ಮಂಗಳೂರು: ಇತ್ತೀಚೆಗೆ ಆರ್ಯ ಪ್ರಮೋದ್ ಮುತಾಲಿಕ್ ತನ್ನ ಸವರ್ಣೀಯರ ಅಣತಿಯಂತೆ, ಈ ರಾಜ್ಯದ ಸಾಮಾನ್ಯ ಜನರ ಮಧ್ಯೆ ದ್ವೇಷದ ಅಂತರ ಹೆಚ್ಚಿಸಲು, ಸುಳ್ಳಿನ ಹೇಳಿಕೆಯನ್ನು ಮುಂದುವರಿಸುವ ಭರದಲ್ಲಿ ಮುಸ್ಲಿಮರೊಂದಿಗೆ ಆಭರಣದ ವ್ಯವಹಾರ ಮಾಡಬಾರದು ಎಂದು ರಾಗ ಎಳೆದಿದ್ದಾರೆ.ಮತ್ತು ಮುಸ್ಲಿಮರು ಅನ್ಯ ಮತೀಯ ಹುಡುಗಿಯರನ್ನು ಮತಾಂತರಗೊಳಿಸಿದ್ದಾರೆ ಎಂಬಿತ್ಯಾದಿ ಹಸಿ ಹಸಿ ಸುಳ್ಳುಗಳ ಅಪಪ್ರಚಾರ ಮಾಡಿರುತ್ತಾರೆ.
ಈ ದೇಶದ ಆಡಳಿತ ವೈಫಲ್ಯವನ್ನು ಈ ದೇಶದ ರಾಜ್ಯದ ಜನರು ಚರ್ಚಿಸಬಾರದು ಎಂದು ಮುಸ್ಲಿಮರ ವಿರುದ್ದತೆ ಯನ್ನು ವೈಭವೀಕರಿಸ ಲಾಗುತ್ತಿದೆ. ಮುತಾಲಿಕ್ ತಿಳಿಯಲಿ ಇಂತಹ ಮುತಾಲಿಕನ ಅದೆಷ್ಟೋ ‘ ಬ್ಯಾನ್ ‘ ಗಳನ್ನು ಈ ಸಮುದಾಯ ಜೀರ್ಣಿಸಿಕೊಂಡಿದೆ. ಈ ದೇಶದ ಹಿಂದುಳಿದ ವರ್ಗ, ಪರಿಶಿಷ್ಟರು, ಬುಡಕಟ್ಟು ಜನಾಂಗ, ಮೂಲನಿವಾಸಿಗಳು ವ್ಯತ್ಯಸ್ತ ಅವಧಿಗಳಲ್ಲಿ ಈ ದೇಶದ ಮುಸ್ಲಿಮರೊಂದಿಗೆ ಬಾಳಿ, ಬದುಕಿ ವ್ಯವಹರಿಸಿದವರು.
ವ್ಯವಹಾರ ಎಂಬುದು ವಿವಿಧ ವರ್ಗಗಳ ಮಧ್ಯೆಗಿನ ಒಂದು ಮಹಾ ಕೊಂಡಿ. ಅದು ನಿಸರ್ಗ ನಿಯಮ, ಅದನ್ನು ಸ್ಥಗಿತ ಗೊಳಿಸಲು ಮುತಾಲಿಕ್ ನಂತಹ ಅದೆಷ್ಟೋ ಆರ್ಯರು ಬಂದರೂ ತಡೆಯಲು ಸಾದ್ಯವಿಲ್ಲ. ವ್ಯವಹಾರ ಎಂಬುದು ಈ ನೆಲದ ಮಣ್ಣಿನ ಅವಿಭಾಜ್ಯ ಅಂಗ ಮತ್ತು ಒಂದು ನಿರ್ಧಿಷ್ಟ ವಿನಿಮಯ ವಿಧಾನ. ಕುಟುಂಬ, ಪ್ರಗತಿ, ಸಾಮರಸ್ಯದ ಬಗ್ಗೆ ಎಳ್ಳಷ್ಟೂ ಪರಿಜ್ಞಾನ ಇಲ್ಲದ ಈ ಆರ್ಯ ಮುತಾಲಿಕನಿಗೆ ಏನು ಗೊತ್ತು ನಿಸರ್ಗ ನಿಯಮ.
ಮುತಾಲಿಕ ನಂತಹ ಅದೆಷ್ಟೋ ‘ ಬ್ಯಾನ್ ‘ ಗಳಿಗೆ, ಈ ಸಮುದಾಯದ ಸಮೃದ್ಧಿಯನ್ನು ಕಿಂಚಿತ್ತೂ ಅಲುಗಾಡಿಸಲು ಸಾದ್ಯವಿಲ್ಲ. ಈ ಸಮುದಾಯ ಅದೆಷ್ಟೋ ‘ ಬ್ಯಾನ್ ‘ ಗಳನ್ನೂ ಕಂಡೂ, ಕೇಳಿ, ಜೀರ್ಣಿಸಿ ಅನಭವವಿದೆ. ಮುತಾಲಿಕನಂತಹ ಸಾವಿರ ಆರ್ಯರು ಸ್ವತಃ ಅಥವಾ ತನ್ನ ಗುಲಾಮರಲ್ಲಿ ಹೇಳಿಕೆ ಕೊಡಿಸಿದರೂ ಜನರ ಮಧ್ಯೆ ನಿಸರ್ಗ ಸ್ಥಾಪಿತವಾದ ಕೊಡು ಕೊಳ್ಳುವಿಕೆ ಯನ್ನು ನಿರ್ಭಂಧಿಸಲು ಸಾದ್ಯವಿಲ್ಲ ಎನ್ನುವುದನ್ನು ಅರಿಯಲಿ.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.