73ನೇ ಗಣರಾಜ್ಯೋತ್ಸವದ ಅಂಗವಾಗಿ SDPI ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ದೇರಳಕಟ್ಟೆಯಲ್ಲಿ ನಡೆಯಿತು.
ಧ್ವಜಾರೋಹಣವನ್ನು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ನಡೆಸಿದರು. SDPI ರಾಜ್ಯ ನಾಯಕ ಫಯಾಝ್ ದೊಡ್ಡಮನೆ ಮತ್ತು ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ SDPI ಜಿಲ್ಲಾ ಸಮಿತಿ ಸದಸ್ಯ ಝಾಕಿರ್ ಉಳ್ಳಾಲ್, ಕ್ಷೇತ್ರ ಸಮಿತಿ ಕಾರ್ಯದರ್ಶಿ ಝಾಹಿದ್ ಮಲಾರ್, ಉಪಾಧ್ಯಕ್ಷ ಉಬೈದ್ ಅಮ್ಮೆಬಳ, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯೆ ಸೆಲಿಮಾಬಿ ಹಸೀನಾ ಶಮೀರ್, ಗ್ರಾಪಂ ಸದಸ್ಯರಾದ ನೌಷಾದ್ ಕಿನ್ಯಾ, ಶಾಕಿರ್ ಮೊಂಟೆಪದವು, ಆರೀಫ್ ಮದನಿ ನಗರ, ಕೋಟೆಕಾರ್ ಪಟ್ಟಣ ಸಮಿತಿ ಅಧ್ಯಕ್ಷರಾದ ಮೊಯ್ದಿನ್ , ಪಾಪ್ಯುಲರ್ ಫ್ರಂಟ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಶಹೀದ್ ಕಿನ್ಯಾ, ದೇರಳಕಟ್ಟೆ ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್ ನಾಟೆಕಲ್, ಗ್ರೀನ್ ಗ್ರೌಂಡ್ ಮಸೀದಿಯ ಅಧ್ಯಕ್ಷರಾದ ಸಯ್ಯದ್, SDPI ಕ್ಷೇತ್ರ ಸಮಿತಿ ಸದಸ್ಯರಾದ ಅಬ್ಬಾಸ್ ಕಿನ್ಯಾ, ನಾಸಿರ್ ಒಮೆರಾ, ಮುನ್ನೂರು ಬ್ಲಾಕ್ ಸಮಿತಿ ಕಾರ್ಯದರ್ಶಿ ನವಾಝ್ ಕುತ್ತಾರ್, ಅಶ್ರಫ್ ಬೆಲ್ಮ ಉಪಸ್ಥಿತರಿದ್ದರು.