ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ಹೈಕೋರ್ಟ್ ಮಂಗಳವಾರ ಮಹತ್ವದ ವಿಚಾರಣೆ ನಡೆಸುತ್ತಿದೆ.
ವಿವಾದ ಸಂಬಂಧ ಸಲ್ಲಿಕೆಯಾಗಿರುವ ನಾಲ್ಕು ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಎಲ್ಲ ಭಾವನೆಗಳನ್ನು ಪಕ್ಕಕ್ಕೆ ಇರಿಸಿ. ಸಂವಿಧಾನ ಏನು ಹೇಳುತ್ತದೋ ಅದರಂತೆ ನಡೆಯುತ್ತೇವೆ. ಭಗದ್ಗೀತೆಗಿಂತ ಸಂವಿಧಾನವೇ ಮೇಲು ಎಂದು ವಿಚಾರಣೆ ವೇಳೆ ಹೇಳಿದ್ದಾರೆ.
ವಿಚಾರಣೆ ವೇಳೆ ವಿವಾದ ಸಂಬಂಧ ಮಧ್ಯಪ್ರವೇಶಿಸಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದ್ದು, ಸಮವಸ್ತ್ರವನ್ನು ನಿರ್ಧರಿಸಲು ನಾವು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಸ್ವಾತಂತ್ರ್ಯ ನೀಡಿದ್ದೇವೆ. ವಿದ್ಯಾರ್ಥಿಗಳು ಅದನ್ನು ಪಾಲಿಸುತ್ತಾರೆಂದು ಅಡ್ವೊಕೇಟ್ ಜನರಲ್ ಹೇಳಿದ್ದಾರೆ.
ಇದರಂತೆ ಹಿಜಾಬ್ ಪರ ವಾದ ಮಂಡನೆ ಮಾಡಿದ ಹಿರಿಯ ವಕೀಲರಾದ ದೇವದತ್ತ ಕಾಮತ್ ಅವರು, ತಲೆಗೆ ಸ್ಕಾರ್ಫ್ ಧರಿಸುವುದು ಇಸ್ಲಾಮಿಕ್ ಧರ್ಮದ ಭಾಗವಾಗಿದೆ. ಪವಿತ್ರ ಕುರಾನ್ ಸೂಚಿಸಿದಂತೆ ಇದು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ. ಹಿಜಾಬ್ ಧರಿಸುವುದು ಸಂವಿಧಾನ ಆರ್ಟಿಕಲ್ 19(1)(ಎ) ಮತ್ತು ಆರ್ಟಿಕಲ್ 19(6) ಅಡಿಯಲ್ಲಿ ಬರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಿಂದ ರಕ್ಷಿಸಲ್ಪಟ್ಟಿದೆ. ಹಿಜಾಬ್ ಧರಿಸುವುದು ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ಅಂಶವಾಗಿದೆ. ಇದನ್ನು ಸಂವಿಧಾನ 21ನೇ ವಿಧಿಯಲ್ಲಿ ಈ ಮೂಲಕ ಖಾಸಗಿತನವನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದರು.
ಅಲ್ಲದೆ, ಕೇರಳ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ವಕೀಲರು, ಜಾತ್ಯಾತೀತ ಭಾವನೆ ಒಂದು ಧರ್ಮಕ್ಕೆ ಯಾವುದು ಮೂಲಭೂತ ಎಂದು ಹೇಳಲು ಆಗಲ್ಲ. ವಯಸ್ಕಳಾದ ಬಳಿಕ ಅಪರಿಚಿತರಿಗೆ ಮುಖ ಮತ್ತು ಕೈ ತೋರಿಸುವಂತಿಲ್ಲ ಎಂದು ಖುರಾನ್ ನಲ್ಲಿ ಹೇಳಿದೆ. ಹಾಗಾಗಿ ಅದಕ್ಕೆ ಹಿಜಾಬ್ ಧರಿಸೋದು. ಇದು ಸಹ ನಮ್ಮ ಮೂಲಭೂತ ಹಕ್ಕು. ಮುಖ ಬಿಟ್ಟು ದೇಹ ತೋರಿಸೋದು ನಿಷಿದ್ಧ. ಹಿಜಾಬ್ ಮೂಲಭೂತ ಹಕ್ಕು ಎಂದು ಕೇರಳ ಹೈಕೋರ್ಟ್ ಹೇಳಿದೆ. ಏಕಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದಿದೆ. ಸಿಬಿಎಸ್ ಇ ಸಹ ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅನುಮತಿ ನೀಡಿದೆ. ಹಾಗಾಗಿ ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿ ಎಂದರು.
ಬಳಿಕ ನ್ಯಾಯಾಲಯವು ನಾವು ಬುರ್ಖಾ ಬಗ್ಗೆ ಮಾತನಾಡುತ್ತಿಲ್ಲ. ಹಿಜಾಬ್ ಧರಿಸೋದು ಮೂಲಭೂತ ಹಕ್ಕು. ಹಿಜಾಬ್ ಧರಿಸೋದು ಖಾಸಗೀತನದ ಹಕ್ಕು ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಸರ್ಕಾರ ಆದೇಶ ವ್ಯಾಪ್ತಿಗೆ ಮೀರಿದ್ದು. ವಸ್ತ್ರ ಸಂಹಿತೆ ಸಂಬಂಧ ಸರ್ಕಾರ ಸ್ಪಷ್ಟವಾದ ಆದೇಶವನ್ನು ನೀಡಿಲ್ಲ. ಇಲ್ಲಿಯವರೆಗೆ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಈ ವೇಳೆ ನ್ಯಾಯಾಧೀಶರು ಖುರಾನ್ ಪ್ರತಿಯನ್ನು ತರಿಸಿಕೊಂಡು ಗಮನಿಸಿದರು. ಖುರಾನ್ ನಲ್ಲಿ ಮಹಿಳೆಯರು ಧರಿಸುವ ಉಡುಪಿನ ಬಗ್ಗೆ ಮಾಹಿತಿ ಪಡೆದುಕೊಂಡರು. ಖುರಾನ್ ನಲ್ಲಿಯೇ ಎಲ್ಲವೂ ಮೂಲಭೂತ ಆಚರಣೆಗಳೇನಾ? ಇವುಗಳ ವ್ಯಾಪ್ತಿ ಏನು? ಹಿಜಾಬ್ ಬಗ್ಗೆ ಖುರಾನ್ ನಲ್ಲಿರುವ ಮಾಹಿತಿ ಓದಿ ಎಂದು ವಕೀಲರಿಗೆ ಸೂಚಿಸಿದರು.
ಸರ್ಕಾರಗಳು ಆದೇಶ ಹೊರಡಿಸಬಹುದು. ನಾಗರೀಕರು ಪ್ರಶ್ನೆ ಮಾಡಹುದು. ಆದೇಶವನ್ನು ನೀಡುವಂತಿಲ್ಲ ಎಂದು ಹೇಳುವಂತಿಲ್ಲ. ಸರ್ಕಾರ ಸಂವಿಧಾನದ ಒಂದು ಭಾಗ. ಸರ್ಕಾರಗಳ ಊಹೆಗಳ ಮೇಲೆ ನಿರ್ಧಾರಕ್ಕೆ ಬರಲು ಅಗಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ವೇಳೆ ಕೇರಳ ಹೈಕೋರ್ಟ್ ಮುಂದಿಟ್ಟ ನ್ಯಾಯಾಲಯ ಕೈ ಮತ್ತು ಮುಖ ಅಪರಿಚಿತರಿಗೆ ತೋರಿಸಬಹುದು ಎಂದು ಹೇಳಿದೆಯಲ್ಲ. ಹಾಗಾದ್ರೆ ಹಿಜಾಬ್ ಯಾಕೆ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಾಧೀಶರು ಪ್ರಶ್ನೆ ಮಾಡಿದರು.
ಬಳಿಕ ವಾದಗಳ ಆಲಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿತು.
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)