janadhvani

Kannada Online News Paper

ಕೆ.ಸಿ.ಎಫ್ ಖತ್ತರ್ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೀಯ ವಿಚಾರಗೋಷ್ಠಿ

ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿ ವತಿಯಿಂದ ಭಾತರದ ಗಣರಾಜ್ಯೋತ್ಸವದ ಆಚರಣೆಯ ಪ್ರಯುಕ್ತ ರಾಷ್ಟ್ರೀಯ ವಿಚಾರಗೋಷ್ಠಿ ಕಾರ್ಯಕ್ರಮವು ಝೂಮ್ ಮೂಲಕ ದಿನಾಂಕ 25-01-2025 ರಂದು ನಡೆಯಿತು.

ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ‌ಸಮಿತಿ ಅಧ್ಯಕ್ಷರಾದ ಮುನೀರ್ ಹಾಜಿ ಮಾಗುಂಡಿಯವರ ಅಧ್ಯಕ್ಷತೆಯಲ್ಲಿ ಮುನ್ನುಡಿ ಬರೆದ ಕಾರ್ಯಕ್ರಮವು, ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ರವರ ಪ್ರಜಾಪ್ರಭುತ್ವದ ಬಗೆಗಿನ ಹಿತನುಡಿಗಳ ಮೂಲಕ ಉದ್ಘಾಟನೆಗೊಂಡಿತು.

ಮುಖ್ಯ ಅತಿಥಿಗಳಾಗಿ‌ ಭಾಗವಹಿಸಿದ್ದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಾಫಿಳ್ ಸುಫ್ಯಾನ್ ಸಖಾಫಿ ರವರು ಪ್ರಜಾಪ್ರಭುತ್ವ ರಚಿಸಿದ್ದ ವ್ಯವಸ್ಥೆಯ ಬಗ್ಗೆ ವಿವರಿಸಿದರೆ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷರಾದ ಶಾಫಿ ಸ’ಅದಿ ರವರು ಭಾರತದ ಪ್ರಸ್ತುತ ಪರಿಸ್ಥಿಯ ಬಗ್ಗೆ ಅವಲೋಕಿಸಲೇಬೇಕಾದ ಅನಿವಾರ್ಯತೆಯ ಬಗ್ಗೆ ಬಹಳ ಸ್ಪಷ್ಟವಾಗಿ ಮಾತುಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.

ಮತ್ತಿಬ್ಬರು ಮುಖ್ಯ ಅತಿಥಿಗಳಾಗಿ‌ ಭಾಗವಹಿಸಿದ್ದ ಕರ್ನಾಟಕ ಸಂಘ ಖತ್ತರ್ ಇದರ ಅಧ್ಯಕ್ಷರಾದ ಶ್ರೀ ರವಿ ಶೆಟ್ಟಿ ಮೂಡಂಬೈಲ್ ರವರು ನಮ್ಮಲ್ಲಿರಬೇಕಾದ ಸಮಾನ ಸಹಭಾಳ್ವೆ ಹಾಗೂ ಸಹೋದರತೆಯ ಬಗ್ಗೆ ತಿಳಿಸುತ್ತಾ ಕಾರ್ಯಕ್ರಮಕ್ಕೆ ಶುಭಾಶಯಗೈದರೆ ,ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಖತ್ತರ್ ‌ಸಮಿತಿ‌ ಅಧ್ಯಕ್ಷರಾದ ಅಬ್ದುಲ್ಲ ಉಂಞ್ಞ ಉಚ್ಚಿಲ ರವರು ಪ್ರಸ್ತುತ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಹಾಗೂ ಮುಂದಿನ ದಿನಗಳಲ್ಲಿಯೂ ಇದೆ ರೀತಿಯ ಕಾರ್ಯಕ್ರಮಗಳು ಕೆ.ಸಿ.ಎಫ್ ಖತ್ತರ್ ಅಧೀನದಲ್ಲಿ ಮೂಡಿಬರಲಿ ಎಂಬ ಅಶಾಭಾವನೆಯನ್ನು ವ್ಯಕ್ತಪಡಿಸಿದರು .

ಕಾರ್ಯಕ್ರಮದಲ್ಲಿ , ಕೆ.ಸಿ.ಎಫ್. ಅಂತರಾಷ್ಟ್ರೀಯ ‌ಸಮಿತಿ‌ ನಾಯಕರುಗಳಾದ ಹಾಫಿಳ್ ಫಾರೂಖ್ ಸಖಾಫಿ ಎಮ್ಮೆಮ್ಮಾಡು, ಯೂಸುಫ್ ಸಖಾಫಿ ಅಯ್ಯಂಗೇರಿ‌‌ ಹಾಗೂ ಕಬೀರ್ ಹಾಜಿ‌ ದೇರಳಕಟ್ಟೆ, ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ, ಕೋಶಾಧಿಕಾರಿ ಮಿರ್ಶಾದ್ ಕನ್ಯಾನ ಉಪಸ್ಥಿತಿರಿದ್ದರು.

ಕೆ.ಸಿ.ಎಫ್. ಖತ್ತರ್ ರಾಷ್ಟ್ರೀಯ ‌ಸಮಿತಿ‌ ಆಡಳಿತ ಹಾಗೂ‌ ಜನಸಂಪರ್ಕ‌‌ ವಿಭಾಗ ಅಧ್ಯಕ್ಷರಾದ ಸಿದ್ದೀಖ್ ಹಂಡುಗೂಳಿ ಸ್ವಾಗತಿಸಿ, ಪಬ್ಲಿಕೇಶನ್ ವಿಭಾಗ ಕಾರ್ಯದರ್ಶಿ ಹಸೈನಾರ್ ಕಾಟಿಪಳ್ಳ ವಂದಿಸಿದರು. ಕೆ.ಸಿ.ಎಫ್ ಅಂತರಾಷ್ಟ್ರೀಯ ‌ಸಮಿತಿ‌ ನಾಯಕರಾದ ಆಬಿದ್ ತಂಗಳ್ ರವರು ದುಆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರೊಫೆಶನಲ್ ವಿಭಾಗ ಕಾರ್ಯದರ್ಶಿ ಝಕರಿಯ್ಯಾ ಸಂಜಾದ್ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com