janadhvani

Kannada Online News Paper

ಶರೀಫ್ ಬಾವಾ (ಗಲ್ಫ್ ಕೊಲಮ್) ಜುಬೈಲ್ ನಲ್ಲಿ ನಿಧನ ಅಂತ್ಯ ಕ್ರೀಯೆಗೆ ಸಹಕರಿಸಿದ ಕೆ.ಸಿ.ಎಫ್

ಸೌದಿ ಅರೇಬಿಯಾ: ಜುಬೈಲ್ ನಲ್ಲಿ ಕಳೆದ ಹಲವು ವರ್ಷಗಳಿಂದ ಉದ್ಯಮ ನಡೆಸುತ್ತಿದ್ದ ಮಂಗಳೂರು ನಿವಾಸಿ ಮುಹಮ್ಮದ್ ಶರೀಫ್ ಬಾವಾ ಅಬ್ದುಲ್ ಹಮೀದ್ ಎಂಬುವವರು ಎಪ್ರಿಲ್ 9 ರಂದು ಹ್ರದಯಾಘಾತದಿಂದ ನಿಧನರಾಗಿದ್ದರು.

ಮರಣೋತ್ತರ ಕ್ರೀಯೆಗೆ ಬೇಕದ ವ್ಯವಸ್ಥೆ ಕಲ್ಪಿಸಲು ಕೆ.ಸಿ.ಎಫ್ ಕೂಡಲೇ ಸ್ಪಂದಿಸಿ ದಾಖಲೆ ಪತ್ರ ಹಾಗೂ ಭಾರತೀಯ ರಾಯಬಾರಿ ಕಛೇರಿ ಹಾಗು ಇನ್ನಿತರ ವ್ಯವಸ್ಥೆಗಳನ್ನು ಸರಿಪಡಿಸಿ ಎಪ್ರಿಲ್ 12 ರಂದು ಜುಬೈಲ್ ನಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು.

ಮೃತರು.ತಾಯಿ ಹೆಂಡತಿ ಹಾಗು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಈ ಕಾರ್ಯದಲ್ಲಿ ಸಹಕರಿಸಿದ ಕೆ.ಸಿ.ಎಫ್ ಜುಬೈಲ್ ಝೋನ್ ಸಾಂತ್ವನ ತಂಡದ ನಾಯಕರಾದ ಹಮೀದ್ ಕೃಷ್ಣಾಪುರ, ನೌಫಲ್ ಮುಲ್ಕಿ ಹಾಗು ದಮ್ಮಾಮ್ ಝೋನ್ ಸಾಂತ್ವನ ತಂಡದ ನಾಯಕರಾದ ಬಾಷಾ ಗಂಗಾವಳಿ ಮತ್ತು ಕುಟುಂಬ ಸದಸ್ಯರಾದ ಮುಹಮ್ಮದ್ ಝೀಶಾನ್, ಕೆ.ಸಿ.ಎಫ್ ಹಿತೈಷಿ ಇಬ್ಬ ಬಜ್ಪೆ ಹಾಗು ಇತರ ಕೆ.ಸಿ.ಎಫ್ ನಾಯಕರುಗಳಿಗೆ ಕೃತಙ್ನತೆ ಸಲ್ಲಿಸುತ್ತಿದ್ದೇವೆ.

ಜುಬೈಲ್ ನಲ್ಲಿ ಅಂತ್ಯಕ್ರೀಯೆ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಕೆ.ಸಿ.ಎಫ್ INC ಪ್ರ.ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ ಹಾಗು ಸೌದಿ ರಾಷ್ಟ್ರೀಯ ನಾಯಕರು, ಹಲವಾರು ಸಂಘ ಕುಟುಂಬದ ನಾಯಕರು ಬಾಗಿಯಾಗಿ ಮೃತರಿಗಾಗಿ ದುಆ ನೆರೆವೇರಿಸಲಾಯಿತು.

error: Content is protected !! Not allowed copy content from janadhvani.com