janadhvani

Kannada Online News Paper

ಬೆಳ್ತಂಗಡಿ ಕೇಂದ್ರ ಮಸ್ಜಿದ್: ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ ಎ ನಝೀರ್ ಅವಿರೋಧ ಆಯ್ಕೆ

ಬೆಳ್ತಂಗಡಿ (ಮಾ 25): ಬೆಳ್ತಂಗಡಿ ಕೇಂದ್ರ ಖಿಲರ್ ಜುಮ್ಮಾ ಮಸ್ಜಿದ್ ಇದರ ವಾರ್ಷಿಕ ಮಹಾಸಭೆಯು ಮಾರ್ಚ್ 25 ರಂದು ಶುಕ್ರವಾರ ಜುಮ್ಮಾ ನಮಾಝಿನ ಬಳಿಕ ಖಿಲರ್ ಜುಮ್ಮಾ ಮಸೀದಿಯ ಮದರಸ ಹಾಲ್ ನಲ್ಲಿ ನಡೆಯಿತು.

ಮಹಾಸಭೆಯನ್ನು ಜಮಾ’ಅತ್ ಖತೀಬರಾದ ಹನೀಫ್ ಫೈಝಿಯವರು ದುವಾ ಮೂಲಕ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ರಝಾಕ್ ಕೊಡಿಸಭೆಯವರು ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಅಧ್ಯಕ್ಷರಾದ ಬಿ ಎ ನಝೀರ್ ರವರು ಕಳೆದ ಸಾಲಿನ ಅವಧಿಯಲ್ಲಿ ನಡೆದ ಮಸೀದಿಯ ಅಭಿವೃದ್ಧಿ ಕಾರ್ಯವನ್ನು ವಿವರಿಸಿದರು.

ಇದೇ ವೇಳೆ ಬಿ ಎಚ್ ಮಹಮ್ಮದ್ ಗೌರವ ಅಧ್ಯಕ್ಷತೆಯಲ್ಲಿ ಹಳೆಯ ಸಮಿತಿಯನ್ನು ಬರ್ಕಾಸುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ನಝೀರ್ ಬಿ ಎ, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಕೊಡಿಸಭೆಯವರನ್ನು ಮರು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಹೊಸಬೆಟ್ಟು ಆಯ್ಕೆಯಾದರು.

ಸಮಿತಿಯ ಉಪಾಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಹನೀಫ್ ವರ್ಷಾ, ಮಹಮ್ಮದ್ ಕುದ್ರಡ್ಕ ಹಾಗೂ ಕಲಂದರ್ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಬಿ ಎಚ್ ಮಹಮ್ಮದ್ ರವರು ಆಯ್ಕೆಯಾದರು . ಈ ಸಂದರ್ಭದಲ್ಲಿ ಜಮಾತ್ ಬಾಂಧವರು ಉಪಸ್ಥಿತರಿದ್ದರು.

ಸಭೆಯನ್ನು ಕಾರ್ಯದರ್ಶಿ ರಝಾಕ್ ಕೊಡಿಸಭೆ ಸ್ವಾಗತಿಸಿ, ಯಾಕೂಬ್ ಮಾಸ್ಟರ್ ನಿರೂಪಿಸಿದರು.

error: Content is protected !! Not allowed copy content from janadhvani.com