janadhvani

Kannada Online News Paper

ರಾಜ್ಯಾದ್ಯಂತ ಮದರಸ ದಿನ ಯಶಸ್ವಿಗೊಳಿಸಲು SMA ರಾಜ್ಯ ಉಪಾಧ್ಯಕ್ಷರು ಕರೆ

ಪಕುಡ್ತಮುಗೇರು ಬದುರ್ ಹುದಾ ಮದರಸದಲ್ಲಿ ಸ್ವಚ್ಛ ಕುಟುಂಬ, ಸ್ವಸ್ಥ ಸಮಾಜ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ SMA ರಾಜ್ಯ ಉಪಾಧ್ಯಕ್ಷರಾದ ಹಾಜಿ ಹಮೀದ್ ಕೊಡಂಗಾಯಿ ಜಮಾಹತ್ ಮೊಹಲ್ಲಾಗಳ ಸಬಲೀಕರಣಕ್ಕಾಗಿ ಸಮಿತಿಯ ಸಭೆ ಕರೆಯುವುದರ ಮೂಲಕSMA ಪ್ರತಿನಿಧಿಗಳು ಜಮಾತ್ ಪ್ರತಿನಿಧಿಗಳು ಸೇರಿ ಮದರಸ ದಿನವನ್ನು ರಾಜ್ಯಾದ್ಯಂತ ಯಶಸ್ವಿ ಗೊಳಿಸಬೇಕು ಎಂದು ಕರೆ ನೀಡಿದರು.

ಮುಖ್ಯ ವಿಷಯ ಮಂಡನೆ ನಡೆಸಿದ ಅಬ್ದುಲ್ ಮಜೀದ್ ಸಖಾಫಿ ಸ್ವಚ್ಛ ಕುಟುಂಬ ಸ್ವಸ್ಥ ಸಮಾಜ ಇದರ ಬಗ್ಗೆ ಮಾತನಾಡಿದ ಅವರು, ಇಂದಿನ ಜನಾಂಗವೇ ಮುಂದಿನ ಪೀಳಿಗೆ, ಅವರನ್ನು ಉತ್ತಮ ವಿದ್ಯಾಭ್ಯಾಸ ಮೂಲಕ ಪ್ರತಿಭಾವಂತ ರನ್ನಾಗಿ ಮೂಡಿಸಬೇಕು ಎಂದು ಹಿತವಚನ ನುಡಿದರು.

SMA ವಿಟ್ಲ ರೀಜಿನಲ್ ಅಧ್ಯಕ್ಷರಾದ ಅಬ್ದುಲ್ ಹಕೀಮ್, ಜಮಾಅತ್ ಅಧ್ಯಕ್ಷರಾದ ಹಕೀಮ್ ಕುಡ್ತಮುಗೇರು, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ, ಅಬ್ದುಲ್ ಮಜಿದ್ ಮದನಿ ಖತೀಬ್ ಕುಡ್ತಮುಗೇರು, SMA ಪ್ರಧಾನ ಕಾರ್ಯದರ್ಶಿ ಸಾದಿಕ್ ಸಖಾಫಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಹಮ್ಮಿಕೊಂಡ ರಾಜ್ಯಮಟ್ಟದ ಪ್ರತಿಭೋತ್ಸವದಲ್ಲಿ ದ್ವಿತೀಯ ಸ್ಥಾನ ಪಡೆದ ಕುಡ್ತಮುಗೇರು ಮದರಸ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು

error: Content is protected !! Not allowed copy content from janadhvani.com