janadhvani

Kannada Online News Paper

ಭೂಮಿಯಲ್ಲಿ ವಿನಯವಂತರಾಗಿ ಜೀವಿಸಿ ಅಲ್ಲಾಹನ ಸಂಪ್ರೀತಿಯನ್ನು ಗಳಿಸಬೇಕು – ಪೇರೋಡ್ ಉಸ್ತಾದ್

ಭೂಮಿಯಲ್ಲಿ ಪ್ರತಿಯೊಬ್ಬರೂ ಅಹಂಕಾರವನ್ನು ತೊರೆದು ಜೀವಿಸಬೇಕು, ಈ ಲೋಕವು ಯಾರಿಗೂ ಶಾಶ್ವತವಲ್ಲ. ಆದ್ದರಿಂದ ಎಲ್ಲರೂ ಅಧಿಕಾರ ವ್ಯಾಮೋಹವಿಲ್ಲದೇ, ಸತ್ಯ, ನ್ಯಾಯ, ವಿನಯ, ತಾಳ್ಮೆಯಿಂದ ಜೀವನ ನಡೆಸಿ ಅಲ್ಲಾಹನ ಸಂಪ್ರೀತಿಯನ್ನು ಗಳಿಸಲು ಮುಂದಾಗಬೇಕು ಎಂದು ಶೈಖುನಾ ಪೇರೋಡ್ ಉಸ್ತಾದ್ ಸಲಹೆ ನೀಡಿದರು.

ಅವರು ಮಾರ್ಚ್ 22ರ ಗುರುವಾರದಂದು ಕರ್ನಾಟಕ ರ ಸುನ್ನಿ ಯುವಜನ ಸಂಘ (ರಿ.) ಎಸ್‌ವೈಎಸ್ ದ.ಕ. ಈಸ್ಟ್ ಜಿಲ್ಲಾ ಸಮಿತಿಯು ಮರ್ಹೂಂ ಜೋಗಿಬೆಟ್ಟು ಆಶಿಖ್ ಫಹದ್ ಫಖ್ರುದ್ದೀನ್ ವೇದಿಕೆ ಜನಪ್ರಿಯ ಗಾರ್ಡನ್ ನೇರಳಕಟ್ಟೆಯಲ್ಲಿ ಸ್ಟಿಮ್ಯುಲೇಟ್22 ಅಂಗವಾಗಿ ಆಯೋಜಿಸಿದ ಜಿಲ್ಲಾ ಕ್ಲಾಸ್ ರೂಂ ಕಾರ್ಯಕ್ರಮದಲ್ಲಿ ಮುಖ್ಯ ತರಗತಿ ನಡೆಸಿ ಮಾತನಾಡಿದರು.

ಎಸ್‌ವೈಎಸ್ ರಾಜ್ಯ ನಾಯಕರಾದ ಅಸಯ್ಯಿದ್ ಇಸ್ಮಾಯಿಲ್ ತಂಙಲ್ ಉಜಿರೆರವರು ದುಆಃ ನೆರೆವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಸುನ್ನಿ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರಾದ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ವೈಎಸ್ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸ‌ಅದಿ ಮಜೂರು ಅಧ್ಯಕ್ಷತೆ ವಹಿಸಿದರು.

ಎಸ್‌ವೈಎಸ್ ರಾಜ್ಯಾಧ್ಯಕ್ಷರಾದ ಡಾ. ಎಂಎಸ್ಎಂ ಝೈನಿ ಕಾಮಿಲ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿದರೆ ಅದು ಸಮುದಾಯಕ್ಕೆ ನಷ್ಟವನ್ನು ತರುತ್ತದೆ. ಸಮಾಜಕ್ಕೆ ನಾಯಕತ್ವ ನೀಡುವ ಶಕ್ತಿ ಸುನ್ನಿ ಸಂಘಟನೆಯಿಂದ ಮಾತ್ರ ಸಾಧ್ಯ. ಸುನ್ನಿ ಯುವಜನ ಸಂಘಟನೆಯು ಆವೇಶಕ್ಕೊಳಗಾಗಿ ಯಾವುದೇ ತಾತ್ಕಾಲಿಕ ತೀರ್ಮಾನವನ್ನು ಕೈಗೊಳ್ಳುವ ಸಂಘಟನೆಯಲ್ಲ ಎಂದರು.

ರಾಜ್ಯ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸ‌ಅದಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ, ರಾಜ್ಯ ಸದಸ್ಯರಾದ ಕೆ ಎಂ ಸಿದ್ದೀಖ್ ಮೊಂಟುಗೋಳಿ, ಎಸ್‌ಎಂಎ ರಾಜ್ಯ ಕಾರ್ಯದರ್ಶಿ ಎನ್ ಎಸ್ ಉಮರ್ ಮಾಸ್ಟರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ವೇದಿಕೆಯಲ್ಲಿ ಸಯ್ಯಿದ್ ಹಬೀಬುಲ್ಲಾಹ್ ತಂಙಳ್ ಕುಪ್ಪೆಟ್ಟಿ, ಸಯ್ಯಿದ್ SM ತಂಙಳ್, ಸಯ್ಯಿದ್ ಅಬ್ದುಲ್ ಸಲಾಂ ತಂಙಳ್, ಸಯ್ಯಿದ್ ಸಾದಾತ್ ತಂಙಲ್, ಅಬೂಬಕ್ಕರ್ ಫೈಝಿ ಪೆರುವಾಯಿ, ಕೆ ಇ ಅಬ್ದುಲ್ ಖಾದರ್ ಸಾಲೆತ್ತೂರು, ಎಸ್‌ವೈಎಸ್ ರಾಜ್ಯ ಸಮಿತಿ ಕೋಶಾಧಿಕಾರಿ ಅಬ್ದುಲ್ ಹಕೀಂ ಕೊಡ್ಲಿಪೇಟೆ, ಸಾಂತ್ವನ ಕಾರ್ಯದರ್ಶಿ ಬಶೀರ್ ಸ‌ಅದಿ ಬೆಂಗಳೂರು, ಸದಸ್ಯರಾದ ಅಶ್ರಫ್ ಸಅದಿ ಮಲ್ಲೂರು,ಹಮೀದ್ ಬೀಜಕೊಚ್ಚಿ, ವಿ ಪಿ ಮೊಯ್ದಿನ್, ಹಿರಿಯ ವಿದ್ವಾಂಸರಾದ ಅಹ್ಮದ್ ಮದನಿ ನೇರಳಕಟ್ಟೆ, ಈಸ್ಟ್ ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ಕೋಶಾಧಿಕಾರಿ ಜಿ ಮುಹಮ್ಮದ್ ಕುಂಞಿ, ಸಾಮಾಜಿಕ ಕಾರ್ಯದರ್ಶಿ ಕರೀಂ ಹಾಜಿ ಚೆನ್ನಾರ್, ಸಾಂತ್ವಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಜಿಲ್ಲಾ ಸದಸ್ಯರಾದ ಕೆ ಬಿ ಕಾಸಿಂ ಹಾಜಿ, ರಾಜ್ಯ ಟೀಮ್ ಇಸಾಬಾ ಡೈರೆಕ್ಟರ್ ಇಕ್ಬಾಲ್ ಬಪ್ಪಳಿಗೆ, ಜಿಲ್ಲಾ ಇಸಾಬಾ ಡೈರೆಕ್ಟರ್ ಸಂಶುದ್ದೀನ್ ಝಂಝಂ, ಕೆಸಿಎಪ್ ಸದಸ್ಯರಾದ ಉಮರ್ ಸಖಾಫಿ ಒಮಾನ್, ಖಳಂದರ್ ಕಬಕ, ಆದಂ ಹಾಜಿ ಪಡೀಲ್ ಮೊದಲಾದವರು ಉಪಸ್ಥಿತಿಯಿದ್ದರು.

ಎಸ್‌ವೈಎಸ್ ಈಸ್ಟ್ ಜಿಲ್ಲಾ ಸದಸ್ಯರು ಸೇರಿದಂತೆ 20 ಸೆಂಟರುಗಳ ಹಾಗೂ 224 ಬ್ರಾಂಚುಗಳ ಸಾವಿರಕ್ಕೂ ಮಿಕ್ಕ ಪ್ರತಿನಿಧಿಗಳು ಹಾಗೂ ನೂರಕ್ಕೂ ಮಿಕ್ಕ ಟೀಂ ಇಸಾಬಾ ಸ್ವಯಂಸೇವಕರು ಭಾಗವಹಿಸಿದರು. ಕಾರ್ಯಕ್ರಮವು ಅತ್ಯಂತ ಶಿಸ್ತಿನಿಂದ ಕೂಡಿತ್ತು.

ಎಸ್‌ವೈಎಸ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಬಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ದ‌ಅ್‌ವಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಿಲ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಅಬ್ಬಾಸ್ ಮದನಿ ಧನ್ಯವಾದಗೈದರು. ಈಸ್ಟ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸ‌ಈದ್ ನೇರಳಕಟ್ಟೆ ಸಹಕರಿಸಿದರು.

error: Content is protected !! Not allowed copy content from janadhvani.com