ವಿಟ್ಲ : ವಿಟ್ಲ ರೀಜಿನಲ್ ಎಸ್ ಎಂ ಎ ವತಿಯಿಂದ ಸ್ವಚ್ಛ ಕುಟುಂಬ ಸ್ವಸ್ಥ ಸಮಾಜ ಎಂಬ ಕಾರ್ಯಕ್ರಮ ವಿಟ್ಲ ರೀಜಿನಲ್ ವ್ಯಾಪ್ತಿಯ ಮೊಹಲ್ಲಾಗಳಲ್ಲಿ ಸಂದರ್ಶನ ನಡೆಸಿ ಇದರ ರೀಜಿನಲ್ ಮಟ್ಟದ ಸಮಾರೋಪ ಸಮಾರಂಭ ವಿಟ್ಲ ಬ್ರೈಟ್ ಆಡಿಟೋರಿಯಂ ಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ SMA ರಾಜ್ಯ ಉಪಾಧ್ಯಕ್ಷರಾದ ಹಾಜಿ ಹಮೀದ್ ಕೊಡಂಗಾಯಿ, ಜಮಾತ್ ಆಡಳಿತ ಸಮಿತಿ ಗಳಿಂದ ಮುಸ್ಲಿಂ ಸಮಾಜದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಹೆತ್ತವರು ವಿದ್ಯಾರ್ಥಿಗಳಿಗೆ ಧಾರ್ಮಿಕ, ಲೌಕಿಕ ಶಿಕ್ಷಣವನ್ನು ನೀಡಿ ಯುವ ಸಮೂಹವನ್ನು ಮುಖ್ಯವಾಹಿನಿಗೆ ತರಲು ಮುಂದಾಗಬೇಕು ಎಂದರು. ಈ ನಿಟ್ಟಿನಲ್ಲಿ ಎಸ್ಎಂಎ ರಾಜ್ಯ ಸಮಿತಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯಶಸ್ವಿಗೊಳಿಸಲು ಎಲ್ಲಾ ಮೊಹಲ್ಲಾ ಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ರೀಜಿನಲ್ ಎಸ್ ಎಂ ಎ ಅಧ್ಯಕ್ಷರಾದ ಅಬ್ದುಲ್ ಹಕೀಮ್ ನಿರ್ವಹಿಸಿ, ಬಹು ಅಸೈಯದ್ ಶಮೀಮ್ ತಂಙಳ್ ದಾರುನ್ನಜಾತ್ ದುಹಾ ನಡೆಸಿದರು. ವಿಷಯ ಮಂಡನೆ ನಡೆಸಿದ ಖ್ಯಾತ ವಿದ್ವಾಂಸ ಬಹು ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್ ಮಲ್ಹ್‌ರ್ ಮಾತನಾಡಿ, ಜಮಾಅತ್ ಆಡಳಿತ ಸಮಿತಿಗಳು ಮೊಹಲ್ಲಾ ಸಬಲೀಕರಣಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಸ್ ಎಂ ಎ ನಡೆಸುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ SSLC ಮತ್ತು ರೇಂಜ್ ಮಟ್ಟದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಹಾಗೂ ಯಶಸ್ವಿಯಾಗಿ ಎಲ್ಲಾ ಮಹಲ್ಲಾಗಳಿಗೆ ಸಂದರ್ಶನ ನಡೆಸಿದ SMA ರೀಜಿನಲ್ ಅಧ್ಯಕ್ಷರನ್ನು ರೀಜಿನಲ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಶೈಖುನಾ ವಾಲೆಮುಂಡವು ಉಸ್ತಾದ್ ಎಸ್.ಜೆ.ಎಂ ಅಧ್ಯಕ್ಷರಾದ ಶೆರೀಫ್ ಮದನಿ , ಆದಂ ಹಾಜಿ , ಕೆ.ಸಿ.ಎಫ್ ನ್ಯಾಷನಲ್ ಸಮೀತಿ ಕೋಶಾಧಿಕಾರಿ : ಇಬ್ರಾಹಿಂ ಬ್ರೈಟ್,ಎಸ್ .ಎಂ.ಎ. ವಿಟ್ಲ ಝೋನಲ್ ಪ್ರಧಾನ ಕಾರ್ಯದರ್ಶಿ: ಕಾಸಿಂ ಸಖಾಫಿ .ಎಸ್.ಎಂ.ಎ ಉಪಾಧ್ಯಕ್ಷರಾದ: ಹಸೈನಾರ್ , ಇಬ್ರಾಹಿಂ ಮದನಿ ಕಂಬಳಬೆಟ್ಟು . ರಝಾಕ್ ಸಹದಿ ಅಬ್ಬಾಸ್ ಮದನಿ S. Y. S, ವಿಟ್ಲ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಕಾದರ್ ಸಖಾಫಿ ,ಸುನ್ನೀ ಫ್ಯೆಝಿ ಹಾರಿಸ್ ಒಕ್ಕೆತ್ತೂರು ಇಬ್ರಾಹಿಂ ಮುಸ್ಲಿಯಾರ್, ಮಜೀದ್ ಮದನಿ, ಮುಸ್ತಫಾ ಕುಂಡಡ್ಕ ಉಪಸ್ಥಿತರಿದ್ದರು.
SMA ವಿಟ್ಲ ರಿಜಿನಲ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಸಖಾಫಿ ಒಕ್ಕೆತ್ತೂರು ಸ್ವಾಗತಿಸಿ, ಎಸ್ ಎಂ ಎ ವಿಟ್ಲ ಝೋನಲ್ ಸಂಘಟನಾ ಕಾರ್ಯದರ್ಶಿ ಹಾರಿಸ್ ಮದನಿ ವಂದಿಸಿದರು.


















ಇನ್ನಷ್ಟು ಸುದ್ದಿಗಳು
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ