ಉಡುಪಿ: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಹಮ್ಮಿಕೊಂಡ ಡಿವಿಷನ್ ಕಾನ್ಪೆರೆನ್ಸ್ ಇತ್ತೀಚೆಗೆ ಡಿವಿಷನ್ ಅಧ್ಯಕ್ಷರಾದ ಇಬ್ರಾಹಿಂ ಶಾಹಿದ್ ಫಾಲಿಲಿ ಮಣಿಪುರ ಇವರ ಅಧ್ಯಕ್ಷತೆಯಲ್ಲಿ, ಲಯನ್ಸ್ ಭವನ ಬ್ರಹ್ಮಗಿರಿ, ಉಡುಪಿಯಲ್ಲಿ ನಡೆಸಲಾಯಿತು.
ಪ್ರಸ್ತುತ ಸಂದರ್ಭದಲ್ಲಿನ ಸಮಾಜಕ್ಕೆ ಬೇಕಾದ ಅತೀ ಅಗತ್ಯ ವಿಷಯವಾದ ರಾಜಕೀಯ, ಧರ್ಮ , ಸಂವಿಧಾನ ಬಗ್ಗೆ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ರಾಜ್ಯದಂತಹ ಡಿವಿಷನ್ ಕೇಂದ್ರಗಳಲ್ಲಿ ಹಮ್ಮಿಕೊಂಡಿರುವ ಈ ಮಹತ್ತರವಾದ ಕಾನ್ಪೆರೆನ್ಸ್ ನ ಮುಖ್ಯ ಭಾಷಣಗಾರರಾಗಿ ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಲ್ ಸುಫ್ಯಾನ್ ಸಖಾಫಿ ಹಾಗೂ ಎಸ್ಸೆಸ್ಸೆಫ್ ರಾಜ್ಯ ಸದಸ್ಯ ರಖೀಬ್ ಮಾಸ್ಟರ್ ಕನ್ನಂಗಾರ್ ವಿಷಯ ಮಂಡಿಸಿದರು.
ಈ ಸಂದರ್ಭದಲ್ಲಿ ಡಿವಿಷನ್ ನಿಕಟಪೂರ್ವ ಅಧ್ಯಕ್ಷರಾದ ಸೈಯ್ಯೆದ್ ಯೂಸುಫ್ ನವಾಝ್ ಅಲ್ ಹುಸೈನಿ ತಂಙಲ್ ಹೂಡೆ ಗುಲ್ಬರ್ಗ ಇವರು ಕಾನ್ಪೆರೆನ್ಸ್ ಗೆ ನೇತ್ರತ್ವ ನೀಡಿದರು. ಸೈಯ್ಯೆದ್ ಜುನೈದ್ ಅರ್ರಿಫಾಯಿ ತಂಙಲ್ ರಂಗನಕೆರೆ ದುವಾಗೈದರು. ಎಸ್.ವೈ.ಎಸ್ ಉಡುಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಿವಿಷನ್ ಮಾಜಿ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಸಹದಿ ದೊಡ್ಡಣಗುಡ್ಡೆ, ಮಹಮ್ಮದ್ ಆಲಿ ಸಹದಿ ಬರುವ, ಎಸ್.ವೈ.ಎಸ್ ಉಡುಪಿ ಸೆಂಟರ್ ಅಧ್ಯಕ್ಷರಾದ ಶಾಬಾನ್ ಹಾಜಿ, ಎಸ್.ಜೆ.ಎಂ ಉಡುಪಿ ರೇಂಜೆ ಅಧ್ಯಕ್ಷರಾದ ಬಶೀರ್ ಮದನಿ ಕಟಪಾಡಿ, ರಿಲೀಪ್ ಚೇರ್ಮೆನ್ ಅಬ್ದುರ್ಝಾಕ್ ಮುಸ್ಲಿಯಾರ್, ಮುಸ್ಲಿಂ ಜಮಾಅತ್ ಜಿಲ್ಲಾ ಹಾಗೂ ತಾಲೂಕು ನಾಯಕರಾದ ಸುಬುಹಾನ್ ಹೊನ್ನಾಳ, ಮುಸ್ತಾಕ್ ಹೊನ್ನಾಳ, ಅಶ್ರಪ್ ಹೂಡೆ, ಫಾರೂಕ್ ರಂಗನಕೆರೆ, ಎಸ್.ಎಂ.ಎ ನಾಯಕರಾದ ವೈ.ಎಮ್ ಇಲ್ಯಾಸ್ ಕಟಪಾಡಿ, ರಾಜ್ಯ ನಾಯಕರಾದ ಕೆ.ಎಸ್.ಎಂ ಮನ್ಸೂರ್ ದೊಡ್ಡಣಗುಡ್ಡೆ, ಸಪ್ವಾನ್ ಚಿಕ್ಕಮಗಳೂರು, ರವೂಪ್ ಖಾನ್ ಕುಂದಾಪುರ, ಜಿಲ್ಲಾ ನಾಯಕರಾದ ಇಬ್ರಾಹಿಂ ಮಜೂರು, ಆಸೀಪ್ ಸರಕಾರಿಗುಡ್ಡೆ, ನಝೀರ್ ಸಾಸ್ತಾನ, ಕಾನ್ಪರೆನ್ಸ್ ಚೇರ್ಮೆನ್ ಮಜೀದ್ ಕಟಪಾಡಿ, ಕಟಪಾಡಿ ಸೆಕ್ಟರ್ ಕಾರ್ಯದರ್ಶಿ ಸಲ್ಮಾನ್ ಮಣಿಪುರ, ಮಣಿಪಾಲ ಸೆಕ್ಟರ್ ಅಧ್ಯಕ್ಷ ನವಾಝ್ ಉಡುಪಿ, ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಝುಬೇರ್ ಖಾನ್ ಸಾಸ್ತಾನ, ಹಾಗೂ ಇನ್ನಿತರ ನಾಯಕರು ಉಪಸ್ಥಿತಿ ಇದ್ದರು.
ಕಾರ್ಯಕ್ರಮದಲ್ಲಿ ಡಿವಿಷನ್ ನಾಯಕ ಅನ್ಸಾರ್ ಸಂತೋಷ್ ನಗರ ನ’ಅತ್ ಪಠಿಸಿದರು. ಡಿವಿಷನ್ ಕಾನ್ಪೆರೆನ್ಸ್ ಕನ್ವೀನರ್ ಸಿದ್ದೀಕ್ ಸಂತೋಷ್ ನಗರ ಸ್ವಾಗತಿಸಿದರು. ಡಿವಿಷನ್ ಕಾರ್ಯದರ್ಶಿ ಶಿಹಾಬ್ ಬಾರ್ಕೂರು ವಂದಿಸಿದರು. ನಾಸೀರ್ ಭದ್ರಗಿರಿ ಕಾರ್ಯಕ್ರಮ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ