janadhvani

Kannada Online News Paper

ಆಸಿಫಾ ಹಂತಕರನ್ನು ನೇಣಿಗೇರಿಸಲು ಎಸ್‌.ವೈ.ಎಸ್ ಆಗ್ರಹ

ಮಂಗಳೂರು: ಎಂಟು ವಯಸ್ಸಿನ ಪುಟಾಣಿ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಅತಿ ಕ್ರೂರವಾಗಿ ಕೊಲೆಗೈದ ಕಿರಾತಕರ ಮೇಲೆ ಕಾನೂನಿನ ಯಾವುದೇ ರಿಯಾಯಿತಿಗಳಿಗೆ ಅವಕಾಶ ನೀಡದೆ ಇಡೀ ದೇಶಕ್ಕೆ ಮಾದರೀ ಯೋಗ್ಯವಾದ ರೀತಿಯಲ್ಲಿ ಬಹಿರಂಗ ವಾಗಿ ಗಲ್ಲಿಗೇರಿಸುವಂತೆ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಆಗ್ರಹಿಸಿದೆ.

ದೇಶದಲ್ಲಿ ಇಂತಹ ಅಮಾನವೀಯ ಕೃತ್ಯಗಳು ನಿರಂತರ ನಡೆಯುತ್ತಿದ್ದರೂ ಅದರ ಬಗ್ಗೆ ಅಧಿಕೃತ ರು ತೋರುವ ಅಸಡ್ಡೆ ಮತ್ತು ನಿಷ್ಕ್ರಿಯತೆ ಸಮಾನ ಕೃತ್ಯಗಳು ಸಾರ್ವತ್ರಿಕವಾಗಿ‌ ನಡೆಯಲು ಕಾರಣವಾಗುತ್ತಿದೆ, ಈ ಬಗ್ಗೆ ಪ್ರಧಾನ ಮಂತ್ರಿ ಮೋದಿ ಮೌನ ಮುರಿದು ದೇಶದ ಜನರ ಆತಂಕವನ್ನು ನೀಗಿಸಬೇಕೆಂದು ಎಸ್ ವೈ ಎಸ್ ರಾಜ್ಯಾಧ್ಯಕ್ಷ ಜಿಎಂಎಂ ಕಾಮಿಲ್ ಸಖಾಫಿ ಹಾಗೂ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com