janadhvani

Kannada Online News Paper

ಪಳ್ಳಿಮಜಲು ಸಿರಾಜುಲ್ ಹುದಾ ಮದ್ರಸ- ಕಂಝುಲ್ ಹುದಾ ಹಳೇ ವಿದ್ಯಾರ್ಥಿ ಸಂಘಟನೆ ಅಸ್ತಿತ್ವಕ್ಕೆ

ಬೆಳ್ಳಾರೆ: ಇಸ್ಲಾಮಿಕ್ ಎಜ್ಯುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪಳ್ಳಿಮಜಲು ಸಿರಾಜುಲ್ ಹುದಾ ಸೆಕೆಂಡರಿ ಮದ್ರಸದಲ್ಲಿ ಸರಿಸುಮಾರು ಒಂದು ದಶಕಗಳ ಕಾಲ ಅದ್ಯಾಪಕರಾಗಿ ಸೇವೆ ಸಲ್ಲಿಸಿದ ಕೊಂಬಾಳಿ ಕೆ.ಎಂ.ಎಚ್. ಝುಹುರಿ ಉಸ್ತಾದರ ಬಳಿ ವಿಧ್ಯಾಭ್ಯಾಸ ಕಲಿತ ಮದ್ರಸ ವಿದ್ಯಾರ್ಥಿಗಳ ಸಂಘಟನೆಯಾಗಿ “ಕಂಝುಲ್ ಹುದಾ ಸ್ಟೂಡೆಂಟ್ಸ್ ಅಸೋಸಿಯೇಷನ್” ಇತ್ತೀಚೆಗೆ ಅಸ್ತಿತ್ವಕ್ಕೆ ತರಲಾಯಿತು. ಪಳ್ಳಿಮಜಲು ಸಿರಾಜುಲ್ ಹುದಾ ಮದ್ರಸ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಸಮಿತಿಯ ನಿರ್ದೇಶಕರಾಗಿ ಬಹು| ಕೊಂಬಾಳಿ ಝುಹ್’ರಿ ಉಸ್ತಾದ್, ಅಧ್ಯಕ್ಷರಾಗಿ ಮುಹಮ್ಮದ್ ಸಫೀಂ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಮಿಸ್ಹಬ್, ಕೋಶಾಧಿಕಾರಿಯಾಗಿ ನಿಝಾಮುದ್ದೀನ್ ಝಂಝಂ, ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಶಿಹಾಬುದ್ದೀನ್, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ರಾಇಸ್, ಇಬ್ರಾಹಿಂ ಬಾತಿಷಾ, ಮುಹಮ್ಮದ್ ನಾಝಿಂ, ಕಾರ್ಯದರ್ಶಿಗಳಾಗಿ ಮುಹಮ್ಮದ್ ಸಿನಾನ್, ಮುಹಮ್ಮದ್ ಸವಾದ್, ಮುಹಮ್ಮದ್ ಇಲ್ಯಾಸ್, ಮೀಡಿಯಾ ಕಾರ್ಯದರ್ಶಿಯಾಗಿ ಮುಹಮ್ಮದ್ ಸೆಮೀರ್, ಹಾಗೂ 53 ಮಂದಿ ವಿದ್ಯಾರ್ಥಿಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಮಿಸ್ಹಬ್ ಸ್ವಾಗತಿಸಿ, ವಂದಿಸಿದರು.

error: Content is protected !! Not allowed copy content from janadhvani.com