janadhvani

Kannada Online News Paper

ಹಗರಣಗಳು -ವೈಫಲ್ಯಗಳಿಂದ ಜನರ ಗಮನವನ್ನು ಡೈವರ್ಟ್ ಮಾಡಲು ಮುತಾಲಿಕ್ ಗೆ ಸರಕಾರವು ಹೋರಾಟದ ಗುತ್ತಿಗೆ ನೀಡಿದೆಯೇ? ಧ್ವನಿವರ್ಧಕದ ಉರುಳು ಕರಾವಳಿಯ ಕಲಾವಿದರ ಕುತ್ತಿಗೆ ಬಿಗಿಯುತ್ತಿದೆ

✍️ ಅಶ್ರಫ್ ಕಿನಾರ ಮಂಗಳೂರು

ಭೂಮಿಯ ಚಲನೆಯಿಂದಾಗಿ ಹಗಲು ರಾತ್ರಿ ಹಾಗೂ ವೇಳೆಗಳಲ್ಲಿ ಗೋಳಾದ್ಯಂತ ವ್ಯತ್ಯಾಸ ಇರುವುದರಿಂದ ಆಝಾನ್ ಎನ್ನುವುದು ಜಗತ್ತಿನಾದ್ಯಂತ ದಿನದ 24 ಗಂಟೆಗಳಲ್ಲೂ ನಡೆಯುತ್ತಿದೆ. ಅದರ ಅರ್ಥ ದಯವಿಟ್ಟು ಗೂಗಲ್ ನಲ್ಲಿ ಸರ್ಚ್ ಮಾಡಿ ಕಳಿತುಕೊಳ್ಳಿ ಎಲ್ಲಾ ಬಾಷೆಯಲ್ಲೂ ಇದೆ.

ಒಂದು ಸಮಯದ ಅಝಾನ್ ಗೆ ಬೇಕಾದುದು ಗರಿಷ್ಠ ಎಂದರೆ ಐದಾರು ನಿಮಿಷ. ಒಂದು ಪ್ರದೇಶದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಒಟ್ಟು ಐದು ಬಾರಿ ಅಝಾನ್ ಕರೆ ಕೊಡಲಾಗುತ್ತದೆ. ಇಡೀ ದಿನದಲ್ಲಿ ಇಪ್ಪತ್ತು-ಮುವತ್ತು ನಿಮಿಷಗಳಷ್ಟೆ ಬೇಕಾದ ಗರಿಷ್ಠ ಸಮಯ. ಅದೂ ಒಂದೇ ಬಾರಿಗೆ ಅಲ್ಲ.

ಆಝಾನ್ ಗೆ ಧ್ವನಿವರ್ಧಕ ಬಳಸಬಾರದೆಂದು ಸರಕಾರ ಸುತ್ತೋಲೆ ಹೊರಡಿಸಿದರೂ ಮುಸ್ಲಿಮರು ಹಿಂದಿನಂತೆಯೇ ಮುಂದುವರಿಯಬಲ್ಲರು. ಯಾಕೆಂದರೆ ಇಸ್ಲಾಮಿನಲ್ಲಿ ಅಂತಹದ್ದಕ್ಕೆಲ್ಲಾ ಪರ್ಯಾಯಗಳಿವೆ.

ಆದರೆ ನಮ್ಮ ಕರಾವಳಿ ಜಿಲ್ಲೆಯ ಯಕ್ಷಗಾನ ಬಯಲಾಟದಂತಹ ಕಲೆಯಲ್ಲಿ ವೃತ್ತಿಪರರಾಗಿ ದುಡಿಯುವ ನೂರಾರು ಕಲಾವಿದರಿದ್ದಾರೆ. ಅಂತಹ ಕಲಾವಿದರ ಜೀವನೋಪಾಯದ ಮೇಲೆ ಧ್ವನಿವರ್ಧಕ ನಿರ್ಬಂಧವು ನೇರವಾಗಿ ಹೊಡೆತ ನೀಡುತ್ತದೆ. ರಾತ್ರಿ ಇಡೀ ನಡೆಯುವ ಯಕ್ಷಗಾನ ಬಯಲಾಟ,ಕೋಲ,ನೇಮ, ಸಾಂಸ್ಕೃತಿಕ ವಿವಿಧ ಕಾರ್ಯಗಳು ಇನ್ನು ಮುಂದೆ ಸ್ಥಗಿತಗೊಳಿಸಬೇಕಾದ ಸ್ಥಿತಿ ಬರಲಿದೆ. ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಸಿಡಿಸುವ ಮದ್ದುಗುಂಡುಗಳ ಶಬ್ದಗಳೆಲ್ಲವೂ ನಿಲ್ಲಿಸಬೇಕಾಗುತ್ತದೆ.
ಆಡಳಿತ ಪಕ್ಷದೊಂದಿಗೆ ನಿಷ್ಠೆ ಹೊಂದಿದವರೇ ಈಗ ಮುತಾಲಿಕ್ ಬಗ್ಗೆ ಬಾಯಿಗೆ ಬಂದಂತೆ ಗೇಲಿ ಮಾಡತೊಡಗಿದ್ದಾರೆ.

ಇಲ್ಲಿನ ಮುಸ್ಲಿಂ ಸಮುದಾಯಕ್ಕೆ ಹಿಂದು ಸಹೋದರ ರ ಯಾವುದೇ ಕಾರ್ಯಕ್ರಮದ/ ಪ್ರಾರ್ಥನೆಯ ಶಬ್ದವೂ ಕಿರಿಕ್ ಉಂಟು ಮಾಡಲೇ ಇಲ್ಲ.ಯಾವ ಅಭಿಯಾನವು ಮುಸಲ್ಮಾನ ಶುರು ಮಾಡಿಲ್ಲ. ಇಲ್ಲಿ ಸಮಾಜವೇ ಅರಿತು ಕೊಳ್ಳಬೇಕು. ಯಾರದು ಸರಿ ಯಾರದು ತಪ್ಪು …
ಅಂತೂ ಇಂತೂ ಹಗರಣಗಳ ಮರೆ ಮಾಚಲು ವಿವಾದ ಗಳ ಗುತ್ತಿಗೆ ಪಡೆದ ಮುತಾಲಿಕ್ ಗೆ ಬಿಟ್ಟಿ ಪ್ರಚಾರ ಆಯ್ತು ಅಷ್ಟೆ

error: Content is protected !! Not allowed copy content from janadhvani.com