janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾತ್ ಸಹಾಯ್ ಹಾಗೂ ಟೀಂ ಇಸಾಬಾ ತುರ್ತು ಸೇವಾ ತಂಡ sys, ssf, kcf ಬಜಪೆ ವತಿಯಿಂದ ಕೊರೊನಾ ವಾರಿಯರ್ಸ್ ಆದ ಆಶಾ ಕಾರ್ಯಕರ್ತೆಯರಿಗೆ ಹಾಗೂ ಸಂಕಷ್ಟದಲ್ಲಿರುವ ಅರ್ಹ 115 ಕುಟುಂಬಗಳಿಗೆ (ಅಂದಾಜು ರೂಪಾಯಿ 1,65,000 ಮೌಲ್ಯದ ) 2ನೇ ಹಂತದ ರೇಶನ್ ಕಿಟ್ (ದಿನಸಿ ಸಾಮಾನು ) ವಿತರಣಾ ಕಾರ್ಯಕ್ರಮ ಹಾಗೂ ಸರಕಾರಿ ವೈದ್ಯರಿಗೆ ಗೌರವಾರ್ಪಣೆ 05-07-2021 ಬೆಳಿಗ್ಗೆ 10:00 ಗಂಟೆಗೆ ಅನ್ಸಾರ್ ಶಾಲಾ ಸಭಾಭವನ, ಬಜ್ಪೆ :ಅಬ್ದುಲ್ ರಹೀಮ್ ಮುಸ್ಲಿಯಾರ್ (ಅಧ್ಯಕ್ಷರು sys ಬಜಪೆ ಸೆಂಟರ್ ) ಇವರ ಅಧ್ಯಕ್ಷ ತೆಯಲ್ಲಿ ದುಆ ಮೂಲಕ ಚಾಲನೆ ನೀಡಿದರು. ಅಹ್ಮದ್ ಹುಸೇನ್ ಶಾಫಿ (ಡೈರೆಕ್ಟರ್ ಸಹಾಯ್ ಬಜ್ಪೆ ಸೆಂಟರ್) ಸ್ವಾಗತಿಸಿದರು.ಉದ್ಘಾಟನೆಯನ್ನು ಮನ್ಸೂರ್ ಸಾಅದಿ (ಖತೀಬರು ಜುಮಾ ಮಸ್ಜಿದ್ ಜರಿ ನಗರ,ಬಜ್ಪೆ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಶ್ರಫ್ ಕಿನಾರ ಮಂಗಳೂರು ( ಸಹಾಯ್ ರಾಜ್ಯ ಕೋ ಆರ್ಡಿನೇಟರ್ ಕರ್ಣಾಟಕ ಮುಸ್ಲಿಮ್ ಜಮಾಅತ್) ಮಾತಾಡಿ ಲಾಕ್ ಡೌನ್ ಅನ್ ಲಾಕ್ ಆಗಿದೆ ಎಂದು ಸಂತೋಷ ಪಟ್ಟು ಓಡಾಡಬೇಡಿ ಆರಂಬಕ್ಕಿಂತ ದಿನಾ ಹದಿನೈದರಷ್ಷು ಸಾವುಗಳು ಸಂಭವಿಸುತ್ತಿವೆ.ಮುಂಜಾಗ್ರತಾ ಕ್ರಮ ಅಗತ್ಯ ಎಂದು ತಿಳಿಸಿದರು.

ವೇದಿಕೆಯಲ್ಲಿ:ಇಸ್ಮಾಯಿಲ್ ಜಾವಳೆ ಅದ್ಯಕ್ಷರು ಕೇಂದ್ರ ಜುಮಾ ಮಸೀದಿ ಬಜ್ಪೆ,, ಹಾಜಿ ಬದ್ರದ್ಧೀನ್ ಜರಿ ಅದ್ಯಕ್ಷರು,mjm ಇಸ್ಲಾಮಿಕ್ ಯಜುಕೇಶನ್ ಸೆಂಟರ್ ಈದ್ಗಾ ಬಜ್ಪೆ, ನಝೀರ್ ಕಿನ್ನಿಪದವು ಸದಸ್ಯರು ಅಲ್ ಹುದಾ ಜುಮಾ ಮಸೀದಿ ಕಿನ್ನಿಪದವು, ಅಬ್ದುಲ್ ಕಾದರ್ ಜರಿ (ಅದ್ಯಕ್ಷರು ಜರಿನಗರ ಜುಮಾ ಮಸ್ಜಿದ್)ಹನೀಫ್ ಹಿಲ್ಟಾಪ್, ಭಾಗವಹಿಸಿ ಕೊನೆಯಲ್ಲಿ ಡಾ// ಶ0ಕರ್ ನಾಯಕ್(ವೈದ್ಯಧಿಕಾರಿ ಸರಕಾರಿ ಪ್ರಾಥಮಿಕ ಆಸ್ಪತ್ರೆ ಬಜ್ಪೆ) ರವರು ಸನ್ಮಾನಿಸಲಾಯಿತು.ಸ್ವಾಲಿಹ್ ಕೊಲಂಬೆ(ಡೈರೆಕ್ಟರ್ ಸಾಹಾಯ್ ಬಜ್ಪೆ ಸೆಂಟರ್) ಧನ್ಯವಾದ ಮಾಡಿದರು

error: Content is protected !! Not allowed copy content from janadhvani.com