ಕಿನ್ಯಾ :ಸುನ್ನೀ ಯುವಜನ ಸಂಘ (SჄS) ರಾಜ್ಯ ಸಮಿತಿಯ ನಿರ್ದೇಶನದಂತೆ “STIMULATE ” ಅಭಿಯಾನದ ಅಂಗವಾಗಿ ಕಿನ್ಯ ಸೆಂಟರ್ ಸಮಿತಿ ಆಯೋಜಿಸಿದ ಕ್ಲಾಸ್ ರೂಮ್ ಯಶಸ್ವಿಯಾಗಿ ಸಮಾಪ್ತಿ ಗೊಂಡಿತು.

ಸೆಂಟರ್ ಸಮಿತಿ ಅಧ್ಯಕ್ಷ ಹಾಜಿ ಬಿ.ಎಂ ಇಸ್ಮಾಯಿಲ್ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ನಡೆದ ಕ್ಲಾಸ್ ರೂಮ್ ಸಮಿತಿ ಉಪಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಅಲ್ ಬುಖಾರಿ ರವರ ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಲಾಯಿತು.
KCF ಸೌದಿ ಅರೇಬಿಯಾ ಜಿದ್ದಾ ಝೋನ್ ಸಮಿತಿ ಅಧ್ಯಕ್ಷ ಇಬ್ರಾಹಿಂ ಖಲೀಲ್ ರವರು ಕ್ಲಾಸ್ ರೂಮ್ ಉದ್ಘಾಟಿಸಿ ಮಾತನಾಡಿದ ಅವರು ಕಿನ್ಯ ಪ್ರದೇಶದಲ್ಲಿ ಸುನ್ನೀ ಸಂಘಟನೆಯ ಆರಂಭ ಸಂದರ್ಭದಲ್ಲಿ ಎದುರಿಸುತ್ತಿದ್ದ ಅನುಭವವನ್ನು ಮೆಲುಕು ಹಾಕಿದ ಅವರು ಪ್ರಸ್ತುತ ಸಂಘಟನೆಯ ಕಾರ್ಯಾಚರಣೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.


ರಾಜ್ಯ ಸಮಿತಿ ಸಂಘಟನಾ ನಾಯಕ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ ಉಸ್ತಾದ್ ರವರು ತನ್ನ ವಿಶಿಷ್ಟ ರೀತಿಯ ಬೋಧನೆ ಮೂಲಕ ಕ್ಲಾಸ್ ರೂಮ್ ನಡೆಸಿ ನಾಯಕ,ಕಾರ್ಯಕರ್ತರಿಗೆ ಇನ್ನಷ್ಟು ಸಾಂಘಿಕ ಸೇವೆಯಲ್ಲಿ ಮುಂದುವರಿಯಲು ಸ್ಪೂರ್ತಿ,ಉತ್ಸಾಹ,ಆವೇಶ ನೀಡಿದರು.
ದ.ಕ ಜಿಲ್ಲಾ ಸಮಿತಿ ವೆಸ್ಟ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಶುಭ ಹಾರೈಸಿ ಮಾತನಾಡಿದರು, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್,ಸೆಂಟರ್ ದಅ್’ವಾ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಖಾಫಿ,ಸಾಂತ್ವನ ಕಾರ್ಯದರ್ಶಿ ಇಸ್ಮಾಯಿಲ್ ಮೀಂಪ್ರಿ,ಸೋಷಿಯಲ್ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಾಮಣಿಗೆ ಹಾಗೂ ಸೆಂಟರ್ ನಾಯಕರು ಮತ್ತು ಸೆಂಟರ್ ಅಧೀನದ ಏಳು ಬ್ರಾಂಚ್ ಸಮಿತಿಗಳ ನಾಯಕರು ಉಪಸ್ಥಿತರಿದ್ದರು.
ಸೆಂಟರ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಯಿಲ್ ಸಾಗ್ ಆರಂಭ ದಲ್ಲಿ ಸ್ವಾಗತಿಸಿ ಕೋಶಾಧಿಕಾರಿಯಾಗಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ಕೊನೆಯಲ್ಲಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ