ಬೆಂಗಳೂರು,ಜುಲೈ.17: ಬೆಲೆಯೇರಿಕೆಯನ್ನೇ ಬಂಡವಾಳವಾಗಿಸಿರುವ ಕೇಂದ್ರದ ಬಿಜೆಪಿ ಸರ್ಕಾರವು ಬಡವರ ನಿತ್ಯ ಜೀವನವನ್ನೇ ಬುಡಮೇಲು ಮಾಡಿದೆ. ದೇಶದ ಶ್ರೀ ಸಾಮಾನ್ಯರಿಗೆ ಕೇಂದ್ರ ಸರ್ಕಾರ ಈಗ ಮತ್ತೊಂದು ಶಾಕ್ ಕೊಟ್ಟಿದೆ. ನಾಳೆಯಿಂದ ಅಗತ್ಯ ವಸ್ತುಗಳು, ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ಬರೆ ಬೀಳ್ತಿದ್ದು, ದುನಿಯಾ ಮತ್ತಷ್ಟು ದುಬಾರಿಯಾಗಲಿದೆ. ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ.
ಯಾವುದೆಲ್ಲಾ ದುಬಾರಿ?
- ಪ್ಯಾಕ್ ಮಾಡಿದ ಆಹಾರ ವಸ್ತು. ( ಮೀನು, ಮಾಂಸ, ಒಣಗಿಸಿದ ತರಕಾರಿ, ಜೇನುತುಪ್ಪ, ಬೆಲ್ಲ, ತುಪ್ಪ, ಅಕ್ಕಿ, ಗೋಧಿ ಸೇರಿ ಇತರೆ ಧಾನ್ಯಗಳು) ದುಬಾರಿಯಾಗಲಿವೆ.
- ಎಲ್‌ಇಡಿ ಬಲ್ಬ್, ಲ್ಯಾಂಪ್‌ಗಳ ಮೇಲೂ 18 ಪರ್ಸೆಂಟ್‌ನಷ್ಟು ಜಿಎಸ್‌ಟಿ ವಿಧಿಸಲಾಗಿದೆ.
- ಅಸ್ಪತ್ರೆಯಲ್ಲಿ 5 ಸಾವಿರ ರೂಪಾಯಿ ಮೇಲ್ಪಟ್ಟ ಸ್ಪೆಷಲ್ ವಾರ್ಡ್‌ಗೂ 5 ಪರ್ಸೆಂಟ್ ತೆರಿಗೆ ಬೀಳಲಿದೆ.
- ಚೆಕ್ ಬುಕ್ ಜಾರ್ಜ್ ಕೂಡಾ 18 ಪರ್ಸೆಂಟ್ ಹೆಚ್ಚಾಗಲಿದೆ.
- 1 ಸಾವಿರ ರೂಪಾಯಿ ಒಳಗಿನ ಹೋಟೆಲ್ ರೂಮ್‌ಗಳಿಗೂ 12 ಪರ್ಸೆಂಟ್ ಜಿಎಸ್‌ಟಿ ಇರಲಿದೆ.
- ಕ್ಯಾಸಿನೋ, ಆನ್‌ಲೈನ್ ಗೇಮ್ ಆಡೋರಿಗೂ ಟ್ಯಾಕ್ಸ್ ಬರೆ ಬಿದ್ದಿದ್ದು, ಬರೋಬ್ಬರಿ 28 ಪರ್ಸೆಂಟ್ ಜಿಎಸ್‌ಟಿ ಹಾಕಲಾಗಿದೆ.
- ಇನ್ನುಳಿದಂತೆ, ಸೋಲಾರ್ ವಾಟರ್ ಹೀಟರ್, ಇಂಕ್, ಚರ್ಮದ ಉತ್ಪನ್ನ, ಟೈಲರಿಂಗ್, ಜವಳಿ ಸೇವೆ, ಬಾಡಿಗೆ ರೂಮ್ ನೀಡುವ ಧಾರ್ಮಿಕ ಕೇಂದ್ರಗಳು, ಬಾಡಿಗೆ ವಿಧಿಸುವ ವಾಣಿಜ್ಯ ಕೇಂದ್ರಗಳಿಗೂ ಟ್ಯಾಕ್ಸ್ ಹೊರೆಬಿದ್ದಿದೆ.
ಸದ್ಯದ ದರ ಹಾಗೂ ನಾಳೆ ಜಿಎಸ್ಟಿ ಸೇರಿಸಿದ್ರೆ ದರದ ಮಾಹಿತಿ
- ನಾಳೆಯಿಂದ ಮೊಸರು, ಮಜ್ಜಿಗೆ, ಲಸ್ಸಿ ಬೆಲೆ ಹೆಚ್ಚಳ
- ಅಕ್ಕಿ- 1 ಕೆಜಿಗೆ- 50 ರೂಪಾಯಿ, 10 ಕೆಜಿಗೆ- 500 ರೂಪಾಯಿ, ಜಿಎಸ್ಟಿ ಸೇರಿಸಿದ್ರೆ- 10 ಕೆಜಿಗೆ- 525, ರೂಪಾಯಿ 5%
- ಹೆಸರು ಬೆಳೆ- 1 ಕೆಜಿಗೆ- 110 ರೂಪಾಯಿ, 10 ಕೆಜಿಗೆ- 1100 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1155
- ತೊಗರಿಬೆಳೆ- ಕೆಜಿಗೆ- 100 ರೂಪಾಯಿ, 10 ಕೆಜಿಗೆ- 1000 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1050 ರುಪಾಯಿ
- ಉದ್ದಿನಬೆಳೆ ಕೆಜಿಗೆ- 120 ರೂಪಾಯಿ, 10 ಕೆಜಿಗೆ- 1200 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1260
- ಹೆಸರು ಕಾಲು ಕೆಜಿಗೆ- 100 ರೂಪಾಯಿ, 10 ಕೆಜಿಗೆ- 1000. ಜಿಎಸ್ಟಿ ಸೇರಿಸಿದ್ರೆ- 1050 ರೂಪಾಯಿ
- ಕಡಲೆ ಬೇಳೆ ಕೆಜಿಗೆ- 75 ರೂಪಾಯಿ, 10 ಕೆಜಿಗೆ- 750 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 787
- ಕಡಲೆಕಾಳು ಕೆಜಿಗೆ- 65 ರೂಪಾಯಿ, 10 ಕೆಜಿಗೆ- 650 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 682 ರೂಪಾಯಿ
- ಹುರಿಕಡಲೆ ಕೆಜಿಗೆ- 80 ರೂಪಾಯಿ, 10 ಕೆಜಿಗೆ- 800 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ-840
- ಉದ್ದಿನ ಕಾಲು- 110 ರೂಪಾಯಿ, 10 ಕೆಜಿಗೆ- 1100 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1155 ರೂಪಾಯಿ
- ಹಲಸಂದೆ ಕಾಲು ಕೆಜಿಗೆ- 90 ರೂಪಾಯಿ, 10 ಕೆಜಿಗೆ- 900 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 945 ರೂಪಾಯಿ
- ಕಾಬೂಲ್ ಕಡಲೆ ಕೆಜಿಗೆ- 120 ರೂಪಾಯಿ, 10 ಕೆಜಿಗೆ- 1200. ಜಿಎಸ್ಟಿ ಸೇರಿಸಿದ್ರೆ- 1260
- ಬಟಾಣಿ ಕೆಜಿಗೆ- 85 ರೂಪಾಯಿ, 10 ಕೆಜಿಗೆ- 850 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 892
- ಬೆಲ್ಲ ಕೆಜಿಗೆ- 60 ರೂಪಾಯಿ, 10 ಕೆಜಿಗೆ- 600 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 630 ರೂಪಾಯಿ
- ಗೋದಿ ಹಿಟ್ಟು ಕೆಜಿಗೆ- 45 ರೂಪಾಯಿ, ಹತ್ತು ಕೆಜಿಗೆ-450 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ-472 ರೂಪಾಯಿ
ಬಿಜೆಪಿ ಆಡಳಿತವಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾದರೆ, ಅವರ ಸೂರನ್ನೇ ನುಚ್ಚುನೂರು ಮಾಡುವ “ಬುಲ್ಡೋಜರ್ ರಾಜಕೀಯ” ವನ್ನು ಮುಂದಿಟ್ಟು, ಬಡ ಜನರ ಸದ್ದಡಿಗಿಸಲು ಸರ್ಕಾರ ಮುಂದಾಗಿದೆ.
ದೇಶದಲ್ಲಿನ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಕೇಂದ್ರದ ಜನವಿರೋಧಿ ನೀತಿಯನ್ನು ಖಂಡಿಸಬೇಕಾದ ಅನಿವಾರ್ಯತೆ ಇದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ