ನಿಗದಿತ ದರ್ಸ್ ಕಿತಾಬ್‌ಗಳನ್ನು ಓದಿ, ಸಂದರ್ಶನದಲ್ಲಿ ತೇರ್ಗಡೆಯಾದ ವಿದ್ವಾಂಸರಿಗೆ ಪ್ರವೇಶ ನೀಡುವ ಸಂಸ್ಥೆ ಇದಾಗಿದ್ದು ಹಗಲು ಹೊತ್ತಿನಲ್ಲಿ ಬಂದು ಕಲಿತು ಹೋಗುವ ಸ್ಥಳೀಯ ಉಲಮಾಗಳಿಗೆ ವಿಶೇಷ ಪಠ್ಯ ವ್ಯವಸ್ಥೆ ಅಳವಡಿಸಿ ಕೊಳ್ಳಲಾಗಿದೆ. ಕಳೆದ ಇಪ್ಪತ್ತೊಂದು ವರ್ಷಗಳಿಂದ ತಲಪಾಡಿ ಬಿಲಾಲ್ ಜುಮಾ ಮಸ್ಜಿದ್‌ನಲ್ಲಿ ಮುದರ್ರಿಸ್ ಹಾಗೂ ಖತೀಬ್ ಆಗಿ ಸೇವೆಗೈಯ್ಯುತ್ತಿರುವ
ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಅವರು ಪ್ರಾಂಶುಪಾಲರಾಗಿ ಸಂಸ್ಥೆಗೆ ನೇತೃತ್ವ ಕೊಡುತ್ತಿದ್ದು, ಪ್ರಮುಖ ವಿದ್ವಾಂಸರಾದ ಹಾಫಿಝ್ ಮುಹಮ್ಮದ್ ವಹೀದ್ ನಈಮಿ ಕಾಮಿಲ್ ಸಖಾಫಿ ಅಜ್ಮೀರ್, ಮೌಲಾನಾ ಖಾರಿ ಅಹ್ಮದ್ ರಝಾ ಖಾನ್ ಮರ್ಕಝಿ ಉತ್ತರ ಪ್ರದೇಶ, ಮುಹಮ್ಮದ್ ಬಶೀರ್ ಅಹ್ಸನಿ ತೋಡಾರ್, ಜಾಬಿರ್ ಹಸನ್ ಫಾಳಿಲಿ ಉಳ್ಳಾಲ ಮುಂತಾದವರು ವಿವಿಧ ವಿಷಯಗಳ ಮುದರ್ರಿಸರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಲಪಾಡಿ ಸಂಯುಕ್ತ ಜಮಾಅತ್ ಸಹಾಯಕ ಖಾಝಿ, ರಾಜ್ಯ ಸುನ್ನೀ ಕೋ ಆರ್ಡಿನೇಷನ್ ಸಮಿತಿಯ ಅಧ್ಯಕ್ಷ ಕೆಪಿ ಹುಸೈನ್ ಸಅದಿ ಕೆಸಿ ರೋಡ್ ಮುಖ್ಯ ಭಾಷಣ ಮಾಡಿದರು.
ಸಮಾರಂಭದಲ್ಲಿ ಸ್ಥಳೀಯ ಜಮಾಅತ್ ಅಧ್ಯಕ್ಷ ಯಾಕೂಬ್ ಪೂಮಣ್ಣು ಅಧ್ಯಕ್ಷತೆ ವಹಿಸಿದರು.
ಪ್ರಮುಖ ವಿದ್ವಾಂಸರೂ ಪ್ರಸಿದ್ಧ ಕವಿಯೂ ಆಗಿದ್ದ ಖಾಝಿ ಬಾಪಕುಂಞಿ ಮುಸ್ಲಿಯಾರ್ ಅವರು ತಲಪಾಡಿ ಬಿಲಾಲ್ ಜುಮಾ ಮಸೀದಿಯ ಸಮೀಪದಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿದ್ದು ಅವರ ಸ್ಮರಣಾರ್ಥ ಸಂಸ್ಥೆಯ ಹೆಸರಿಗೆ ‘ಖಾಝಿ ಬಾಪಕುಂಞಿ ಮುಸ್ಲಿಯಾರ್ ಅಕಾಡೆಮಿ’ ಎಂದು ಸೇರಿಸಲಾಗಿದೆ.
ಸಮಾರಂಭದಲ್ಲಿ ಸಂಸ್ಥೆಯ ಪ್ರಿನ್ಸಿಪಾಲ್ ಡಾ. ಅಬ್ದುಲ್ ರಶೀದ್ ಝೈನೀ ಸ್ವಾಗತಿಸಿದರು.


















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ