ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕರ್ಬಲಾ ರೋಡ್ ಕುದ್ರೋಳಿ ಮಂಗಳೂರು .ಪ್ರತೀ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮವು 2025 ಜನವರಿ 31ರಿಂದ ಪೆಬ್ರವರಿ 08 ರತನಕ ಪ್ರತೀ ದಿನ ಇಶಾ ಬಳಿಕ ನಡೆಯಲಿದೆ.
ಮೌಲಿದ್ ಹಾಗೂ ರಿಫಾಯೀ ರಾತೀಬ್,ಉದ್ಘಾಟನಾ ಸಮಾರಂಭ, ಧಾರ್ಮಿಕ ಉಪನ್ಯಾಸ, ಜಲಾಲಿಯ್ಯ ರಾತೀಬ್,ಬುರ್ಧಾ ಮಜ್ಲಿಸ್ ,ಸೌಹಾರ್ದ ಸಂಗಮ ಹಾಗೂ ಸಮಾರೋಪ ಸಮಾರಂಭ ಹೀಗೆ ಹಲವು ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಲು ದರ್ಗಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.