ಮಂಗಳೂರು: ಕರ್ನಾಟಕ ರಾಜ್ಯ ವಿದ್ಯಾರ್ಥಿ ಒಕ್ಕೂಟ (ಎಸ್ಸೆಸ್ಸೆಫ್) ವು ಯುವ ಜನಾಂಗದಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪೋಷಿಸಲು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುತ್ತಾ ಬಂದಿರುವ ಪ್ರತಿಭೋತ್ಸವ ರಾಜ್ಯ ಸಮಾವೇಶ ಇದೇ ಬರುವ 26,27,28 (ಶುಕ್ರವಾರ, ಶನಿವಾರ, ಆದಿತ್ಯವಾರ) ದಂದು ಶಾಲಾ/ ಕಾಲೇಜು ಮೈದಾನ, 7ನೇ ಬ್ಲಾಕ್ ಕೃಷ್ಣಾಪುರದಲ್ಲಿ ನಡೆಯಲಿದೆ ಎಂದು ರಾಜ್ಯ ಪ್ರತಿಭೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.
ʻಕರ್ನಾಟಕದ 22 ಜಿಲ್ಲೆಗಳ ಸಾವಿರಾರು ಗ್ರಾಮಗಳಿಂದ ಆಯ್ಕೆಯಾದ ಪ್ರತಿಭೆಗಳು ಡಿವಿಜನ್, ಜಿಲ್ಲೆಗಳಲ್ಲಿ ವಿಜೇತರಾಗಿ ಇದೀಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರೆ. ಈ ರೀತಿ ಆಯ್ಕೆಯಾದ 700 ಬಹುಮುಖ ಪ್ರತಿಭೆಗಳು 70 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಶಾಲಾ ಕ್ಯಾಂಪಸ್ ಗಳಲ್ಲಿ ಕಲಿಯುವ ವಿದ್ಯಾರ್ಥಿಗಳು, ಧಾರ್ಮಿಕ ಶಿಕ್ಷಣ ಪಡೆಯು ವಿದ್ಯಾರ್ಥಿಗಳು, ವೃತ್ತಿಪರ ಶಿಕ್ಷಣ ಪಡೆಯುವವರು, ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಯುವಜನರು ಇದರಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಪ್ರತಿಭೆಗಳಿಗೆ ಸ್ಥಳೀಯ ಉಮರಾ ಮುಖಂಡರ ಸಹಕಾರದಿಂದ ವಸತಿ, ಊಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ನವಂಬರ್ 26, ಶುಕ್ರವಾರ 3.00ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಕೆ.ಸಿ.ರೋಡ್ ಹುಸೈನ್ ಸಅದಿ ಚಾಲನೆ ನೀಡಲಿದ್ದಾರೆ. ಮಗ್ರಿಬ್ ನಮಾಝ್ ಬಳಿಕ ವಿಜೇತ ತಂಡಗಳ ಆಕರ್ಷಕ ಬುರ್ಧಾ ಸ್ಪರ್ಧೆ ನಡೆಯಲಿದೆ. ರಾತ್ರಿ 9.00ಗಂಟೆಗೆ ಖ್ಯಾತ ಭಾಷಣಗಾರ ಅನಸ್ ಅಮಾನಿ ಕೇರಳ ಇವರಿಂದ ಪ್ರೌಢ ಪ್ರಭಾಷಣ ನಡೆಯಲಿದೆ. ನವಂಬರ್ 27, ಶನಿವಾರ ಬೆಳಿಗ್ಗೆ 10.00ಗಂಟೆಗೆ ನಡೆಯಲಿರುವ ಗಣ್ಯರ ಸಮಾವೇಶ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಸುಬ್ರಹ್ಮಣ್ಯ ಎಡಪಡಿತ್ತಾಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರವರನ್ನು ಸನ್ಮಾನಿಸಲಾಗುವುದು. ರಾತ್ರಿ 7.00ಗಂಟೆಗೆ ಆಕರ್ಷಕ ದಫ್ ಕಾರ್ಯಕ್ರಮ ನಡೆಯಲಿದೆ.
ನವಂಬರ್ 28, ಆದಿತ್ಯವಾರ ಬೆಳಿಗ್ಗೆ 10.00ಗಂಟೆಗೆ ರಾಜ್ಯ ಉಲಮಾ ಒಕ್ಕೂಟದ ಅಧ್ಯಕ್ಷರಾದ ಶೈಖನಾ ಮಾಣಿ ಉಸ್ತಾದ್ ಸಾರಥ್ಯದಲ್ಲಿ ನಡೆಯುವ ಸಾಹಿತ್ಯ ಸಂಭ್ರಮವನ್ನು ಕರ್ನಾಟಕ ರಾಜ್ಯ ವಕ್ಸ್ ಬೋರ್ಡ್ ಚೇರ್‌ಮೇನ್ ಶಾಫಿ ಸಅದಿ, ಬೆಂಗಳೂರು ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾದ ಡಾ.ಎಂ.ಪಿ ಶ್ರೀನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿಕ್ಕಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಯ್ಯದ್ ಹಬೀಬುಲ್ಲಾಹ್ ತಂಜಲ್‌ರವರಿಗೆ ಸುನ್ನೀ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದ ವಿವಿಧ ವೇದಿಕೆಗಳಲ್ಲಿ ಕೃಷ್ಣಾಪುರ ಬದ್ರಿಯಾ ಮಸೀದಿ ಸಂಯುಕ್ತ ಖಾಝ ಅಲ್‌ಹಾಜ್ ಇ.ಕೆ. ಇಬ್ರಾಹಿಂ ಮುಸ್ಲಿಯಾರ್, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ವೈ. ಭರತ್ ಶೆಟ್ಟಿ, ಮಾಜಿ ಶಾಸಕರಾದ ಜನಾಬ್ ಬಿ.ಎ. ಮೊಯಿದಿನ್ ಬಾವಾ, ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಲೋಕೇಶ್ ಬೊಳ್ಳಾಜೆ, ಕಾರ್ಪೋರೇಟರ್‌ಗಳಾದ ಶ್ರೀಮತಿ ಸಂಶಾದ್ ಅಬೂಬಕರ್, ಲಕ್ಷ್ಮೀ ದೇವಾಡಿಗ, SYS ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಗ್ರಶೀದ್ ಝೂನಿ ಕಾಮಿಲ್, SSF ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಹಾಗೂ ಸ್ಥಳೀಯ ಜಮಾಅತ್‌ಗಳ ಅಧ್ಯಕ್ಷರುಗಳು, ಧಾರ್ಮಿಕ, ಸಾಮಾಜಿಕ ಮುಖಂಡರುಗಳು ಸೇರಿದಂತೆ ವಿವಿಧ ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.