janadhvani

Kannada Online News Paper

ಎಲಿಮಲೆ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್-ಅಧ್ಯಕ್ಷರಾಗಿ ಲತೀಫ್ ಹರ್ಲಡ್ಕ ಪುನರಾಯ್ಕೆ

40 ನೇ ವರ್ಷಕ್ಕೆ 40 ಸಮಾಜಮುಖಿ ಕಾರ್ಯಗಳನ್ನು ಮಾಡುವ ಯೋಜನೆ

ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಎಲಿಮಲೆ ಇದರ ವಾರ್ಷಿಕ ಮಹಾಸಭೆಯು ಎಲಿಮಲೆ ಮದರಸ ವಠಾರದಲ್ಲಿ ಜರುಗಿತು. ಶುಕ್ರವಾರ ಜುಮ್ಮಾ ನಮಾಜಿನ ಬಳಿಕ ನಡೆದ ಮಹಾಸಭೆಯನ್ನು ಸಂಸ್ಥೆಯ ಉಪಾಧ್ಯಕ್ಷ ಸೂಫಿ ಮುಸ್ಲಿಯಾರ್ ಉಧ್ಘಾಟಿಸಿದರು.

ಸಿದ್ದೀಕ್ ಎಲಿಮಲೆ ವಾರ್ಷಿಕ ವರದಿ ಮಂಡಿಸಿದರು,ಸೂಪಿ‌ ಎಲಿಮಲೆ ‌ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಎಲಿಮಲೆ ಜಮಾಅತ್ ಸಮಿತಿ ಅಧ್ಯಕ್ಷ ಮಹಮದ್ ಇಕ್ಬಾಲ್ ಎಲಿಮಲೆ, ಜಮಾಅತ್ ಸಮಿತಿ ಮಾಜಿ ಅಧ್ಯಕ್ಷ ಮೂಸಹಾಜಿ ಜೀರ್ಮುಕಿ, ಕೋಶಾಧಿಕಾರಿ ಮಹಮೂದ್ ಮಸ್ಲಿಯಾರ್ ದೊಡ್ಡಂಗಡಿ, ಜೀರ್ಮಕ್ಕಿ ಮಸೀದಿ ಅಧ್ಯಕ್ಷ ಸಿದ್ದೀಕ್ ಜಿರ್ಮುಕ್ಕಿ,ಮಹಮದ್ ಕುಂಞಿ ಮೇಲೆಬೈಲು ಉಪಸ್ಥಿತರಿದ್ದರು. ಎಲಿಮಲೆ ಮಸೀದಿ ಮುದರ್ರಿಸ್ ಜೌಹರ್ ಅಹ್ಸನಿ ದುವಾಶಿರ್ವಚನ ನೆರವೇರಿಸಿ ಹಿತೋಪದೇಶ ನೀಡಿದರು.

ನೂತನ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಲತೀಫ್ ಹರ್ಲಡ್ಕ ಪುನರಾಯ್ಕೆ ಯಾದರು.
ಉಪಾಧ್ಯಕ್ಷರಾಗಿ ಜಿ.ಎಸ್ ಅಬ್ದುಲ್ಲ, ಸೂಫಿ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಸೂಫಿಎಲಿಮಲೆ,
ಜತೆ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ, ಅಶ್ರಫ್ ದಿನಸಿ ಬಜಾರ್, ಕೋಶಾಧಿಕಾರಿಯಾಗಿ ಅಬ್ದುಲ್ ಕಾದರ್ ಪಾಣಾಜೆ ರವರು ಆಯ್ಕೆಯಾದರು.
ಸದಸ್ಯರುಗಳಾಗಿ ಶಿಹಾಬ್ ಪಾಣಾಜೆ,ಹೈದರ್ ಹಾಜಿ,ಅಬ್ದುಲ್ ಖಾದರ್ ಅತ್ತಿಮಾರಡ್ಕ ,ಹನೀಫ್ ಜೀರ್ಮುಕ್ಕಿ, ಸುಲೈಮಾನ್ ಮೆತ್ತಡ್ಕ,ಮಹಮೂದ್ ಸಖಾಫಿ, ನಾಸಿರ್ ದೊಡ್ಡಂಗಡಿ,
ಇಬ್ರಾಹಿಂ ಜೀರ್ಮುಕ್ಕಿ, ಸತ್ತಾರ್ ಮೇಲೆಬೈಲು, ಹಾರಿಸ್ ಪಳ್ಳಿಕಲ್,
ಆಸಿಫ್ ಹೊಟ್ಟಿಚೋಡಿ ಆಯ್ಕೆಯಾದರು.
ಸಮಿತಿಯ ಗೌರವ ಸಲಹೆಗಾರರಾಗಿ ಅಲ್ ಹಾಜ್ ತೌಸೀಫ್ ಸಾದಿ ಹರೇಕಳ, ಮಹಮದ್ ಇಕ್ಬಾಲ್ ಎಲಿಮಲೆ,
ಅಬೂಬಕರ್ ಪಾಣಾಜೆ, ಮಹಮದ್ ಕುಂಞಿ ಮೇಲೆಬೈಲು ರವರನ್ನು ಆರಿಸಲಾಯಿತು.

ಸಭಾಧ್ಯಕ್ಷತೆಯನ್ನು ವಹಿಸಿ ಮತನಾಡಿದ ಲತೀಫ್ ಹರ್ಲಡ್ಕರವರು ನುಸ್ರತ್ ಗೆ 40 ನೇ ವರ್ಷ ತುಂಬಿದ್ದು ಸಂಸ್ಥೆಯ ರೂಬಿ ಜ್ಯುಬಿಲಿ ಕಾರ್ಯಕ್ರಮದ ಬಗ್ಗೆ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಇದರ ಯಶಸ್ವಿಗಾಗಿ ಸರ್ವರ ಸಹಭಾಗಿತ್ವ ಮತ್ತು ಸಹಕಾರ ಅಗತ್ಯವಿದ್ದು, ಕಾರ್ಯಕ್ರಮಗಳ ಯಶಸ್ವಿಗೆ ಸಹಕರಿಸಲು ವಿನಂತಿಸಿದರು.
ಸೂಫಿ ಎಲಿಮಲೆ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com