janadhvani

Kannada Online News Paper

“ಹರೀಶ್ ಪೂಂಜಾ ಚೀಲದಲ್ಲಿ ಹಣ ತರುತ್ತಾರೆ” ಹಣದ ಮೂಲದ ಬಗ್ಗೆ ತನಿಖೆಯಾಗಲಿ- ಎಸ್‌ಡಿಪಿಐ ಆಗ್ರಹ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜಾರ ಮನೆಗೆ ಬರುವ ಸಾರ್ವಜನಿಕರಿಗೆ ಕಂತೆ ಕಂತೆ ಹಣವನ್ನು ನೀಡುತ್ತಾರೆ ಎಂದಿರುವ ಬಿಜೆಪಿ ಕಾರ್ಯಕರ್ತ

ಬೆಳ್ತಂಗಡಿ, ಮೇ-19: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜಾರ ಬೆಳ್ತಂಗಡಿಯ ಕಚೇರಿಯಿಂದ ಚೀಲದಲ್ಲಿ ದೊಡ್ಡ ಮೊತ್ತದ ಹಣವನ್ನು ಪೂಂಜಾರವರು ತರುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿಕೆ ನೀಡಿರುವುದು ವಿವಾದವೆಬ್ಬಿಸಿದೆ. ಈ ಬಗ್ಗೆ ತನಿಖೆಯಾಗಲಿ ಎಂದು ಎಸ್‌ಡಿಪಿಐ ಆಗ್ರಹಿಸಿದೆ.

ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಬಳಂಜರವರು ತಮ್ಮ ಭಾಷಣದಲ್ಲಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜಾರ ಮನೆಗೆ ಬರುವ ಸಾರ್ವಜನಿಕರಿಗೆ ಕಂತೆ ಕಂತೆ ಹಣವನ್ನು ನೀಡುತ್ತಾರೆ. ಅದೇ ರೀತಿ ಹರೀಶ್ ಪೂಂಜಾರ ಬೆಳ್ತಂಗಡಿಯ ಕಚೇರಿ ಶ್ರಮಿಕದಲ್ಲಿ ದಿನಾಂಪ್ರತಿ ಕಚೇರಿ ಒಳಗಿನಿಂದ ಚೀಲದಲ್ಲಿ ದೊಡ್ಡ ಮೊತ್ತದ ಹಣವನ್ನು ಪೂಂಜಾರವರು ತರುದನ್ನು ನಾನು ಕಣ್ಣಾರೆ ಕಂಡ ವ್ಯಕ್ತಿಯಾಗಿದ್ದೇನೆ ಎಂದು ಹೇಳಿರುತ್ತಾರೆ.

ಶಾಸಕರಿಗೆ ಇಷ್ಟು ಹಣ ಎಲ್ಲಿಂದ ಹೇಗೆ ಬರುತ್ತದೆ.? ಶಾಸಕರ ತಿಂಗಳ ಸಂಬಳದಲ್ಲಿ ಇಷ್ಟು ಹಣ ನೀಡಲು ಸಾಧ್ಯವೇ.? ಶಾಸಕರಾಗುವ ಮೊದಲು ವಕೀಲ ವೃತ್ತಿಯನ್ನು ಅವಲಂಬಿಸಿದ್ದ ವ್ಯಕ್ತಿ ಶಾಸಕರಾದ ನಂತರ ಇಷ್ಟೊಂದು ಹಣ ಹೇಗೆ ಸಂಪಾದಿಸಿದರು? ರಾಜ್ಯದಲ್ಲಿ ನಡೆಯುತ್ತಿರುವ 40% ಕಮಿಷನ್ ದಂದೆಯ ಹಣ ಶಾಸಕರಿಗೆ ಸಂದಾಯವಾಗಿದೆ ಎಂಬ ಅನುಮಾನ ಕ್ಷೇತ್ರದ ಜನತೆಗೆ ಕಾಡುತ್ತಿದೆ. ಶಾಸಕ ಹರೀಶ್ ಪೂಂಜಾರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಹಣದ ಮೂಲದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ನಿಸಾರ್ ಕುದ್ರಡ್ಕ ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com