janadhvani

Kannada Online News Paper

ಸಿದ್ದರಾಮಯ್ಯರನ್ನು ಟೀಕಿಸಲು ಎಸ್ಟಿಪಿಐಗೆ ಬಿಜೆಪಿ ಸರಕಾರ 40 ಶೇ. ಗುತ್ತಿಗೆ ನೀಡಿದೆಯೇ?- ಯುಟಿಕೆ

ಬಿಜೆಪಿ ಪಕ್ಷದ ಮುಖಂಡನ ಮೈದಾನದಲ್ಲಿ ನಿಂತು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ನೀವು ಪಡೆದಿರುವ ಕಮಿಷನ್ ನಿಯತ್ತಿಗೋ ಅಥವಾ ಬಿಜೆಪಿಯ ಭಯಕ್ಕೋ?

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಸರ್ವ ಧರ್ಮದ ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಪ್ರತಿಯೊಬ್ಬರೂ ಎಲ್ಲಾ ಪಕ್ಷದವರೂ ಕೂಡಾ ಗೌರವ ನೀಡುವ ಸಿದ್ದರಾಮಯ್ಯರವರಂಥಹ ಅಪ್ರತಿಮ ಜಾತ್ಯಾತೀತ ನಾಯಕರ ಬಗ್ಗೆ ನಿನ್ನೆ ನಡೆದ ಎಸ್ಬಿಪಿಐ ಸಮಾವೇಶದಲ್ಲಿ ಮುಖಂಡರು ಮಾಡಿರುವ ಭ್ರಷ್ಟಾಚಾರ ಆರೋಪದ ಕುರಿತು ಎಸ್ಬಿಪಿಐ ಮುಖಂಡರ ವಿರುದ್ಧ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಕಿಡಿ ಕಾರಿದ್ದಾರೆ.

ಜಾತ್ಯಾತೀತರು ಎಂದು ಬೊಬ್ಬೆ ಹೊಡೆಯುವ ನೀವು, ಕೋಮುವಾದಿ ಶಕ್ತಿಗಳ ವಿರುದ್ಧ ಕಿಡಿಕಾರುವ ಬದಲು, ಬಿಜೆಪಿ ಪಕ್ಷದ ಮುಖಂಡನ ಮೈದಾನದಲ್ಲಿ ನಿಂತು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ನೀವು ಪಡೆದಿರುವ ಕಮಿಷನ್ ನಿಯತ್ತಿಗೋ ಅಥವಾ ಬಿಜೆಪಿಯ ಭಯಕ್ಕೋ? ಕರಾವಳಿಯ ಪ್ರಬುದ್ಧ ಜನ ಸೂಕ್ತ ಸಮಯದಲ್ಲಿ ನಿರ್ಧರಿಸಿ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಯು.ಟಿ. ಖಾದರ್ ಎಸ್ಬಿಪಿಐ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.

error: Content is protected !! Not allowed copy content from janadhvani.com