ಕಿನ್ಯಾ: ಭಾರತದ 73ನೇ ಗಣರಾಜ್ಯೋತ್ಸವದ ಅಂಗವಾಗಿ ಎಸ್.ಎಸ್.ಎಫ್ ಕಿನ್ಯ ಸೆಕ್ಟರ್ ವತಿಯಿಂದ ಪುಸ್ತಕ ಹಸ್ತಾಂತರ ಕಾರ್ಯಕ್ರಮವು ಕಿನ್ಯಾ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ನಡೆಯಿತು.
ರಾಜ್ಯ ಪ್ರತಿಭೋತ್ಸವದ ಪ್ರತಿಭೆ ಹಾಫಿಝ್ ಕೆ.ಎಂ. ಸಈದ್ ಮೀಂಪ್ರಿ ಕಾರ್ಯಕ್ರಮವನ್ನು ಉದ್ದೇಶಿಸಿ ಸವಿಸ್ತಾರವಾಗಿ ಮಾತನಾಡಿದರು. ಸಈದ್ ರವರ ಭಾಷಣಕ್ಕೆ ಪಂಚಾಯತ್ ಪಿ.ಡಿ.ಒ ಮೆಚ್ಚುಗೆ ವ್ಯಕ್ತಪಡಿಸಿ, ಸೆಕ್ಟರ್ ಸಮಿತಿಯ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು.ಸೆಕ್ಟರ್ ಅಧ್ಯಕ್ಷರಾದ ನೌಫಲ್ ಅಹ್ಸನಿ ಪುಸ್ತಕ ಓದುವುದರ ಮಹತ್ವದ ಕುರಿತು ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸಿಬ್ಬಂದಿಗಳು, ಸದಸ್ಯರುಗಳಾದ ಸಯ್ಯಿದ್ ತ್ವಾಹಾ, ಫಾರೂಕ್ ಕಿನ್ಯಾ, ಫಯಾಝ್ ಕಿನ್ಯಾ, ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಆಶಿಕ್, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಕೂಡಾರ, ಕೋಶಾಧಿಕಾರಿ ಹುಸೈನಾರ್ ಹಾಗೂ ಸೆಕ್ಟರ್ ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.


















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ