janadhvani

Kannada Online News Paper

2029 ರಲ್ಲಿ ಭಾರತದಲ್ಲಿ ಮುಸ್ಲಿಂ ಪ್ರಧಾನಿ- ಯತಿ ನರಸಿಂಗಾನಂದ ಭವಿಷ್ಯ

ಮುಂದಿನ 20 ವರ್ಷಗಳಲ್ಲಿ ಹಿಂದೂಗಳು ಇಸ್ಲಾಂಗೆ ಮತಾಂತರ

ನವದೆಹಲಿ, ಏ.4- 2029, 2034 ಅಥವಾ 2039 ರಲ್ಲಿ ಮುಸ್ಲಿಂ ವ್ಯಕ್ತಿ ಭಾರತದ ಪ್ರಧಾನಿಯಾಗಲಿದ್ದಾರೆ. ಒಮ್ಮೆ ಮುಸ್ಲಿಂ ಪ್ರಧಾನಿಯಾದರೆ, ಶೇ 50 ಹಿಂದೂಗಳು ಇಸ್ಲಾಂಗೆ ಮತಾಂತರವಾಗಲಿದ್ದಾರೆ ಎಂದು ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಗಾನಂದ ಭವಿಷ್ಯ ನುಡಿದಿದ್ದಾರೆ.

ದೆಹಲಿ ಆಡಳಿತದ ಅನುಮತಿ ಪಡೆಯದ ‘ಹಿಂದೂ ಮಹಾಪಂಚಾಯತ್’ ಅನ್ನು ಉದ್ದೇಶಿಸಿ ಮಾತನಾಡಿದ ಅವರು,
ಆಗ, ಶೇ 40ರಷ್ಟು ಜನರು ಕೊಲ್ಲಲ್ಪಡಲಿದ್ದಾರೆ. ಉಳಿದ ಶೇ 10ರಷ್ಟು ಜನರು ಮುಂದಿನ 20 ವರ್ಷಗಳಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಅಥವಾ ಪಾಶ್ಚಾತ್ಯ ದೇಶಗಳನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಮುಂದಿನ 20 ವರ್ಷಗಳಲ್ಲಿ ಹಿಂದೂಗಳು ಮುಸ್ಲಿಮರಾಗಿ ಮತಾಂತರಗೊಳ್ಳಲಿದ್ದಾರೆ. ಹೀಗಾಗಿ, ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು ಎಂದಿದ್ದಾರೆ.
ಇನ್ನೂ, ನರಸಿಂಗಾನಂದ ಅವರು ಹರಿದ್ವಾರದಲ್ಲಿ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

error: Content is protected !! Not allowed copy content from janadhvani.com