janadhvani

Kannada Online News Paper

‘ನಮಗೆ ಮುಸ್ಲಿಂಮರ ವ್ಯಾಪಾರ ಬೇಡ’: ಹಿಂದೂ ಮಾಲೀಕತ್ವದ ಅಂಗಡಿಗಳ ಬಗ್ಗೆ ಅಪಪ್ರಚಾರ- ದೂರು ದಾಖಲು

ಎಲ್ಲಾ ‌ಸಮುದಾಯದವರು ನಮ್ಮ ಗ್ರಾಹಕರು ಎಂದ ಹಿಂದೂ ಅಂಗಡಿ ಮಾಲೀಕರು

ಮಂಗಳೂರು: ಹಿಂದೂ ವರ್ತಕರ ಹೆಸರಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ತಪ್ಪು ಸಂದೇಶ ವೈರಲ್ ಆಗುತ್ತಿದ್ದು, ಉಪ್ಪಿನಂಗಡಿಯ ಹಿಂದೂ ಮಾಲೀಕತ್ವದ ಅಂಗಡಿಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ.

ಉಪ್ಪಿನಂಗಡಿಯ 32 ಅಂಗಡಿಗಳ ಹಿಂದೂ ಅಂಗಡಿಗಳ ಹೆಸರು ಉಲ್ಲೇಖಿಸಿ, ನಮ್ಮ ಅಂಗಡಿಗಳಲ್ಲಿ ಯಾವುದೇ ವಸ್ತುಗಳನ್ನು ಮುಸ್ಲಿಂಮರಿಗೆ ಕೊಡುವುದಿಲ್ಲ, ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ ಎಂದು ವಿವಾದಾತ್ಮಕ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ.

ಈ ನಕಲಿ ಸಂದೇಶದ ವಿರುದ್ಧ ಉಪ್ಪಿನಂಗಡಿ ವರ್ತಕರ ಸಂಘ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು, ಮತೀಯ ಸಾಮರಸ್ಯ ಹಾಳು ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೇ ಎಲ್ಲಾ ‌ಸಮುದಾಯದವರು ನಮ್ಮ ಗ್ರಾಹಕರು ಎಂದು ತಿಳಿಸಿದ್ದಾರೆ.

error: Content is protected !! Not allowed copy content from janadhvani.com