ಮೊಂಟೆಪದವು:(ಜನಧ್ವನಿ ವಾರ್ತೆ) ಕಥುವಾದ 8 ವರ್ಷದ ಬಾಲಕಿ ಆಸಿಫಾಳನ್ನು ನಿರಂತರ ಅತ್ಯಾಚಾರಗೈದು ಕೊಲೆ ಮಾಡಲಾಗಿದ್ದು, ಇದು ಅತ್ಯಂತ ಅಮಾನವೀಯ ಹಾಗೂ ಪೈಶಾಚಿಕ ಕೃತ್ಯ .ಇಂತಹ ನೀಚ ಕೃತ್ಯವನ್ನು ಮಾಡಿದ ದುಷ್ಕರ್ಮಿಗಳನ್ನು ರಕ್ಷಿಸಲು ಪ್ರೊತ್ಸಾಹಿಸದೇ,ಎಲ್ಲರೂ ಜಾತಿ ಬೇದವಿಲ್ಲದೆ ಪಕ್ಷಾತೀತವಾಗಿ ಹೋರಾಡಿ,ಮುಗ್ದ ಮಗುವಿಗೆ ನ್ಯಾಯವನ್ನು ದೊರಕಿಸಕೊಡಬೇಕಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಕೆ.ಎಂ ಮುಸ್ತಫಾ ನಯೀಮಿ ಮೋಂಟುಗೋಳಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.