ಮಂಗಳೂರು :ಹಿಜಾಬ್ ಮತ್ತು ಸಮವಸ್ತ್ರ ಸಂಬಂಧಿಸಿ ಶಿವಮೊಗ್ಗದಲ್ಲಿ ಶಾಲೆಗೆ ಹೋಗುವ ವಿಧ್ಯಾರ್ಥಿನಿಯೋರ್ವಳನ್ನ ದೃಶ್ಯ ಮಾಧ್ಯಮ ವರದಿಗಾರ ಹಿಂಬಾಲಿಸಿ,ಅಟ್ಟಾಡಿಸಿ ಚಿತ್ರೀಕರಣ ನಡೆಸಿ ವಿಧ್ಯಾರ್ಥಿಯ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸಿರುವುದು ಖಂಡನೀಯ.
ಪ್ರಜಾ ಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾದ ಮಾಧ್ಯಮ, ಇಂದು ಧಾರ್ಮಿಕ ಮೂಲಭೂತ ಹಕ್ಕು ಆದ ಮಹಿಳೆಯರ ಖಡ್ಡಾಯ ಹಿಜಾಬ್ ವಿಷಯವು ವಿವಾದದಲ್ಲಿರುವಾಗ,ಹಿಜಾಬ್ ಧರಿಸುವಿಕೆಯನ್ನು ಅಪರಾಧವೆಂದು ಬಿಂಬಿಸುವ ಪ್ರಯತ್ನಕ್ಕೆ ಇಳಿದಿದೆ. ಮಾಧ್ಯಮ ವರದಿಗಾರರು ವಿದ್ಯಾರ್ಥಿನಿಯನ್ನು ಅಟ್ಟಾಡಿಸಿ ಚಿತ್ರೀಕರಣ ಮಾಡುವ ಅವಶ್ಯಕತೆ ಏನಿತ್ತು?
ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಜನಾಂಗೀಯ ಮುಜುಗರ ಸೃಷ್ಟಿಸಿದರೆ ಅದರ ಪರಿಣಾಮ ವ್ಯತ್ಯಯ ವಾಗಬಹುದು. ಹಿಜಾಬ್ ಧರಿಸುವಿಕೆ ಸಾಮಾನ್ಯ ವಿಷಯ ಅದನ್ನು, ಈ ರೀತಿ ಮಾಡುವ ಅಗತ್ಯತೆ ಇರಲಿಲ್ಲ. ಇಂತಹ ಕಿರಣ್ ಕಾಂಕಾರಿ ಎಂಬ ವರದಿಗಾರನ ಕೋಮು ಮನಸ್ಥಿತಿಯಿಂದ ಇಡೀ ಮಾಧ್ಯಮ ರಂಗವು ತಲೆ ತಗ್ಗಿಸುವಂತಾಗಿದೆ. ವರದಿಗಾರ ಕಂಕಾರಿ ವಿರುದ್ಧ ಗೃಹ ಇಲಾಖೆ ಸ್ವಯಂಪ್ರೇರಿತರಾಗಿ ಕಾನೂನು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ