ಕರ್ನಾಟಕ ಕಲ್ಚರಲ್ ಫೌಂಡೇಶನ್ ಜಿದ್ದಾ ಝೋನಲ್ ಅಧೀನದಲ್ಲಿ ಮಾರ್ಚ್ 05ರಂದು ಝೂಮ್ ಮೂಲಕ ಆತೂರ್ ಸಅದ್ ಮುಸ್ಲಿಯಾರ್ ರವರ ಅನುಸ್ಮರಣಾ ಕಾರ್ಯಕ್ರಮ ನಡೆಸಲಾಯಿತು.
ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ ಉಸ್ತಾದರ ಮಧ್’ಹ್ ಗಾನದೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್-ಮಶ್’ಹೂರ್ ತಲಕ್ಕಿ ತಂಙಳ್ ರವರು ದುಆ ನೆರವೇರಿಸಿದರು.
ಜಿದ್ದಾ ಝೋನಲ್ ಅಧ್ಯಕ್ಷರಾದ ಜನಾಬ್ ಇಬ್ರಾಹಿಮ್ ಕಿನ್ಯಾ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು SSF ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಸಯ್ಯಿದ್ ಖಾಲಿದ್ ತಂಙಳ್ ರಿಪ್ಪನ್’ಪೇಟೆ ಯವರು ಉದ್ಘಾಟಿಸಿದರು.
ಆತೂರ್ ಸಅದ್ ಉಸ್ತಾದರ ಸಹೋದರರಾದ ಸಿದ್ದೀಕ್ ಸಅದಿ ಆತೂರ್, ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ ಹಾಗೂ ನೌಫಲ್ ಮದನಿ ಆತೂರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ ಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ ಸುರಿಬೈಲ್ ಉಸ್ತಾದರು ಆತೂರ್ ಸಅದ್ ಉಸ್ತಾದರ ಬಾಲ್ಯದಿಂದ ವಫಾತಿನ ವರೆಗಿನ ಕಾರ್ಯಾಚರಣೆಗಳ ಚುಟುಕು ವಿವರಣೆಯನ್ನು ಹೇಳುವ ಮೂಲಕ ಅನುಸ್ಮರಣಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಚ್ಚಿಲ ತಂಙಳ್ ರವರು ಖತಮುಲ್ ಕುರ್’ಆನ್ ಹಾಗೂ ತಹ್’ಲೀಲ್ ಸಮರ್ಪಣೆ ಮಾಡಿ ದುಆ ಮಾಡಲಾಯಿತು.
ಶಂಸುದ್ದೀನ್ ಕುಂತೂರ್ ರವರು ಸ್ವಾಗತ ಹೇಳಿದ ಕಾರ್ಯಕ್ರಮವನ್ನು ಮುಹಮ್ಮದ್ ಕಲ್ಲರ್ಬೆ ಯವರು ನಿರೂಪಣೆ ಮಾಡಿ ಸಿದ್ದೀಕ್ ಹಾಜಿ ಬಾಳೆಹೊನ್ನೂರು ರವರು ಧನ್ಯವಾದ ಹೇಳಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ