janadhvani

Kannada Online News Paper

ರಾಜ್ಯದಲ್ಲಿ ಶಾಲೆಗಳ ಪುನರಾರಂಭ: ನಾಳೆ ಶಿಕ್ಷಣ ಸಚಿವರಿಂದ ಮಹತ್ವದ ಸಭೆ

ಬೆಂಗಳೂರು,ಜೂನ್.27: ಕೊರೋನಾ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಶಾಲಾ-ಕಾಲೇಜು ಗಳನ್ನೂ ಮುಚ್ಚಲಾಗಿದೆ. ಹೀಗಾಗಿ ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೆ.ಆರ್.ಸರ್ಕಲ್ ನಲ್ಲಿರುವ ಸರ್ವ ಶಿಕ್ಷಣ ಅಭಿಯಾನ ‌ಕಚೇರಿಯಲ್ಲಿ ನಾಳೆ ಅಧಿಕಾರಿ ಗಳ ಜೊತೆ ವಿಡಿಯೋ ಕಾನ್ಪೆರೆನ್ಸ್ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿ, ಸಿಇಒ ಹಾಗೂ ಡಿಡಿಪಿಐ ಗಳು ಇರಲಿದ್ದಾರೆ ಎನ್ನಲಾಗುತ್ತಿದೆ.

ಈ ಸಭೆಯಲ್ಲಿ ಬೇರೆ ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ಪ್ರಮುಖವಾಗಿ ಶಾಲೆ ಓಪನ್ ಮಾಡಲು ಏನೆಲ್ಲಾ ಕ್ರಮ ತೆಗೆದುಕೊಂಡಿದ್ದಾರೆ? ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲೂ ಶಾಲೆ ಓಪನ್ಮಾ ಡಬಹುದಾ? ಶಾಲೆ ಓಪನ್ ಮಾಡಿದ್ರು, ಭೌತಿಕ ತರಗತಿಗಳು ನಡೆಸುವುದು ಸೂಕ್ತವೇ?

ಪಾಸಿಟಿವಿಟಿ ರೇಟ್ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಬಹುದೇ? ಅಥವಾ ಮೊದಲಿಗೆ ವಿದ್ಯಾಗಮ , ಹಾಗೂ ಪಾಳಿಪದ್ಧತಿಯಲ್ಲಿ ಶಾಲೆ ಆರಂಭಿಸಬಹುದೇ? ಎಂಬ ಬಗ್ಗೆ ಚರ್ಚೆಯಾಗಲಿದೆ.

ಅಲ್ಲದೆ, SSLC ಪರೀಕ್ಷೆಯನ್ನು ಜುಲೈ ಮೂರನೇ ವಾರದಲ್ಲಿ ನಡೆಸಲು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಪರೀಕ್ಷಾ ಕೇಂದ್ರಗಳ ಪೂರ್ವ ಪರಿಶೀಲನೆ ಕುರಿತು ಸಚಿವರು ಸಭೆಯಲ್ಲಿ ಚರ್ಚೆ ಜರುಗಲಿದ್ದು, ಸಭೆ ಬಳಿಕ SSLC ಪರೀಕ್ಷಾ ದಿನಾಂಕ ಹಾಗೂ ಭೌತಿಕ ತರಗತಿಗಳ ಪ್ರಾರಂಭಿಸುವ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬೇರೆ ರಾಜ್ಯಗಳಲ್ಲಿ ಶಾಲೆಗಳು ಆರಂಭವಾಗಿವೆಯೇ?

ಕರ್ನಾಟಕ ಹೊರತು ಪಡಿಸಿ ಬೇರೆ ಯಾವ ರಾಜ್ಯಗಳಲ್ಲಿ ಶಾಲೆ ತೆರೆಯಲು ಮುಂದಾಗಿವೆ.ಶಾಲಾ ಕಾಲೇಜು ಓಪನ್ ಮಾಡಲು ಸಿದ್ಧತೆ ಮಾಡಿಕೊಂಡಿರುವ ರಾಜ್ಯಗಳ ಪೈಕಿ ಬಿಹಾರ, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ತಮಿಳುನಾಡು ರಾಜ್ಯಗಳಲ್ಲಿ ಜುಲೈ ನಿಂದ ಉನ್ನತ ಶಿಕ್ಷಣವೂ ಎಂದಿನಂತೆ ಪ್ರಾರಂಭವಾಗುವ ಸಾಧ್ಯತೆ ಇದೆ.

ಹಿಮಾಚಲ ಪ್ರದೇಶ- ವೈದ್ಯಕೀಯ, ಆಯುರ್ವೇದ ಹಾಗೂ ದಂತ ವೈದ್ಯಕೀಯ ಕಾಲೇಜುಗಳು ಪ್ರಾರಂಭವಾಗಿದ್ದು, ತೆಲಂಗಾಣ- ಜುಲೈ 1 ರಿಂದ ಶಾಲಾ ಕಾಲೇಜು ಪ್ರಾರಂಭ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿಗಳು ಪ್ರಾರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ದೆಹಲಿ-ಶಾಲೆ ಪ್ರಾರಂಭಕ್ಕೆ ದೆಹಲಿ ಸರ್ಕಾರ ಸಧ್ಯ ತಟಸ್ಥವಾಗಿದೆ. ತಮಿಳುನಾಡು- ಸಧ್ಯ ಶಾಲೆ ಓಪನ್ ಮಾಡಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹರಿಯಾಣ- ಶಾಲೆ ತೆರೆಯುವ ಕುರಿತು ಯಾವುದೇ ನಿರ್ಧಾರ ಇಲ್ಲ. ಆದರೆ, ಆನ್ ಲೈನ್ ಕ್ಲಾಸ್ ಮುಂದುವರಿಕೆ.

ಮಹಾರಾಷ್ಟ್ರ-ಜುಲೈ ನಿಂದ ಭೌತಿಕ ತರಗತಿಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರ- ಕೋವಿಡ್ ಪರಿಸ್ಥಿತಿ ಮೇಲೆ ಶಾಲಾ ಕಾಲೇಜು ಓಪನ್ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

# ಕೇರಳ- ಸಾರ್ವಜನಿಕ ಪರೀಕ್ಷೆ ನಡೆಸಲು ಅನುಮತಿ. ಆದರೆ, ಭೌತಿಕ ತರಗತಿಗಳ ಪ್ರಾರಂಭಕ್ಕೆ ಸರ್ಕಾರ ಇನ್ನೂ ‌ನಿರ್ಧಾರ ತೆಗೆದುಕೊಂಡಿಲ್ಲ.

error: Content is protected !! Not allowed copy content from janadhvani.com