ಬಾವಾ ಹಾಜಿ ಮಂಗಳೂರು ಈ ಹೆಸರು ಕೇಳದವರು ಬಹಳ ವಿರಳವಾಗಿದೆ. ಉಮರಾ ನೇತಾರರು ಎಂದು ಹೇಳುವಾಗ ತಕ್ಷಣ ನೆನಪಿಗೆ ಬರುವ ಹೆಸರುಗಳಲ್ಲಿ ಒಂದಾಗಿದೆ ಈ ಹೆಸರು.
ಸಮಾಜಕ್ಕಾಗಿ ತನ್ನೆಲ್ಲವನ್ನೂ ಸಮರ್ಪಣೆಮಾಡಿದ ವ್ಯಕ್ತಿತ್ವವಾಗಿದೆ ಇವರದ್ದು. ಆಲಿಮ್ ಗಳೆಂದರೆ ಇವರಿಗೆ ಅಪ್ಪಟ ಗೌರವ, ತಾಜುಲ್ ಉಲಮಾ, ನೂರುಲ್ ಉಲಮಾ, ಸುಲ್ತಾನುಲ್ ಉಲಮಾ, ತಾಜುಲ್ ಫುಖಹಾಅ್, ಶರಫುಲ್ ಉಲಮಾ, ತಾಜುಶ್ಶರಿಯ್ಯಾ ಹೀಗೆ ಎಲ್ಲಾ ಉಲಮಾರೊಂದಿಗೆ ಇವರಿಗೆ ಉತ್ತಮ ಸಂಬಂಧವಿತ್ತು.
ಉತ್ತಮ ಲೇಖಕರಾಗಿದ್ದ ಇವರು ಅಲ್-ಅನ್ಸಾರ್, ಮೊಇಲಾಂಜಿಗಳಂತಹ ಪತ್ರಿಕೆಗಳಿಗೆ ಜೀವ ನೀಡುವ ಮೂಲಕ ಅದೆಷ್ಟೋ ಮನಸ್ಸುಗಳನ್ನು ಸನ್ಮಾರ್ಗಕ್ಕೆ ತರುವಲ್ಲಿ ಯಶಸ್ವಿಯಾದರು. ದಾನ ಧರ್ಮಗಳಲ್ಲಿ ಇವರು ಎಂದೂ ಮುಂಚೂಣಿಯಲ್ಲಿದ್ದರು ಎಂದು ಮಾತ್ರವಲ್ಲದೆ ಅವರು ಬಲಗೈ ಯಿಂದ ನೀಡಿದ ದಾನ ಎಡ ಗೈಗೆ ತಿಳಿಯುತ್ತಿರಲಿಲ್ಲ.
ಇಂತಹ ವ್ಯಕ್ತಿತ್ವವನ್ನು ಕಳೆದುಕೊಂಡು ಕರುನಾಡು ಇಂದು ಕತ್ತಲೆಯಲ್ಲಿ ಮುಲುಗಿದಂತಾಗಿದೆ ಎಂದು ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರಾಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ಸಂತಾಪ ವ್ಯಕ್ತಪಡಿಸಿದರು.
















ಇನ್ನಷ್ಟು ಸುದ್ದಿಗಳು
ಸೌದಿ ವೀಸಾ ಸ್ಟಾಂಪಿಂಗ್ಗೆ ಕರಾವಳಿಗರ ಪರದಾಟ: ಮಂಗಳೂರಿನಲ್ಲಿ VFS ಕೇಂದ್ರ ಸ್ಥಾಪನೆಗೆ ಆಗ್ರಹ
ಪುತ್ತೂರು ಅಶ್ರಫ್ ಕಲ್ಲೇಗರಿಗೆ ಐದು ಲಕ್ಷ ಬಾಂಡ್ ಮುಚ್ಚಳಿಕೆ ಕೋರಿ ನೋಟೀಸು ಆಘಾತಕಾರಿ ಮುನೀರ್ ಕಾಟಿಪಳ್ಳ
ಪೆನ್ನು ಹಿಡಿಯುವ ಕೈಗಳು ಗಾಂಜಾ, ಚೂರಿ ಹಿಡಿಯುತ್ತಿದೆ: ಪೋಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು-ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್
ದಕ ಜಿಲ್ಲಾ ವಕ್ಪ್ ನಿಂದ ಶಾಸಕ ಐವನ್ ಡಿ ಸೋಜ ರಿಗೆ ಅಭಿನಂದನಾ ಸಮಾರಂಭ
ಭಾರಿ ಮಳೆ: ದ.ಕ ಜಿಲ್ಲಾ ಶಾಲೆಗಳಿಗೆ ನಾಳೆ ರಜೆ- ಜಿಲ್ಲಾಧಿಕಾರಿ ಘೋಷಣೆ
ಜಾತಿ ಮದ್ಯೆ ವೀಷ ಬೀಜ ಬಿತ್ತುತ್ತಿರುವ ಶಾಸಕನನ್ನು ಕೇಸು ದಾಖಲಿಸಿ ಕೂಡಲೇ ಬಂದಿಸಬೇಕು ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಮಿಷನರ್ ಗೆ ದೂರು
ಸುಮೊಟೊ ದುರ್ಬಳಕೆಯಾಗುತ್ತಿರುವ ಆತಂಕವಿದೆ- ಎಸ್ಸೆಸ್ಸೆಫ್
ಕಾಣಿಯೂರು ಹಲ್ಲೆ ಪ್ರಕರಣ: ಯು.ಟಿ ಖಾದರ್ ಖಂಡನೆ- ಗೃಹ ಸಚಿವರೊಂದಿಗೆ ಮಾತುಕತೆ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಮೊಬೈಲ್ ನಂಬರ್ ಹ್ಯಾಕ್
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್