janadhvani

Kannada Online News Paper

ದುಬೈ ವಿಮಾನ ನಿಲ್ದಾಣದಲ್ಲಿ ರನ್ ವೇ ದುರಸ್ತಿ- ಸಾವಿರಾರು ವಿಮಾನಗಳು ಸ್ಥಳಾಂತರ

ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೇವೆಗಳನ್ನು ದುಬೈ ವರ್ಲ್ಡ್ ಸೆಂಟ್ರಲ್‌ಗೆ ಸ್ಥಳಾಂತರಿಸಲಾಗುವುದು

ದುಬೈ: ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ರನ್ ವೇಯನ್ನು ದುರಸ್ತಿಗಾಗಿ ಮುಂದಿನ ತಿಂಗಳು ಮುಚ್ಚಲಾಗುವುದು. ಮೇ 9 ರಿಂದ ಜೂನ್ 22 ರವರೆಗೆ 45 ದಿನಗಳ ಕಾಲ ದುರಸ್ತಿಗೆ ನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ, ಸಾವಿರಾರು ವಿಮಾನಗಳನ್ನು ದುಬೈನ ಎರಡನೇ ವಿಮಾನ ನಿಲ್ದಾಣವಾದ ದುಬೈ ವರ್ಲ್ಡ್ ಸೆಂಟ್ರಲ್‌ಗೆ ತಿರುಗಿಸಲಾಗುತ್ತದೆ.

ಸುರಕ್ಷತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರನ್‌ವೇ ದುರಸ್ತಿ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ ಎಂದು ದುಬೈ ವಿಮಾನ ನಿಲ್ದಾಣದ ಸಿಇಒ ಪಾಲ್ ಗ್ರಿಫಿತ್ಸ್ ಹೇಳಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೇವೆಗಳನ್ನು ದುಬೈ ವರ್ಲ್ಡ್ ಸೆಂಟ್ರಲ್‌ಗೆ ಸ್ಥಳಾಂತರಿಸಲಾಗುವುದು. ಈ ಕಾಲಾವಧಿಯಲ್ಲಿ ಪ್ರಯಾಣಿಕರು ತಮ್ಮ ಆಗಮನ ಮತ್ತು ನಿರ್ಗಮನ ವಿಮಾನ ನಿಲ್ದಾಣ ಯಾವುದು ಎಂಬುದನ್ನು ವಿಮಾನಯಾನ ಸಂಸ್ಥೆಗಳಿಂದ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.

ಹಬ್ಬದ ಸಂಭ್ರಮ ಮುಗಿದ ಬಳಿಕ ದುರಸ್ತಿ ಕಾರ್ಯ ಆರಂಭಿಸಿ ಬೇಸಿಗೆ ರಜೆಗೂ ಮುನ್ನ ಪೂರ್ಣಗೊಳಿಸುವ ಪ್ರಯತ್ನ ನಡೆಸಲಾಗಿದೆ. ಚಟುವಟಿಕೆಗಳಿಗೆ ತುಲನಾತ್ಮಕವಾಗಿ ಕಡಿಮೆ ಜನದಟ್ಟಣೆಯ ಸಮಯವನ್ನು ಆಯ್ಕೆ ಮಾಡಲಾಗಿದೆ. ಉತ್ತರ ರನ್‌ವೇ 2014 ರಲ್ಲಿ ಸುದೀರ್ಘ ದುರಸ್ತಿಗೆ ಒಳಗಾಗಿತ್ತು. 2019 ರಲ್ಲಿ ದಕ್ಷಿಣ ರನ್‌ವೇಯನ್ನು ಅದೇ ರೀತಿಯಲ್ಲಿ ಮುಚ್ಚಲಾಯಿತು ಮತ್ತು ದುರಸ್ತಿ ಮಾಡಲಾಯಿತು.

error: Content is protected !! Not allowed copy content from janadhvani.com