ಬೆಂಗಳೂರು: ಮುಸ್ಲಿಂ ವಿದ್ವಾಂಸರೋರ್ವರು ಸಮಾರಂಭದಲ್ಲಿ ಆಹಾರಕ್ಕೆ ಉಗುಳುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರಾರವರ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರರಲ್ಲಿ ಹಲವರು ಈ ಕ್ಲಿಪ್ ಅನ್ನು ಶೇರ್ ಮಾಡಿದ್ದಾರೆ. ಇದೀಗ ಈ ಕುರಿತು ಸತ್ಯಶೋಧನಾ ವರದಿಯನ್ನು ಪ್ರಕಟಿಸಿರುವ altnews.in ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ.
“ಕೂರಾ ತಂಙಳ್ ರವರ ತಂದೆ ತಾಜುಲ್ ಉಲಮಾ ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ರವರ ಉರೂಸ್ ನಡೆದ ಸಂದರ್ಭದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮವಿತ್ತು. ಆಹಾರ ವಿತರಣೆಗೂ ಮುಂಚೆ ಕುರ್ ಆನ್ ಸೂಕ್ತಗಳನ್ನು ಓದಿ ಊದುವುದು ರೂಢಿ. ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆದಿದ್ದು, ಈ ವೇಳೆ ತಂಙಳ್ ಸೂಕ್ತಗಳನ್ನು ಓದಿ ಊದಿದ್ದರೆ ವಿನಃ ಉಗುಳಿದ್ದಲ್ಲ” ಎಂದು ಅವರ ಸಹಾಯಕ ಹನೀಫ್ ಹಾಜಿ ಉಳ್ಳಾಲ ಹೇಳಿಕೆ ನೀಡಿದ್ದಾಗಿ ವರದಿ ಉಲ್ಲೇಖಿಸಿದೆ.
ಹಝ್ರತ್ ನಿಝಾಮುದ್ದೀನ್ ಔಲಿಯಾ ದರ್ಗಾದ ಪೀರ್ಝಾದಾ ಅಲ್ತಮಶ್ “ಅವರು ಊದುತ್ತಿದ್ದಾರೆಯೇ ಹೊರತು ಉಗುಳುತ್ತಿಲ್ಲ. ಇದು ಬರ್ಕತ್ (ಅನುಗ್ರಹ)ಕ್ಕಾಗಿ ನಡೆಸುವ ಒಂದು ಧಾರ್ಮಿಕ ರೂಢಿ ಮಾತ್ರ. ಹಲವೆಡೆ ಇದನ್ನು ಪಾಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಇಂತಹಾ ವೀಡಿಯೊವೊಂದು ಹರಿದಾಡಿದ್ದ ಸಂದರ್ಭದಲ್ಲಿ altnews.in ಸತ್ಯಾಸತ್ಯತೆಯನ್ನು ಬಯಲಿಗೆಳೆದಿತ್ತು. ಈ ವೇಳೆ ಮಾತನಾಡಿದ್ದ ಧಾರ್ಮಿಕ ವಿದ್ವಾಂಸರೋರ್ವರು, “ನಾವು ನಮಾಝ್ ಮುಗಿಸಿ ಹೊರ ಬರುವ ಸಂದರ್ಭದಲ್ಲಿ ಮಸೀದಿಯ ಹೊರಗಡೆ ಹಲವು ಮಹಿಳೆಯರು ಮಕ್ಕಳನ್ನು ಹಿಡಿದು ನಿಲ್ಲುವುದಿದೆ. ಮಸೀದಿಯಿಂದ ಹೊರಬರುವ ವಿಶ್ವಾಸಿಗಳು ಆ ಮಗುವಿನ ತಲೆಗೆ ಊದುತ್ತಾರೆ. ಅನುಗ್ರಹದ ದೃಷ್ಟಿಯಿಂದ ಇದು ಮಾಡಲಾಗುತ್ತದೆಯೇ ಹೊರತು ಬೇರೇನಿಲ್ಲ” ಎಂದು ಅವರು ಹೇಳಿದ್ದಾಗಿ ವರದಿ ಹೇಳಿದೆ.
ಈ ವೀಡಿಯೊವನ್ನು ಬಲಪಂಥೀಯರು “ಮುಸ್ಲಿಮರು ತಯಾರಿಸಿದ ಆಹಾರ ಸೇವಿಸಬೇಡಿ. ಅವರು ಆಹಾರಕ್ಕೆ ಉಗುಳುತ್ತಾರೆ” ಎಂಬಂತೆ ವಿವಿಧ ಶೀರ್ಷಿಕೆಗಳಲ್ಲಿ ಶೇರ್ ಮಾಡಿದ್ದರು. ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಪ್ರೀತಿ ಗಾಂಧಿ, ನವೀನ್ ಕುಮಾರ್ ಜಿಂದಾಲ್, ಗೌರವ್ ಗೋಯೆಲ್ ಮುಂತಾದವರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು.
















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ