ದಮ್ಮಾಮ್ – ಸೌದಿ ಅರೇಬಿಯಾ: ಹೆಲ್ಪಿ (heLPy) ಸೌದಿ ಅರೇಬಿಯಾ ಸಮಿತಿ, ತನ್ನ ಸಮಾಜ ಸೇವೆಯನ್ನು 13ನೇ ವರ್ಷಕ್ಕೆ ವಿಸ್ತರಿಸುವ ಸಂದರ್ಭದಲ್ಲಿ, ಸಮಿತಿಯ ವಾರ್ಷಿಕ ಮಹಾಸಭೆ ಜನವರಿ 16ರಂದು “ರೆಡ್ ಪೋಟ್” ಹೋಟೆಲ್ ದಮ್ಮಾಮ್ ಇದರ ಸಭಾಂಗಣ ದಲ್ಲಿ ನಡೆಯಿತು.
ಹೆಲ್ಪಿ “ಫೀಡ್ ದ ನೀಡಿ” ಮೇಲ್ವಿಚಾರಕ ಮೊಹಮ್ಮದ್ ರಿಯಾಜ್ ರವರು ಸಭಿಕರನ್ನು ಸ್ವಾಗತಿಸುತ್ತಾ, ಸಂಘಟನೆಯ ಕಿರುಪರಿಚಯ ನೀಡಿದರು. ಸ್ಥಾಪಕ ಅಧ್ಯಕ್ಷರಲ್ಲಿ ಓರ್ವರಾದ ಮೊಹಿದಿನ್ ಬಾವ ರವರ ಖುರಾನ್ ಪಾರಾಯಣದೊಂದಿಗೆ ಆರಂಭಗೊಂಡ ಸಭೆಯನ್ನುದ್ದೇಶಿಸಿ, ಹಾಲಿ ಅಧ್ಯಕ್ಷರಾದ ಮನ್ಸೂರ್ ಮಂಜೇಶ್ವರ ಮಾತನಾಡುತ್ತಾ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಮುಖ್ಯ ಕಾರ್ಯದರ್ಶಿ ಸುನೀರ್ ಅಹ್ಮದ್ ಹೆಲ್ಪಿ (heLPy) ಸಂಘಟನೆಯ 2023 – 24 ಸಾಲಿನ ವರದಿ ವಾಚಿಸಿದರು. ಕೋಶಾಧಿಕಾರಿ ಮೊಹಮ್ಮದ್ ನಿಝರ್ ಲೆಕ್ಕಪತ್ರ ಮಂಡಿಸಿ ಸಭೆಯ ಅನುಮೋದನೆ ಪಡೆದರು. ಸಲಹೆಗಾರ ಅಬ್ದುಲ್ ಸಲಾಂ ಶವಾಜ್ ರವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿದರು.
ಈ ಸಂದರ್ಭದಲ್ಲಿ 2025-26 ನೇ ಸಾಲಿನ ನೂತನ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷ – ಮೊಹಮ್ಮದ್ ಆಸಿಫ್ ಜೆಪ್ಪು, ಉಪಾಧ್ಯಕ್ಷ – ಮೊಹಿದಿನ್ ಬಾವ.
ಪ್ರದಾನ ಕಾರ್ಯದರ್ಶಿ – ಸುನೀರ್ ಅಹ್ಮದ್, ಜೊತೆ ಕಾರ್ಯದರ್ಶಿ – ಆಸಿಫ್ ಮೊಹಿಯುದ್ದೀನ್.
ಕೋಶಾಧಿಕಾರಿ – ಮೊಹಮ್ಮದ್ ನಿಝರ್, ಉಪ ಕೋಶಾಧಿಕಾರಿ – ಉಸ್ಮಾನ್ ಷರೀಫ್ ಮತ್ತು ಇಸ್ಮಾಯಿಲ್ ಕಡಂಬಾರ್.
“ಫೀಡ್ ದ ನೀಡಿ” ಮೇಲ್ವಿಚಾರಕ – ಮೊಹಮ್ಮದ್ ರಿಯಾಜ್, ಉಪ ಮೇಲ್ವಿಚಾರಕ – ಮನ್ಸೂರ್ ಮಂಜೇಶ್ವರ.
ಲೆಕ್ಕ ಪರಿಶೋಧಕ – ಅಬ್ದುಲ್ ಖಾದರ್ ಶಹೀರ್.
ವಿದ್ಯಾಭ್ಯಾಸ ವಿಭಾಗದ ಮೇಲ್ವಿಚಾರಕ – ಸಮೀರ್ ಅಹ್ಮದ್.
ಸಂಘಟನಾ ಕಾರ್ಯದರ್ಶಿ – ಸುನೈನ್ ಅಹ್ಮದ್.
ಕಾರ್ಯಕ್ರಮಗಳ ಉಸ್ತುವಾರಿ – ಅಶ್ರಫ್ ಯೂಸಫ್.
25 ಮಂದಿಯ ಕಾರ್ಯಕಾರಿ ಸದಸ್ಯರನ್ನು ನೇಮಿಸಲಾಯ್ತು.
ಅಲ್ ಖೋಬರ್, ದಮ್ಮಾಮ್ ಹಾಗು ಜುಬೈಲ್ ವಲಯದ ಹಲವು ಪ್ರಮುಖರು ಭಾಗವಹಿಸಿದ್ದ ಸಭೆಯಲ್ಲಿ, ನೂತನ ಅಧ್ಯಕ್ಷರಾದ ಮೊಹಮ್ಮದ್ ಆಸಿಫ್ ರವರು ಮಾತನಾಡುತ್ತಾ, ಹೆಲ್ಪಿ (heLPy) ಅರ್ಹರನ್ನು ಗುರುತಿಸಿ, ತನ್ನ ಸಹಾಯ ಹಸ್ತವನ್ನು ನೀಡುತ್ತಿದೆ, ಮುಂದಕ್ಕೂ ಇನ್ನಷ್ಟು ಫಲಾನುಭವಿಗಳನ್ನು ನಮ್ಮ ಸಂಘಟನೆಯ ಛತ್ರದಡಿಯಲ್ಲಿ ಒಗ್ಗೂಡಿಸಲು ಸರ್ವರ ಸಹಕಾರ ಕೋರಿದರು.
ಪ್ರದಾನ ಕಾರ್ಯದರ್ಶಿ, ಸುನೀರ್ ಅಹ್ಮದ್ ರವರು ಕೊನೆಯಲ್ಲಿ ಧನ್ಯವಾದಗಳನ್ನು ಸಮರ್ಪಿಸುತ್ತಾ, ಸಂಘಟನೆಯ ಕೈ ಭಲಪಡಿಸಲು ಎಲ್ಲರು ಒಂದಾಗಿ ಪ್ರಯತ್ನಿಸುವ ಎಂದು ಕರೆಕೊಟ್ಟರು.
ಮೊಹಮ್ಮದ್ ರಿಯಾಜ್ ರವರು ಅಚ್ಚುಕಟ್ಟಾಗಿ ನಡಸಿಕೊಟ್ಟ ಸಭೆಯನ್ನು ದುಆ ದೊಂದಿಗೆ ಮುಕ್ತಾಯಗೊಳಿಸಲಾಯ್ತು.