ಇರಾ : ಫಝಲ್ ಜುಮ್ಮಾ ಮಸೀದಿ ಪಂಜಿಕಲ್ ಇರಾ ಇದರ ಅಧೀನಕ್ಕೊಳಪಟ್ಟ ತನ್ಮಿಯತುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳ ಸಂಘಟನೆಯಾದ ಸುನ್ನಿ ಬಾಲ ಸಂಘ ಇದರ 22 -23 ನೇ ಸಾಲಿನ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ಜೂನ್ 04 ರಂದು ಮದರಸ ಸಭಾಂಗಣದಲ್ಲಿ ನಡೆಯಿತು.
ಮುಖ್ಯೊಪಾಧ್ಯಾಯರಾದ ಹಾಫಿಳ್ ಬಶೀರ್ ಹಿಮಮಿಯವರ ಅಧ್ಯಕ್ಷತೆಯಲ್ಲಿ ಅಧ್ಯಾಪಕರಾದ ಇಂತಿಯಾಝ್ ಹನೀಫಿ ಉದ್ಘಾಟಿಸಿದರು. ನೂತನ ಅಧ್ಯಕ್ಷರಾಗಿ ಮುಹಮ್ಮದ್ ಹಾಫೀಝ್, ಪ್ರಧಾನ ಕಾರ್ಯದರ್ಶಿಯಾಗಿ ರಮೀಝ್ ಮತ್ತು ಕೋಶಾಧಿಕಾರಿಯಾಗಿ ಮುಂಝಿರ್ ಇವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಪ್ರವಾದಿ ನಿಂದನೆಯ ವಿರುದ್ಧ ಖಂಡನೆಯನ್ನು ವ್ಯಕ್ತಪಡಿಸಲಾಯಿತು.