ನವದೆಹಲಿ: ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಿನೇದಿನೆ ಒಂದಲ್ಲ ಒಂದು ಕಡೆ ಒಂದಲ್ಲ ಒಂದು ರೀತಿಯಲ್ಲಿ ವಂಚಿಸಿ ಹಣ ಲಪಟಾಯಿಸುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದೆ.
ಅದರಲ್ಲೂ ಈ ಎರಡು ಮೊಬೈಲ್ಫೋನ್ ನಂಬರ್ಗಳಿಂದ ಕರೆ ಬಂದರೆ ಹುಷಾರು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುನ್ನೆಚ್ಚರಿಕೆಯನ್ನು ನೀಡಿದೆ. ಎಸ್ಬಿಐ ಗ್ರಾಹಕರಿಗೆ +91-8294710946 ಮತ್ತು +91-7362951973 ನಂಬರ್ಗಳಿಂದ ಬಹಳಷ್ಟು ಕರೆ ಹಾಗೂ ಸಂದೇಶಗಳು ಹೋಗುತ್ತಿದ್ದು, ಕೆವೈಸಿ ನೆಪದಲ್ಲಿ ಕೆಲವೊಂದು ಫಿಷಿಂಗ್ ಲಿಂಕ್ ಕ್ಲಿಕ್ ಮಾಡುವಂತೆ ಕೇಳಿಕೊಳ್ಳಲಾಗುತ್ತಿದೆ.
ಆದರೆ ಬ್ಯಾಂಕ್ ಆ ರೀತಿ ಯಾರಿಗೂ ಕರೆ ಮಾಡಿ ಕೆವೈಸಿ ಇತ್ಯಾದಿ ಕೇಳವುದಿಲ್ಲ. ಮೇಲಿನ ಎರಡು ನಂಬರ್ಗಳು ಬ್ಯಾಂಕ್ಗೆ ಸಂಬಂಧಪಟ್ಟವಲ್ಲ ಎಂದು ಸ್ಪಷ್ಟನೆ ನೀಡಿರುವ ಎಸ್ಬಿಐ, ಆ ನಂಬರ್ಗಳ ಕರೆ ಮತ್ತು ಮೆಸೇಜ್ಗಳಿಗೆ ಪ್ರತಿಕ್ರಿಯಿಸಬಾರದು ಎಂದು ತಿಳಿಸಿದೆ.
HDFC Bank ಹೆಸರಲ್ಲಿಯೂ ಇಂತಹ ಅನೇಕ ಮೆಸೇಜ್ ಗಳು ಬರುತ್ತಿವೆ. HDFC ಬ್ಯಾಂಕ್ ಗ್ರಾಹಕರನ್ನೂ ಎಚ್ಚರಿಸಬೇಕಾಗಿದೆ. ಇಂತಹಾ ವಂಚನೆ ವಿಷಯದಲ್ಲಿ ಕರ್ನಾಟಕ ಪೊಲೀಸರು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ ! 😢
ಇದರ ಹಿಂದೆ ಬ್ಯಾಂಕ್ನವರೇ ಷಾಮೀಲಾಗಿರಬಹುದು…ತನ್ನ ಗ್ರಾಹಕರಿಗೆ ಚಳ್ಳೆ ಹಣ್ಣು ತಿನಿಸುತ್ತಿರಬೇಕು…ಫೇಕು ಭಾರತೀಯರನ್ನು ಮಂಗ ಮಾಡುತ್ತಿರುವುದನ್ನು ನೋಡಿ ಪುಳಕ ಗೊಂಡಿರಬೇಕು