janadhvani

Kannada Online News Paper

ಅಲ್ ಮಫಾಝ್ ದಮ್ಮಾಮ್ ಖೋಬರ್ ನೂತನ ಸಮಿತಿ ರಚನೆ ಹಾಗೂ ಸ್ವಲಾತ್ ಮಜಿಲಿಸ್ ಮತ್ತು ಇಫ್ತಾರ್ ಕೂಟ

ಅಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್,ಮೂಡಬಿದ್ರಿ,ದಮ್ಮಾಮ್ ಮತ್ತು ಅಲ್ ಖೋಬರ್ ಸಮಿತಿ
ಇದರ ಜಂಟಿ ಆಶ್ರಯದಲ್ಲಿ ಸ್ವಲಾತ್ ಮಜಿಲಿಸ್ ಮತ್ತು ಇಫ್ತಾರ್ ಕೂಟ ಏಪ್ರಿಲ್ 14 ರಂದು ಕಾಶಿಪಟ್ನ ನಝೀರ್ ಹಾಜಿ ಹೌಸ್ ನಲ್ಲಿ ಯಶಸ್ವಿಯಾಗಿ ನಡೆಯಿತು.

KCF ರಾಷ್ಟ್ರೀಯ ಅಧ್ಯಕ್ಷರಾದ ಡಿ.ಪಿ.ಯೂಸುಫ್ ಸಖಾಫಿ ರವರ ದುಆ ನೇತ್ರತ್ವದೊಂದಿಗೆ ಸ್ವಲಾತ್ ಮಜಲಿಸ್ಗೆ ಚಾಲನೆ ನೀಡಲಾಯಿತು.
ನಂತರ ಇಫ್ತಾರ್ ಕೂಟ ಮತ್ತು ಮಗ್ರಿಬ್ ನಮಾಝ್ ಬಳಿಕ ದಮ್ಮಾಮ್,ಖೋಬರ್ ಹಾಗೂ ಮಫಾಝ್ ಹಿತೈಷಿಗಳ ಒಟ್ಟು ಸಭೆ ನಡೆಸಲಾಯಿತು,KCF ರಾಷ್ಟ್ರೀಯ ಅಧ್ಯಕ್ಷರು ಮೂಡಬಿದ್ರಿ ಪರಿಸರದಲ್ಲಿ ಸ್ಥಾಪನೆಯ ಅವಶ್ಯಕತೆಯನ್ನು ವಿಸ್ತೃತ ರೂಪದಲ್ಲಿ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರು.
ಅಲ್ ಮಫಾಝ್ ದಾಈ ಯಾಸಿರ್ ಅಹ್ಮದ್ ಅಲ್ ಹುಮೈದಿ ಸ್ಥಾಪನೆ ನಡೆಸುವ ವಿದ್ಯಾಭ್ಯಾಸ ಮತ್ತು ಅದರ ಅವಶ್ಯಕತೆಗಳನ್ನು ತಿಳಿಸಿದರು.

ಅಂದಿನ ಸಭೆಯಲ್ಲಿ ಹನೀಫ್ ಮೂಡಬಿದ್ರಿ ಸ್ವಾಗತಗೈದರು,ನಜೀರ್ ಕಾಶಿಪಟ್ನ,ದಮ್ಮಾಮ್ ಅಧ್ಯಕ್ಷರಾದ ಅಶ್ರಫ್ ಉಸ್ತಾದ್ ಮತ್ತು ಖೋಬರ್ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟು ಅವರ ನೇತೃತ್ವದಲ್ಲಿ ಅಂದಿನ ಸಭೆಯಲ್ಲಿ ಬಲಿಷ್ಠ ದಮ್ಮಾಮ್ ಖೋಬರ್ ಸಮಿತಿ ರಚನೆ ಮಾಡಲಾಯಿತು.

ಅಂದಿನ ಸಭೆಯಲ್ಲಿ KCF ರಾಷ್ಟ್ರೀಯ ನಾಯಕರಾದ ಫಾರೂಖ್ ಕಾಟಿಪಳ್ಳ,ಉಮರ್ ಹಾಜಿ ಅಳಕೆಮಜಲು,ಎನ್ ಎಸ್ ಹಾಜಿ,ಫೈಝಲ್,ದಮ್ಮಾಮ್ ಝೋನ್ ಅಧ್ಯಕ್ಷರಾದ ಫಾರೂಖ್ ಕುಪ್ಪೆಟ್ಟಿ,ತಮೀಮ್ ಕುಳೂರ್,ಅಲ್ಲದೆ ಪ್ರಮುಖ ಕೆ.ಸಿ.ಎಫ್ ಹಾಗೂ ಇತರ ಸ್ಥಾಪನೆಗಳ ನಾಯಕರು ಹಾಜರಿದ್ದರು.

ಡಿ.ಪಿ.ಯೂಸುಫ್ ಸಖಾಫಿ ಉಸ್ತಾದರು ನೂತನ ಸಮಿತಿಯನ್ನು ಅನುಮೋದಿಸಿದರು.

ಸಲಹೆಗಾರರು:

ಡಿ. ಪಿ ಯೂಸುಫ್ ಸಖಾಫಿ ಬೈತಾರ್
ಅಬೂಬಕ್ಕರ್ ರೈಸ್ಕೋ
N.S.ಹಾಜಿ
ಅಬ್ದುಲ್ ಕರೀಮ್ ಲತ್ವಫಿ
ಫಾರೂಕ್ ಕಾಟಿಪಳ್ಳ

ಗೌರವ ಅಧ್ಯಕ್ಷರು; ನಜೀರ್ ಕಾಶಿಪಟ್ನ
ಅಧ್ಯಕ್ಷರು;ಹಬೀಬ್ ಸಖಾಫಿ
ಉಪಾಧ್ಯಕ್ಷರು;ಅಶ್ರಫ್ ಕಕ್ಕಿಂಜೆ ಮತ್ತು ಶರೀಫ್ ಮೂಡಬಿದ್ರೆ
ಪ್ರಧಾನ ಕಾರ್ಯದರ್ಶಿ;ಹನೀಫ್ ಮೂಡಬಿದ್ರಿ
ಜೊತೆಕಾರ್ಯದರ್ಶಿ; ಶರೀಫ್ ಕಾಶಿಪಟ್ನ
ಕೋಶಾಧಿಕಾರಿ; ಮೊಹಮ್ಮದ್ ಮಲಬೆಟ್ಟು

ಸದಸ್ಯರು
ಉಸ್ಮಾನ್ ಹೊಸಂಗಡಿ
ಕಾಸಿಂ ಗಡಿಯಾರ್
ಝುಲ್ಫಿಕಾರ್
ಎಚ್ ಎ ಶರೀಫ್ ಕಾಶಿಪಟ್ನ
ಫಾರೂಖ್ ಕುಪ್ಪೆಟ್ಟಿ
ಉಮರ್ ಅಳಕೆ ಮಜಲು
ಬಷೀರ್ ಗಂಟಲ್ಕಟ್ಟೆ
ಉಸ್ಮಾನ್ ಎಚ್
ಫೈಝಲ್
ಶಾಕಿರ್ ವೇಣೂರ್
ಅಶ್ರಫ್ ನಾವುಂದ
ತಮೀಮ್ ಕುಳೂರ್
ಶರೀಫ್ ಕಣ್ಣಂಗಾರ್
ನಾಸಿರ್ ಕುಂದಾಪುರ.

ನೂತನ ಸಮಿತಿ ಅಧ್ಯಕ್ಷರಾದ ಹಬೀಬ್ ಸಖಾಫಿ ಹೊಸ ಸಮಿತಿಗೆ ಎಲ್ಲರ ಸಹಕಾರವನ್ನು ಕೋರಿದರು,ಹನೀಫ್ ಮೂಡಬಿದ್ರಿ ದನ್ಯವಾದಗೈದರು.

error: Content is protected !! Not allowed copy content from janadhvani.com