ಮುಂಬಯಿ: ತಾವು ಯೆಮನ್ನಲ್ಲಿ ಜನಿಸಿದ್ದು ಎಂಬ ಗುಟ್ಟನ್ನು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆಗಿನ ತಮ್ಮ ಸಂಬಂಧಕ್ಕೆ ಐತಿಹಾಸಿಕ ನಂಟು ಇದೆ ಎಂದು ಹೇಳಿಕೊಂಡಿದ್ದಾರೆ.
ಕತಾರ್ ಎಕನಾಮಿಕ್ ಫೋರಂನ ಸಂವಾದದಲ್ಲಿ ಮಾತನಾಡಿದ ಮುಕೇಶ್, “ನಿನ್ನ ಮೈಯಲ್ಲಿಅರೇಬಿಕ್ ರಕ್ತ ಹರಿಯುತ್ತಿದೆ ಎಂದು ನನ್ನ ತಂದೆ ಹೇಳುತ್ತಿದ್ದರು. ನಾನು ಜನಿಸಿದ್ದು ಯೆಮನ್ನಲ್ಲಿ. ಬಹುಶಃ ನನ್ನ ಹೆತ್ತವರು ಇಲ್ಲಿಗೆ ಪ್ರವಾಸ ಬಂದಿದ್ದಾಗ ನಾನು ಜನಿಸಿರಬಹುದು” ಎಂದು ಹೇಳಿದ್ದಾರೆ.
“ನನ್ನ ಕುಟುಂಬ ಕತಾರ್ ಜತೆ ಉತ್ತಮ ಬಾಂಧವ್ಯ ಹೊಂದಿದೆ. ಕತಾರ್ ರಾಜಮನೆತನದ ಬಗ್ಗೆ ನಮಗೆ ಹೆಮ್ಮೆ ಇದೆ. ಕ್ರೀಡೆ ಹಾಗೂ ಸಂಸ್ಕೃತಿಯಲ್ಲಿ ಕತಾರ್ ಮಾಡಿದ ಸಾಧನೆಗೆ ನನ್ನ ಪತ್ನಿ ಅಭಿಮಾನಿಯೇ ಆಗಿದ್ದಾಳೆ. ನನ್ನ ಮಗಳು ಸಹ ಕತಾರ್ ಫೌಂಡೇಷನ್ ಸಾಧನೆ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾಳೆ. ನಮ್ಮ ಇಡೀ ಕುಟುಂಬವೇ ಕತಾರ್ ಫೌಂಡೇಷನ್ ಹಾಗೂ ರಾಜಮನೆತನದ ಬಗ್ಗೆ ಹೆಮ್ಮೆಪಡುತ್ತದೆ” ಎಂದು ತಿಳಿಸಿದ್ದಾರೆ.
“ಅಷ್ಟೇ ಅಲ್ಲ, ಅರೇಬಿಕ್ ದೇಶಗಳ ಜತೆ ಭಾರತದ ಸಂಬಂಧ ಶತಮಾನಗಳಿಂದಲೂ ಉತ್ತಮವಾಗಿದೆ.
ಕತಾರ್ನಲ್ಲಿಯೇ ಸುಮಾರು ಏಳು ಲಕ್ಷ ಭಾರತೀಯರು ಇದ್ದಾರೆ. ಅವರೆಲ್ಲರೂ ಭಾರತಕ್ಕೆ ಕತಾರ್ ವಕ್ತಾರರಿದ್ದಂತೆ” ಎಂದು ತಿಳಿಸಿದ್ದಾರೆ.
ಡಿಜಿಟಲ್ ಪ್ರಾಮುಖ್ಯ ಕುರಿತು ಮಾತನಾಡಿದ ರಿಲಯನ್ಸ್ ಮುಖ್ಯಸ್ಥ, ”ಮನುಷ್ಯನಿಗೆ ಆಹಾರ, ಬಟ್ಟೆ, ವಸತಿಯಂತೆಯೇ ಸಂಪರ್ಕ ಹಾಗೂ ಸಂವಹನವೂ ಮೂಲಭೂತ ಅವಶ್ಯಕತೆಗಳಾಗಿವೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಡಿಜಿಟಲ್ ಮೂಲಸೌಕರ್ಯದ ಮಹತ್ವದ ಮನವರಿಕೆಯಾಗಿದೆ,” ಎಂದು ಹೇಳಿದ್ದಾರೆ
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ