ಮುಡಿಪು:ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ಆಯೋಜಿಸಿದ ESPOLEAR ಕ್ಯಾಂಪ್ ಡಿವಿಶನ್ ಅಧ್ಯಕ್ಷರಾದ ಮನ್ಸೂರ್ ಹಿಮಮಿಯವರ ನೇತೃತ್ವದಲ್ಲಿ ಮೋಂಟುಗೋಳಿಯಲ್ಲಿ ಯಶಸ್ವಿಯಾಗಿ ಜರಗಿತು.
ಗೌಸಿಯಾ ಜುಮಾ ಮಸ್ಜಿದ್ ಮೋಂಟುಗೋಳಿ ಖತೀಬರಾದ ಸಲೀಮ್ ಸಹದಿ ಹೊನ್ನಾವರ ದುಆದೊಂದಿಗೆ ಮಸ್ಜಿದ್ ಅಧ್ಯಕ್ಷರಾದ ಸುಲೈಮಾನ್ ರವರು ಧ್ವಜಾರೋಹಣಗೈದರು.
SYS ಕರ್ನಾಟಕ ರಾಜ್ಯಾಧ್ಯಕ್ಷರಾದ ಉಸ್ಮಾನ್ ಸಅದಿ ಪಟ್ಟೋರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ನಂತರ ಎಸ್ಸೆಸ್ಸೆಫ್‌ನ ಗತಕಾಲದ ಚರಿತ್ರೆ , ನಾಯಕತ್ವ ಹಾಗೂ ತರ್ಬಿಯ ಎಂಬ ಮೂರು ವಿಷಯಗಳಲ್ಲಿ ಕ್ರಮವಾಗಿ ಕರ್ನಾಟಕ ಎಸ್.ವೈ.ಎಸ್ ನಾಯಕರಾದ ಜಿ.ಎಮ್ ಖಾಮಿಲ್ ಸಖಾಫಿ , ಕೇರಳ ಎಸ್.ವೈ.ಎಸ್ ನಾಯಕರಾದ ಅಬ್ದುಲ್ ಕಲಾಂ ಮಾಸ್ಟರ್ ಮಾವೂರು ಹಾಗೂ ರಶೀದ್ ಮಾಸ್ಟರ್ ನರಿಕ್ಕೋಡು ತರಗತಿಯನ್ನು ನಡೆಸಿದರು.
ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಸದಸ್ಯರಾದ ಕೆ.ಎಮ್ ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ , ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ , ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ಮುನೀರ್ ಸಖಾಫಿ ಉಳ್ಳಾಲ, ಕಾರ್ಯದರ್ಶಿ ಇಬ್ರಾಹಿಮ್ ಅಹ್ಸನಿ ಮಂಜನಾಡಿ, ಅಲ್ ಮದೀನಾ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಮೊದಲಾದವರು ಆಶಂಸ ಭಾಷಣ ಮಾಡಿದರು.
ದ.ಕ. ವೆಸ್ಟ್ ಜಿಲ್ಲೆ ಪ್ರ. ಕಾರ್ಯದರ್ಶಿ ಹೈದರಲಿ ಕಾಟಿಪಳ್ಳ, ಕೋಶಾಧಿಕಾರಿ ಇಕ್ಬಾಲ್ ಮಧ್ಯನಡ್ಕ ಡಿವಿಶನ್ ಉಸ್ತುವಾರಿ ಆಬಿದ್ ನಈಮಿ, ಸಾಮಣಿಗೆ ಮಹಮ್ಮದ್ ಮದನಿ, ಶರೀಫ್ ಮುಡಿಪು , ಅಝೀಝ್ ಹೆಚ್.ಕಲ್ , ಮಜೀದ್ ಮಂಜನಾಡಿ, ಕ್ಯಾಂಪ್ ಚೇರ್ ಮಾನ್ ಮಸ್ಹೂದ್ ಬಾಹಸನಿ ಹಾಗೂ ಇನ್ನಿತರ ಧಾರ್ಮಿಕ ,ಸಾಮಾಜಿಕ ನಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಕ್ಯಾಂಪ್ ಕನ್ವೀನರ್ ನೌಫಲ್ ಫರೀದ್ ನಗರ ಸ್ವಾಗತಿಸಿದರು.
ಡಿವಿಶನ್ ಪ್ರ.ಕಾರ್ಯದರ್ಶಿ ನೌಷಾದ್ ಮದನಿ ಹೆಚ್.ಕಲ್ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ