ಎರ್ನಾಕುಳಂ: ಪ್ರಮುಖ ಧಾರ್ಮಿಕ ವಿಧ್ವಾಂಸ, ಸಮಸ್ತ ಉಪಾಧ್ಯಕ್ಷ, ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷರಾದ ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಜಳ್ (74) ಅವರು ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ಇಂದು ವಫಾತ್ ಆಗಿದ್ದಾರೆ.
1972.ರಲ್ಲಿ ಜಾಮಿಯಾ ನೂರಿಯಾದಲ್ಲಿ ಸೇರಿದರು. 1975 ರಲ್ಲಿ ಫೈಝಿ ಪದವಿ ಪಡೆದರು.ಶಂಸುಲ್ ಉಲಮಾ ಇ.ಕೆ.ಅಬೂಬಕರ್ ಮುಸ್ಲಿಯಾರ್, ಕೊಟ್ಟುಮಲ ಅಬೂಬಕರ್ ಮುಸ್ಲಿಯಾರ್, ಎ.ಪಿ.ಮುಹಮ್ಮದ್ ಮುಸ್ಲಿಯಾರ್ ಮುಂತಾದವರು ಗುರುಗಳಾಗಿದ್ದರು.
1973ರಲ್ಲಿ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಸ್ಥಾಪಿಸಿದಾಗ ಸಯ್ಯಿದ್ ಹೈದರ್ ಅಲಿಯವರು ಅದರ ಮೊದಲ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು.
ಹಲವಾರು ಮೊಹಲ್ಲಾಗಳ ಖಾಝಿಯಾಗಿದ್ದ ಅವರು ಪಟ್ಟಿಕಾಡ್ ಜಾಮಿಯಾ ನೂರಿಯಾ, ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯ, ಕಡಮೇರಿ ರಹ್ಮಾನಿಯಾ ಅರೇಬಿಕ್ ಕಾಲೇಜು ಮತ್ತು ನಂದಿ ದಾರುಸ್ಸಲಾಮ್ ಅರೇಬಿಕ್ ಕಾಲೇಜು ಸೇರಿದಂತೆ ನೂರಾರು ಧಾರ್ಮಿಕ ಮತ್ತು ಲೌಕಿಕ ಸಂಸ್ಥೆಗಳ ಅಧ್ಯಕ್ಷರಾಗಿದ್ದರು.
2008ರಲ್ಲಿ ಅವರು ಸಮಸ್ತದ ಮುಶಾವರಾ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು. ಅಕ್ಟೋಬರ್ 2, 2010 ರಂದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಆಗಸ್ಟ್ 1, 2009 ರಂದು ಸೈಯದ್ ಮುಹಮ್ಮದಲಿ ಶಿಹಾಬ್ ತಂಜಳ್ ಅವರ ಮರಣದ ನಂತರ, ಹೈದರ್ ಅಲಿ ಶಿಹಾಬ್ ತಂಜಳ್ ಅವರು ಮುಸ್ಲಿಂ ಲೀಗ್‌ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು.
ಜೂನ್ 15, 1947 ರಂದು ಪಾಣಕ್ಕಾಡ್‌ನ ಕೊಡಪ್ಪನಕ್ಕಲ್‌ನಲ್ಲಿ ಜನಿಸಿದ ಅವರು ದಿವಂಗತ ಮಾಳಿಯೆಕ್ಕಲ್ ಸೈಯದ್ ಅಹ್ಮದ್ ಪೂಕೋಯ ತಂಜಳ್ (ಪಿಎಂಎಸ್ ಪೂಕೋಯ ತಂಜಲ್) ಮತ್ತು ಮರಿಯಮ್ ಚೆರಿಂಞ ಬೀವಿಯವರ ಮೂರನೇ ಪುತ್ರರಾಗಿದ್ದರು.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ