. ಈ ದೇಶದ ಮುಸ್ಲಿಮರು ಈ ಮಣ್ಣಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ , ಮುಂದಿನ ಸ್ವಾತಂತ್ರ್ಯಾ ದಿನಾಚರಣೆ ಈ ದೇಶದ ಮುಸ್ಲಿಮರ ದೇಶಪ್ರೇಮವನ್ನು ಅಧಿಕ ಗೊಳಿಸಲಿದೆ.
ಕೆ.ಅಶ್ರಫ್.
ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.