janadhvani

Kannada Online News Paper

ಎಸ್ಡಿಪಿಐ ಉಳ್ಳಾಲ ವಿಧಾನಸಭಾಕ್ಷೇತ್ರದಿಂದ ರಾಷ್ಟ್ರೀಯ ಸಂವಿಧಾನ ದಿನಾಚರಣೆ

ದೇರಳಕಟ್ಟೆ : ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು-ಉಳ್ಳಾಲ ವಿಧಾನಸಭಾ ಕ್ಷೇತ್ರದ ವತಿಯಿಂದ ರಾಷ್ಟ್ರೀಯ ಸಂವಿಧಾನ ದಿನ ಆಚರಣೆ.

ದೇಶದ ಜಾತ್ಯಾತೀತ ಪರಂಪರೆ, ಮಾನವ ಹಕ್ಕು, ಪ್ರಜಾಪ್ರಭುತ್ವ ಮತ್ತು ಸಂವಿಧಾನ ಮೌಲ್ಯಗಳ ಸಂರಕ್ಷಣೆಗಾಗಿ ಸಂವಿಧಾನ ದೀಕ್ಷಾ ಕಾರ್ಯಕ್ರಮವು ದೇರಳಕಟ್ಟೆ ಜಂಕ್ಷನ್ನಲ್ಲಿ ನಡೆಯಿತು.

ಮುಖ್ಯ ಭಾಷಣಗಾರರಾಗಿ,ಅಶ್ರಫ್ ಕೆ. ಸಿ. ರೋಡ್, ಜಿಲ್ಲಾ ಸಮಿತಿ ಸದಸ್ಯರು ಹಾಗೂ ನಸೀರ್ ಸಜಿಪ ಮಾತನಾಡಿದರು. ಸಂವಿಧಾನ ದೀಕ್ಷೆ, ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ಮಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಿತಿ ಸದಸ್ಯರಾದ, ಅಬ್ಬಾಸ್ ಕಿನ್ಯ, ನೌಶಾದ್ ಕಲ್ಕಟ್ಟ, ಮಂಜನಾಡಿ ಬ್ಲಾಕ್ ಕಾರ್ಯದರ್ಶಿ ಶಾಕಿರ್ ಉಪಸ್ಥಿತರಿದ್ದರು. ಕ್ಷೇತ್ರ ಸಮಿತಿಯ ಜತೆ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಸ್ವಾಗತಿಸಿ,ಕೊಣಾಜೆ ಬ್ಲಾಕ್ ಕಾರ್ಯದರ್ಶಿ ಜಾಫರ್ ಪಾನೇಲ ಧನ್ಯವಾದ ಅರ್ಪಿಸಿದರು. ಪಾವೂರು ಗ್ರಾಮ ಸಮಿತಿ ಕಾರ್ಯದರ್ಶಿ ಆಸೀಫ್ ಮಲಾರ್ ಕಾರ್ಯಕ್ರಮವನ್ನು ನಿರೂಪಿಸಿದರು.