janadhvani

Kannada Online News Paper

ಭಾರತೀಯ ಪ್ರಯಾಣಿಕರ ಹೆಚ್ಚಳ- 3 ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣ ತಲುಪುವಂತೆ ಸೂಚನೆ

ಪ್ರಯಾಣಿಕರ ಹೆಚ್ಚಳದಿಂದಾಗಿ ಅಬುಧಾಬಿ ಮತ್ತು ದುಬೈ ವಿಮಾನ ನಿಲ್ದಾಣಗಳು ಭಾರೀ ದಟ್ಟಣೆಯನ್ನು ಅನುಭವಿಸುತ್ತಿವೆ.
ಈ ವರದಿಯ ಧ್ವನಿಯನ್ನು ಆಲಿಸಿ

ಅಬುಧಾಬಿ | ಬೇಸಿಗೆ ರಜೆಯಿಂದಾಗಿ ದಟ್ಟಣೆ ಹೆಚ್ಚಿರುವ ಕಾರಣ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ನಿರ್ಗಮನಕ್ಕೆ ಕನಿಷ್ಠ ಮೂರು ಗಂಟೆಗಳ ಮೊದಲು ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ಗೆ ವರದಿ ಮಾಡಬೇಕು ಎಂದು ಗೋಏರ್ ಹೇಳಿದೆ.

ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಊರಿಗೆ ತೆರಳದ ಕುಟುಂಬಗಳು, ಬೇಸಿಗೆ ರಜೆಗಾಗಿ ಶಾಲೆ ಮುಚ್ಚಿದ ಕಾರಣ ಗುಂಪು ಗುಂಪಾಗಿ ಹೊರಡುತ್ತಿದ್ದಾರೆ. ಪ್ರಯಾಣಿಕರ ಹೆಚ್ಚಳದಿಂದಾಗಿ ಅಬುಧಾಬಿ ಮತ್ತು ದುಬೈ ವಿಮಾನ ನಿಲ್ದಾಣಗಳು ಭಾರೀ ದಟ್ಟಣೆಯನ್ನು ಅನುಭವಿಸುತ್ತಿವೆ.

ರಜಾ ದಿನಗಳಲ್ಲಿ ಹೆಚ್ಚುತ್ತಿರುವ ನೂಕುನುಗ್ಗಲು ಕಾರಣ ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲುಪದಿರುವುದನ್ನು ತಪ್ಪಿಸಲು ಮತ್ತು ಪ್ರಯಾಣದ ವ್ಯವಸ್ಥೆಗಳನ್ನು ಪೂರ್ಣಗೊಳಿಸಲು ಬೇಗನೇ ಆಗಮಿಸುವಂತೆ ಸೂಚಿಸಲಾಗಿದೆ.

ಎಲ್ಲಾ ಪ್ರಯಾಣಿಕರು ಕೋವಿಡ್-19 ವ್ಯಾಕ್ಸಿನೇಷನ್ ಪ್ರಮಾಣಪತ್ರ / ಮಾನ್ಯ RT-PCR ವರದಿಯನ್ನು ಏರ್ ಸುವಿಧ ಪೋರ್ಟಲ್‌ನಲ್ಲಿ (7) ಹೊರಡುವ ಮುಂಚಿತವಾಗಿ ಅಪ್‌ಲೋಡ್ ಮಾಡಬೇಕಾಗಿದೆ. ಅದರ ಪ್ರಿಂಟ್ ಔಟ್ ನ್ನು ಕೈಯಲ್ಲಿಡಬೇಕು.

ವ್ಯಾಕ್ಸಿನೇಷನ್ ತೆಗೆಯದ 5 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮಕ್ಕಳು ನಿರ್ಗಮಿಸುವ 72 ಗಂಟೆಗಳ ಒಳಗೆ ಮಾನ್ಯವಾದ ಪಿಸಿಆರ್ ವರದಿಯನ್ನು ಪಡೆಯಬೇಕು. ನೇರ ಸಂಪರ್ಕ ಮತ್ತು ನವೀಕರಣಗಳಿಗಾಗಿ ಪ್ರಯಾಣಿಕರ ಸ್ಥಳೀಯ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು PNR ನಲ್ಲಿ ಅಪ್ಡೇಟ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಯುಎಇಯಲ್ಲಿರುವ GoFirst ಕಚೇರಿಗಳು ಅಥವಾ ಸೇಲ್ಸ್ ತಂಡವನ್ನು ಸಂಪರ್ಕಿಸಿ.

error: Content is protected !! Not allowed copy content from janadhvani.com