janadhvani

Kannada Online News Paper

ರಸ್ತೆ ದುರಸ್ತಿಗೆ ಅಂದು ಪೊಯ್ಯತ್ತಬೈಲ್ ಬೇಡಿಕೆ- ಕೇರಳ ಮುಖ್ಯಮಂತ್ರಿ ಸ್ಪಂದನೆ

ಕಾಸರಗೋಡು,ಫೆ.4:ಇಲ್ಲಿನ ಮಂಜೇಶ್ವರ ವರ್ಕಾಡಿ ಗ್ರಾಮದಲ್ಲಿ ವಾಸವಿರುವ ಅಬ್ದುರ್ರಹ್ಮಾನ್ (ಅಂದು ಪೊಯ್ಯತ್ತಬೈಲ್) ಕಳೆದ 23ವರ್ಷಗಳಿಂದ ನಡೆದಾಡಲು ಸಾಧ್ಯವಾಗದೆ ಹಾಸಿಗೆ ವಶವಾಗಿರುವ ಇವರು ಚಿಕಿತ್ಸೆಗಾಗಿ ತೆರಳುವ ತಮ್ಮ ಊರಿನ ರಸ್ತೆಯ ದುರವಸ್ಥೆ ಬಗ್ಗೆ ಕೇರಳ ಮುಖ್ಯಮಂತ್ರಿಯವರ ಗಮನಕ್ಕೆ ತರುವ ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ವಿಡಿಯೋ ತುಣುಕಿಗೆ ಮುಖ್ಯಮಂತ್ರಿಯರು ಸ್ಪಂದಿಸಿರುವುದಾಗಿ ವರದಿಯಾಗಿದೆ.

ಕೇರಳ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಅವರ ತಮ್ಮ ಕಚೇರಿಗೆ ಮಾಹಿತಿ ನೀಡಿ ಅಲ್ಲಿಂದ ಕೂಡಲೇ ಈ ವಿಚಾರದ ಬಗ್ಗೆ ಸಮಗ್ರ ವಿವರ ಕಲೆ ಹಾಕುವಂತೆ ಮಂಜೇಶ್ವರ CPI(M)ಏರಿಯಾ ಸೆಕ್ರೆಟರಿ ಯವರಿಗೆ ಸೂಚನೆ ನೀಡಿದುದರ ಪ್ರಕಾರ ಮಂಜೇಶ್ವರ CPI(M)ಏರಿಯಾ ಕಾರ್ಯದರ್ಶಿ ಕಾಂಬ್ರೇಡ್ ಕುಞ್ಞಿರಾಮನ್ ಅವರು ಇಂದು ಸಂಜೆ ಅಂದು ಪೊಯ್ಯತ್ತಬೈಲ್ ಅವರ ಮನೆಗೆ ಭೇಟಿ ನೀಡಿ ಅವರ ಅಹವಾಲು ಸ್ವೀಕರಿಸಿದ್ದಾರೆ.

ಅದರಂತೆ ದೈಗೋಳಿ -ಪೊಯ್ಯತ್ತಬೈಲು -ನಂದಾರಪಡ್ಪು ರಸ್ತೆಯ ಶೀಘ್ರ ದುರಸ್ತಿಗಾಗಿ ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಭರವಸೆನೀಡಿದ್ದಾರೆ. ಅಲ್ಲದೇ ಅಂದು ಅವರ ಈಗಿನ ಪರಿಸ್ಥಿತಿ ಹಾಗೂ ಇಂದು ನಡೆದ ಭೇಟಿಯ ಸಂದರ್ಭವನ್ನು ಚಿತ್ರೀಕರಿಸಿದ ವಿಡಿಯೋವನ್ನು ಮುಖ್ಯಮಂತ್ರಿ ಕಚೇರಿಗೆ ರವಾನಿಸಿದ್ದು, ಈ ಬಗ್ಗೆ ಆದಷ್ಟು ಬೇಗ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ CPI(M)ಕಾಸರಗೋಡು ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕಾಂ.ಜಯಾನಂದ, CPI(M) ಮಂಜೇಶ್ವರ ಏರಿಯಾ ಕಮಿಟಿ ಸದಸ್ಯ ಕಾಂ.ಡಿ.ಬೂಬ,ಕುಡ್ಲಮುಗೇರು CPI(M)Local ಕಮಿಟಿ ಸದಸ್ಯರಾದ ಸುಂದರ ಜೋಗಿಬೆಟ್ಟು ಮತ್ತು ರವೀಂದ್ರ ಮಂಡೇಲ್, ಸುಲ್ಯಮೆ ಮುಂತಾದವರು ಜೊತೆಗಿದ್ದರು.

error: Content is protected !! Not allowed copy content from janadhvani.com