janadhvani

Kannada Online News Paper

ಉಳ್ತೂರು ಅಲ್ ಮದ್ರಸತುಲ್ ಖಾದ್ರಿಯಾ: ಪಬ್ಲಿಕ್ ಪರೀಕ್ಷೆಯಲ್ಲಿ ಶೇ100 ಫಲಿತಾಂಶ

ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆ ಯಲ್ಲಿ ಉಳ್ತೂರು ಅಲ್ ಮದ್ರಸತುಲ್ ಖಾದ್ರಿಯಾ ಮದ್ರಸ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಶೇಕಡಾ 100% ಫಲಿತಾಂಶ ದಾಖಲಿಸಿದ್ದಾರೆ.

ಹತ್ತನೆ ತರಗತಿಯಲ್ಲಿ ತನ್ವೀರುನ್ನೀಸಾ ಪ್ರಥಮ ಮಶ್ರೂಫಾ ದ್ವಿತೀಯ ಏಳನೇ ತರಗತಿಯಲ್ಲಿ ಆಯಿಷತ್ ಶಾಕಿರ ಪ್ರಥಮ ಸ್ಥಾನ ಸಫಾ ಸಿದ್ದೀಕ್ ದ್ವಿತೀಯ ಸ್ಥಾನ ಹಾಗೂ ಐದನೇ ತರಗತಿಯಲ್ಲಿ ಸಯ್ಯೀದ್ ಮಾಲಿಕ್ ತಂಙಳ್ ಪ್ರಥಮ ಸ್ಥಾನ ರಿಜ್ವಾನ್ ದ್ವಿತೀಯ ಸ್ಥಾನವನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾರೆ.

ಈ ಸಂದರ್ಭದಲ್ಲಿ ಅಲ್ ಮದ್ರಸತುಲ್ ಖಾದ್ರಿಯಾ ಉಳ್ತೂರು ಮದ್ರಸ ಅಧ್ಯಾಪಕರು ಗಳಾದ ಬಹು:ಝಕರಿಯ ಸಖಾಫಿ ಕೊಡಿಪ್ಪಾಡಿ, ಬಹು:ನಿಝಾರ್ ಝುಹ್ರಿ ಕನ್ಯಾನ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಗಳನ್ನು ಜಮಾಹತ್ ಆಡಳಿತ ಸಮೀತಿಯು ಹಾಗೂ ಊರಿನವರೂ ಹುಮ್ಮಸ್ಸು ನೀಡಿ ಅಭಿನಂದನೆ ಸಲ್ಲಿಸಿದರು.

✍️ಒಮಾನ್ ಝುಹ್ರಿ

error: Content is protected !! Not allowed copy content from janadhvani.com