ಸೌದಿ ಅರೇಬಿಯಾ: ಜುಬೈಲ್ ನಲ್ಲಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕಣ್ಣಂಗಾರ್ ನಿವಾಸಿ ಹಸನ್ ಎಂಬುವವರು ತಾ: ಅಕ್ಟೋಬರ್ 1 ರಂದು ಹೃದಯಾಘಾತದಿಂದ ನಿಧನರಾಗಿದ್ದರು . ಇವರು ಉತ್ತಮ ಸ್ವಭಾವದ ವ್ಯಕ್ತಿ ಹಾಗು ಕೊಡುಗೈ ದಾನಿಯೂ ಆಗಿದ್ದರು. ಇವರ ಅಕಾಲಿಕ ನಿಧನವು ತುಂಬಲಾರದ ನಷ್ಟವಾಗಿದೆ. ಅವರ ಪಾರತ್ರಿಕ ಜೀವನವು ಉತ್ತಮವಾಗಿರಲೆಂದು ಅಲ್ಲಾಹನಲ್ಲಿ ಪ್ರಾರ್ಥಿಸುತ್ತ ಕೆ.ಸಿ.ಎಫ್ ದಮ್ಮಾಮ್ ಝೋನ್ ಸಮಿತಿಯ ವತಿಯಿಂದ ಸಂತಾಪವನ್ನು ಸೂಚಿಸಿದೆ.
ಮೃತರು ತಂದೆ, ತಾಯಿ ಹೆಂಡತಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮರಣೋತ್ತರ ಕ್ರಿಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಕೂಡಲೆ ಸ್ಪಂದಿಸಿ ಕಾರ್ಯ ಪ್ರವೃತ್ತರಾದ ಕೆ.ಸಿ.ಎಫ್ ಸಾಂತ್ವನ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳ ನಾಯಕರ ತಂಡವು ಭಾರತೀಯ ರಾಯಬಾರಿ ಕಛೇರಿ ಮತ್ತು ಇತರ ದಾಖಲೆ ಪತ್ರಗಳನ್ನು ಸರಿಪಡಿಸಿ ತಾ: ಅಕ್ಟೋಬರ್ 11 ರಂದು ಜುಬೈಲ್ ನಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು.
ಈ ಒಂದು ಕಾರ್ಯದಲ್ಲಿ ಸಹಕರಿಸಿದ ಕೆ.ಸಿ.ಎಫ್ ಸಾಂತ್ವನ ತಂಡದ ನಾಯಕರಾದ ಬಾಷಾ ಗಂಗಾವಳಿ, ಜುಬೈಲ್ ಕೆ.ಸಿ.ಎಫ್ ನಾಯಕರಾದ ನೌಫಲ್ ಮುಲ್ಕಿ, ಹಮೀದ್ ಕೃಷ್ಣಾಪುರ, ಕಲಂದರ್ ಮುಕ್ಕ, ರಾಝಿಕ್ ಕಣ್ಣಂಗಾರ್ ಅದೇ ರೀತಿ ಉದ್ಯಮಿಗಳಾದ ಆಸಿಫ್ ಎಕ್ಸ್ಪರ್ಟೈಸ್, ಅಬ್ದುರ್ರಹ್ಮಾನ್ ಫೇಸ್,ಇಬ್ಬ ಬಜ್ಪೆ, ಬಷೀರ್ ಕಣ್ಣಂಗಾರ್ ಮತ್ತು ಅಬ್ದುಲ್ ಅಝೀಝ್ ಇವರುಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಮೃತರ ಕುಟುಂಬದವರು, ಗೆಳೆಯರು ಉಪಸ್ಥಿತರಿದ್ದು ಕೆ.ಸಿ.ಎಫ್ ಶೋಲ ಸೆಕ್ಟರ್ ಜುಬೈಲ್ ಇದರ ಅಧ್ಯಕ್ಷರಾದ MKM ಅಬೂಬಕ್ಕರ್ ಮದನಿ ಹೊಸಂಗಡಿ ಇವರ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಿ ಮೃತರಿಗಾಗಿ ದುಆ ಮಾಡಲಾಯಿತು.

















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು